ಬೆಂಗಳೂರು: ಹುಲಿ ದಾಳಿಯಿಂದ ಮೃತಪಟ್ಟ ವಾಚರ್ ಸಣ್ಣ ಹೈದ ಅವರ ಹತ್ತಿರದ ಬಂಧುಗಳಿಗೆ ವಿಮೆ ಪರಿಹಾರ ಮತ್ತು ಇಲಾಖೆ ನೀಡುವ ಪರಿಹಾರ ಇತ್ಯಾದಿ ಸೇರಿ ಒಟ್ಟಾರೆ 45 ಲಕ್ಷ ರೂ. ಪರಿಹಾರ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಬಂಡೀಪುರ ಮರಳಳ್ಳ ಶಿಬಿರದ ಬಳಿ ಹುಲಿ ದಾಳಿಗೆ ಎಪಿಸಿ ವಾಚರ್ ಸಣ್ಣಹೈದ (56) ಮೃತಪಟ್ಟಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ದುಃಖದ ಸಂದರ್ಭದಲ್ಲಿ ಸಣ್ಣ ಹೈದ ಅವರ ಕುಟುಂಬದೊಂದಿಗೆ ಇಲಾಖೆ ಮತ್ತು ಸರ್ಕಾರ ನಿಲ್ಲುತ್ತದೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬದವರಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಪ್ರತಿಯೊಂದು ಜೀವವೂ ಅಮೂಲ್ಯ, ಪರಿಹಾರ ನೀಡುವುದರಿಂದ ಹೋದ ಪ್ರಾಣ ಮರಳಿ ಬರುವುದಿಲ್ಲ ಆದರೂ ಮೃತರ ಕುಟುಂಬಕ್ಕೆ ಆಸರೆಯಾಗಲು, ನಿಯಮಾನುಸಾರ ಮೃತರ ಕುಟುಂಬಕ್ಕೆ 45 ಲಕ್ಷ ಪರಿಹಾರ ಧನ ನೀಡಲಾಗುವುದು. ಅರಣ್ಯ ಇಲಾಖೆಯ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಅರಣ್ಯದೊಳಗೆ ಗಸ್ತು ನಡೆಸುವಾಗ, ಕರ್ತವ್ಯ ನಿರ್ವಹಿಸುವಾಗ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು, ಹೆಚ್ಚು ಎಚ್ಚರದಿಂದ ಇರಬೇಕು ಎಂದು ತಿಳಿಸಿದ್ದಾರೆ.
BREAKING: ತೈವಾನ್‌ನಲ್ಲಿ 7.0 ತೀವ್ರತೆಯಲ್ಲಿ ಪ್ರಬಲ ಭೂಕಂಪ | Earthquake hits Taiwan
KSDL, ಕೃಷಿ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ: ಜನವರಿ.10, 12 ಬದಲಿಗೆ ಜ.18ಕ್ಕೆ ನೇಮಕಾತಿ ಪರೀಕ್ಷೆ








