Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಲಂಕೇಶ್ ಪತ್ರಿಕೆ ಖ್ಯಾತಿಯ ಹಿರಿಯ ಪತ್ರಕರ್ತ ಟಿ.ಕೆ.ತ್ಯಾಗರಾಜ್ ಅವರ ಪತ್ನಿ ಸರಸ್ವತಿ ಇನ್ನಿಲ್ಲ

04/04/2026 9:51 PM

ರಾಜ್ಯದಲ್ಲಿ 76 ಗ್ರಾಮಗಳಿಗೆ ಟ್ಯಾಂಕರ್, 248 ಗ್ರಾಮಗಳಿಗೆ ಕೊಳವೆಬಾವಿ ಮೂಲಕ ನೀರು ಸರಬರಾಜು: ಸಚಿವ ಪ್ರಿಯಾಂಕ್ ಖರ್ಗೆ

04/04/2026 9:35 PM

ಕೊಪ್ಪಳದಲ್ಲಿ 3 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ CRE ಪೊಲೀಸರು ಲೋಕಾಯುಕ್ತ ಬಲೆಗೆ

04/04/2026 9:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಜೀವನಹಳ್ಳಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ಪಾದಯಾತ್ರೆ: ಕುಡಿಯುವ ನೀರು, ವಸತಿ ಯೋಜನೆಗಳ ಪರಿಶೀಲನೆ
KARNATAKA

ಬೆಂಗಳೂರಿನ ಜೀವನಹಳ್ಳಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ಪಾದಯಾತ್ರೆ: ಕುಡಿಯುವ ನೀರು, ವಸತಿ ಯೋಜನೆಗಳ ಪರಿಶೀಲನೆ

By kannadanewsnow0903/03/2026 9:00 PM

ಬೆಂಗಳೂರು : “ಜನತೆಗೆ ಗೌರವಯುತವಾಗಿ ಜೀವನ ನಡೆಸಲು ಮೂಲಸೌಕರ್ಯ ಕಲ್ಪಿಸುವುದೇ ಜನಪ್ರತಿನಿಧಿಗಳ ಕರ್ತವ್ಯ” ಎಂದು ಸಚಿವ ಕೆ.ಜೆ.ಜಾರ್ಜ್ ಅನಿಸಿಕೆ ವ್ಯಕ್ತಪಡಿಸಿದರು.

ಇಂಧನ ಸಚಿವರು ಹಾಗೂ ಸರ್ವಜ್ಞನಗರ ವಿಧಾನ ಸಭಾ ಕ್ಷೇತ್ರದ ಶಾಸಕರೂ ಆಗಿರುವ ಕೆ.ಜೆ.ಜಾರ್ಜ್ ಮಂಗಳವಾರ ಜೀವನಹಳ್ಳಿ ವ್ಯಾಫ್ತಿಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿದರು. ಕೈಗೊಂಡಿರುವ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ ವೇಗವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುಡಿಯುವ ನೀರು, ವಿದ್ಯುತ್, ರಸ್ತೆ, ವಸತಿ ಯೋಜನೆಗಳು ಮತ್ತು ಸಂಚಾರ ದಟ್ಟಣೆ ನಿರ್ವಹಣೆ ಸಂಬಂಧ ಚರ್ಚೆ ನಡೆಸುತ್ತ ಸ್ಥಳೀಯ ಜನರನ್ನು ಮಾತನಾಡಿಸುತ್ತಾ ಸಚಿವ ಜಾರ್ಜ್ ಅಧಿಕಾರಿಗಳಿಗೆ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳನ್ನು ಪಾದಯಾತ್ರೆ ಮೂಲಕ ಮನವರಿಕೆ ಮಾಡಿಕೊಟ್ಟರು.

