ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಸಂಸ್ಸೆ, ಅರಳಿಕೊಪ್ಪ, ವಗ್ಗಡೆ ಕಾನೂರು, ಗುಬ್ಬಿಗಾ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಪುಂಡಾನೆ ಸೆರೆಗೆ ಸಚಿವ ಈಶ್ವರ ಖಂಡ್ರೆ ಸೂಚನೆಯಂತೆ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಇತ್ತೀಚೆಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಗೌಡ ಅವರು ಸಂಸ್ಸೆ ಗ್ರಾಮಸ್ಥರ ನಿಯೋಗದೊಂದಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಬೆಳೆಹಾನಿ ಮತ್ತು ಪಂಪ್ ಸೆಟ್ ನಾಶ ಮಾಡುತ್ತಿರುವ ಪುಂಡಾನೆ ಸೆರೆಗೆ ಮನವಿ ಮಾಡಿದ್ದರು.
ಅರಣ್ಯ ಸಿಬ್ಬಂದಿಗೆ ಈ ಆನೆಯನ್ನು ಕಾಡಿಗೆ ಮರಳಿಸಲು ಹಲವು ಪ್ರಯತ್ನ ನಡೆಸಿದ್ದರೂ ಸಾಧ್ಯವಾಗಿರಲಿಲ್ಲ. ಹಗಲು ಹೊತ್ತಿನಲ್ಲೇ ಕಾಡಿನಂಚಿನ ಗ್ರಾಮದ ಮನೆಗಳ ಬಳಿ ಕಾಣಿಸಿಕೊಳ್ಳುತ್ತಿರುವ ಈ ಆನೆಯಿಂದ ಜನರು ಭಯಭೀತರಾಗಿದ್ದು, ಪುಂಡಾನೆ ಸೆರೆಗೆ ತಕ್ಷಣವೇ ಕ್ರಮ ವಹಿಸುವಂತೆ ಅರಣ್ಯ ಸಚಿವರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಇಂದು ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಸೆಕ್ಷನ್ 11(1) (ಎ) ಅನ್ವಯ ಆನೆ ಸೆರೆ ಕಾರ್ಯಾಚರಣೆಗೆ ಆದೇಶ ಹೊರಡಿಸಿದ್ದು, ಮುಂದಿನ ವಾರಾಂತ್ಯದ ವೇಳೆಗೆ ಕಾರ್ಯಾಚರಣೆ ಆರಂಭವಾಗಲಿದೆ.
ಪ್ರಮಾಣಿತ ಕಾರ್ಯವಿಧಾನದಂತೆ ಲಕ್ಷಣ, ಅಜಯ, ಮಾರ್ತಾಂಡ ಹಾಗೂ ಸಕ್ಕರೆ ಬೈಲು ಆನೆ ಶಿಬಿರದ 3 ಆನೆ ಬಳಸಿಕೊಂಡು ಸ್ಥಳೀಯರಿಗೆ ಯಾವುದೇ ಅಪಾಯ ಆಗದ ರೀತಿಯಲ್ಲಿ ಮುಂಜಾಗರೂಕತಾ ಕ್ರಮಗಳೊಂದಿಗೆ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ.
ಅಕ್ಸೆಂಚರ್ ಉದ್ಯೋಗಿಗಳಿಗೆ ಬಿಗ್ ಶಾಕ್: 3 ತಿಂಗಳಲ್ಲಿ 11,000 ಕ್ಕೂ ಹೆಚ್ಚು ಉದ್ಯೋಗ ಕಡಿತ | Accenture Cuts Jobs
ಆರೋಗ್ಯ ಸಂಜೀವಿನಿ ಜಾರಿ: ಸಿಎಂ, ಡಿಸಿಎಂಗೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಧನ್ಯವಾದ