ವಸತಿ ಯೋಜನೆಗಳ ಪರಿಶೀಲನೆ

ಜೀವನಹಳ್ಳಿ ವ್ಯಾಪ್ತಿಯಲ್ಲಿ ಅಗಸ ವೃತ್ತಯಲ್ಲಿ ತೊಡಗಿರುವ ಜನರಿಗೆ ಸುಸಜ್ಜಿತವಾದ ವಸತಿ ಸಂಕೀರ್ಣ ನಿರ್ಮಿಸಿದ್ದು, ಅಗತ್ಯ ಸೌಲಭ್ಯಗಳನ್ನು ತುರ್ತಾಗಿ ಸಿದ್ದಪಡಿಸುವಂತೆ ಸೂಚಿಸಿದರು. ಇದೇ ವೇಳೆ ಮುದ್ದಪ್ಪ ಗಾರ್ಡನ್ , ಚೆಟ್ಟಪ್ಪ ಗಾರ್ಡನ್ ಮತ್ತು ಗ್ಯಾಂಗ್‌ಮನ್ ಕ್ವಾಟ್ರರ್ಸ್ನಲ್ಲಿ ನಿರ್ಮಿಸಿರುವ ಮನೆಗಳನ್ನು ಪರಿಶೀಲನೆ ನಡೆಸಿದರು. ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ಕೈಗೊಂಡಿರುವ ಬಹುಮಹಡಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಫೋನ್ ಮೂಲಕ ತಿಳಿಸಿದರು. ಇನ್ನಷ್ಟು ಮನೆಗಳನ್ನು ನಿರ್ಮಿಸಿಕೊಡುವಂತೆ ಕೇಳಿಕೊಂಡ ಮಹಿಳೆಯರಿಗೆ ಸಚಿವರು ಹೊಸದಾಗಿ ಮನೆಗಳನ್ನು ಕಟ್ಟಲಿದ್ದು ಆದ್ಯತೆಯ ಮೇರೆಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

ನಿವಾಸಿಗಳ ಸಂಘಟನೆ ಜೊತೆ ಚರ್ಚೆ

ಕೊಕ್ ಟೌನ್ ನಿವಾಸಿಗಳ ಸಂಘದವರ ಜತೆಗೆ ಸಚಿವ ಜಾರ್ಜ್ ಹೈಸ್ಟ್ರೀಟ್ ಉದ್ಯಾನದಲ್ಲಿ ಸಭೆ ನಡೆಸಿದ ಸಚಿವರು, ನಿವಾಸಿಗಳ ಬೇಡಿಕೆಗಳನ್ನು ಪಡೆದು ಹಳೆಯ ಮತ್ತು ಕೆಟ್ಟಿರುವ ಟ್ರಾನ್ಸ್‌ಫಾರ್ಮರ್‌ಗಳನ್ನುಮಾರ್ಚ್‌ ಅಂತ್ಯದೊಳಗೆ ಬದಲಾಯಿಸಲು ಸೂಚನೆ ನೀಡಿದರು. ಎಂಎಲ್‌ಎ ಅನುದಾನದಲ್ಲಿ ಸಿಸಿಟಿವಿಗಳನ್ನು ಅಳವಡಿಸಿ ಹತ್ತಿರದ ಪೊಲೀಸ್‌ ಠಾಣೆಯಿಂದ ನಿಗಾವಹಿಸುವಂತೆ ಹಾಜರಿದ್ದ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೀವನಹಳ್ಳಿಯಲ್ಲಿ ಕೇಳಚಂದ್ರ ಫೌಂಡೇಷನ್ ವತಿಯಿಂದ ನಡೆಸಲಾಗುತ್ತಿರುವ ಕೌಶಲ್ಯ ಕೇಂದ್ರಕ್ಕೆ ತೆರಳಿದ ಸಚಿವ ಜಾರ್ಜ್, ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಮಾತನಾಡಿಸಿದರು. ಕೌಶಲ್ಯ ಕೇಂದ್ರಕ್ಕೆ ಅಗತ್ಯವಿರುವ ನೆರವನ್ನು ಒದಗಿಸುವುದಾಗಿ ಕೇಂದ್ರದ ಮುಖ್ಯಸ್ಥರಿಗೆ ಭರವಸೆ ನೀಡಿದರು.

ಸತ್ಯನಗರದಲ್ಲಿ ಎಂಬೆಸ್ಸಿ ಗಾಲ್ಫ್ ಲಿಂಕ್ಸ್ ಬ್ಯುಸಿನೆಸ್ ಪಾರ್ಕ್‌ನ ಆರ್ಥಿಕ ಬೆಂಬಲದೊಂದಿಗೆ ನಡೆಸಲಾಗುತ್ತಿರುವ ಅಂಗನವಾಡಿ ಹಾಗೂ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಚಿವ ಕೆ.ಜೆ ಜಾರ್ಜ್ ಮಕ್ಕಳೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.

ರಂಜಾನ್ ಹಬ್ಬಕ್ಕೆ ಶುಭಕೋರಿ, ಆಹಾರ ಕಿಟ್ ವಿತರಣೆ

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕಮ್ಮನಹಳ್ಳಿಯಲ್ಲಿ ರಂಜಾನ್ ಆಚರಣೆಯಲ್ಲಿರುವ ಮುಸ್ಲೀಮರ ಜತೆಗೆ ಮಧ್ಯಾಹ್ನದ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಮುಖಂಡರಾದ ಬಾಬಾ ಅಲಿಖಾನ್ ನೇತೃತ್ವದಲ್ಲಿ ಆಯೋಜಿಸಿದ್ದ ಆಹಾರ ಕಿಟ್ ವಿತರಣೆಯಲ್ಲಿ ಭಾಗವಹಿಸಿ, ನೆರೆದಿದ್ದ ನೂರಾರು ಮಹಿಳೆಯರಿಗೆ ಕಿಟ್‌ಗಳನ್ನು ವಿತರಿಸಿದರು.

ಸಚಿವರೊಂದಿಗೆ ಕ್ಷೇತ್ರದ ಮುಖಂಡರಾದ ರಘು ದೇವರಾಜ್, ಚಕ್ರವರ್ತಿ, ಆಶಾ, ರೂಪ ಮತ್ತು ಸಚಿವರ ವಿಶೇಷಾಧಿಕಾರಿಗಳು, ಜಿಬಿಎ, ಬೆಂಗಳೂರು ಜಲ ಮಂಡಳಿ, ಬೆಸ್ಕಾಂ ಹಾಗೂ ಪೊಲೀಸ್ ಅಧಿಕಾರಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

BREAKING: ಯುದ್ಧಪೀಡಿತ ಪ್ರದೇಶದಿಂದ 2ನೇ ವಿಮಾನದಲ್ಲಿ ತಾಯ್ನಾಡಿಗೆ ಬಂದಿಳಿದ 350 ಕನ್ನಡಿಗರು

‘ಮಗುವಿನ ದೇಹದ ಮೇಲೆ ನಡೆಯುವ ಯಾವುದೇ ರೀತಿಯ ಲೈಂಗಿಕ ಅತಿಕ್ರಮಣ ಅತ್ಯಾಚಾರ’: ಕೇರಳ ಹೈಕೋರ್ಟ್ ಮಹತ್ವದ ತೀರ್ಪು

Share. Facebook Twitter LinkedIn WhatsApp Email

Related Posts

BREAKING: ಲಂಕೇಶ್ ಪತ್ರಿಕೆ ಖ್ಯಾತಿಯ ಹಿರಿಯ ಪತ್ರಕರ್ತ ಟಿ.ಕೆ.ತ್ಯಾಗರಾಜ್ ಅವರ ಪತ್ನಿ ಸರಸ್ವತಿ ಇನ್ನಿಲ್ಲ

04/04/2026 9:51 PM2 Mins Read

ರಾಜ್ಯದಲ್ಲಿ 76 ಗ್ರಾಮಗಳಿಗೆ ಟ್ಯಾಂಕರ್, 248 ಗ್ರಾಮಗಳಿಗೆ ಕೊಳವೆಬಾವಿ ಮೂಲಕ ನೀರು ಸರಬರಾಜು: ಸಚಿವ ಪ್ರಿಯಾಂಕ್ ಖರ್ಗೆ

04/04/2026 9:35 PM2 Mins Read

ಕೊಪ್ಪಳದಲ್ಲಿ 3 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ CRE ಪೊಲೀಸರು ಲೋಕಾಯುಕ್ತ ಬಲೆಗೆ

04/04/2026 9:30 PM1 Min Read
Recent News

BREAKING: ಲಂಕೇಶ್ ಪತ್ರಿಕೆ ಖ್ಯಾತಿಯ ಹಿರಿಯ ಪತ್ರಕರ್ತ ಟಿ.ಕೆ.ತ್ಯಾಗರಾಜ್ ಅವರ ಪತ್ನಿ ಸರಸ್ವತಿ ಇನ್ನಿಲ್ಲ

04/04/2026 9:51 PM

ರಾಜ್ಯದಲ್ಲಿ 76 ಗ್ರಾಮಗಳಿಗೆ ಟ್ಯಾಂಕರ್, 248 ಗ್ರಾಮಗಳಿಗೆ ಕೊಳವೆಬಾವಿ ಮೂಲಕ ನೀರು ಸರಬರಾಜು: ಸಚಿವ ಪ್ರಿಯಾಂಕ್ ಖರ್ಗೆ

04/04/2026 9:35 PM

ಕೊಪ್ಪಳದಲ್ಲಿ 3 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ CRE ಪೊಲೀಸರು ಲೋಕಾಯುಕ್ತ ಬಲೆಗೆ

04/04/2026 9:30 PM

ಏಪ್ರಿಲ್.11ಕ್ಕೆ ಬೆಂಗಳೂರಿನಲ್ಲಿ ಜೆಡಿಎಸ್ ಜನತಾ ಸಮಾವೇಶ: 4,000ಕ್ಕೂ ಹೆಚ್ಚು ಕಾರ್ಯಕರ್ತರು ಸಭೆಯಲ್ಲಿ ಭಾಗಿ

04/04/2026 9:06 PM
State News
KARNATAKA

BREAKING: ಲಂಕೇಶ್ ಪತ್ರಿಕೆ ಖ್ಯಾತಿಯ ಹಿರಿಯ ಪತ್ರಕರ್ತ ಟಿ.ಕೆ.ತ್ಯಾಗರಾಜ್ ಅವರ ಪತ್ನಿ ಸರಸ್ವತಿ ಇನ್ನಿಲ್ಲ

By kannadanewsnow0904/04/2026 9:51 PM KARNATAKA 2 Mins Read

ಬೆಂಗಳೂರು: ಲಂಕೇಶ್ ಪತ್ರಿಕೆಯ ಖ್ಯಾತಿಯ, ನೇರ ನಡೆನುಡಿಯ ದಿಟ್ಟ ಪತ್ರಕರ್ತ ಟಿ.ಕೆ. ತ್ಯಾಗರಾಜ್ ಅವರ ಪತ್ನಿ ಶ್ರೀಮತಿ ಸರಸ್ವತಿ (ಸರಸ್ವತಿ…

ರಾಜ್ಯದಲ್ಲಿ 76 ಗ್ರಾಮಗಳಿಗೆ ಟ್ಯಾಂಕರ್, 248 ಗ್ರಾಮಗಳಿಗೆ ಕೊಳವೆಬಾವಿ ಮೂಲಕ ನೀರು ಸರಬರಾಜು: ಸಚಿವ ಪ್ರಿಯಾಂಕ್ ಖರ್ಗೆ

04/04/2026 9:35 PM

ಕೊಪ್ಪಳದಲ್ಲಿ 3 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ CRE ಪೊಲೀಸರು ಲೋಕಾಯುಕ್ತ ಬಲೆಗೆ

04/04/2026 9:30 PM

ಏಪ್ರಿಲ್.11ಕ್ಕೆ ಬೆಂಗಳೂರಿನಲ್ಲಿ ಜೆಡಿಎಸ್ ಜನತಾ ಸಮಾವೇಶ: 4,000ಕ್ಕೂ ಹೆಚ್ಚು ಕಾರ್ಯಕರ್ತರು ಸಭೆಯಲ್ಲಿ ಭಾಗಿ

04/04/2026 9:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.