ಮಡಿಕೇರಿ: ಜಿಲ್ಲೆಯ ಆಂಬುಲೆನ್ಸ್ ಚಾಲಕನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸನ್ಮಾನಿಸಿ ಗೌರವಿಸಿದ್ದಾರೆ. ಅದು ಯಾಕೆ ಅಂತ ಮುಂದೆ ಓದಿ.
ಇಂದು ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ರೋಗಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅಂಬ್ಯುಲೆನ್ಸ ಚಾಲಕ ಕಿಶೋರ್ ಪೂಜಾರಿ ಅವರು ಇತ್ತಿಚೆಗೆ ಗರ್ಭಿಣಿ ಮಹಿಳೆಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.
ಮಡಿಕೇರಿಯಿಂದ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ಗರ್ಭೀಣಿ ಮಹಿಳೆಯೊರ್ವರನ್ನ ಕರೆತರುವಾಗ ಅಂಬ್ಯುಲೆನ್ಸ್ ನ ಚಕ್ರದಲ್ಲಿ ಸಮಸ್ಯೆ ಎದುರಾದರೂ, ಎಚ್ಚರಿಕೆಯಿಂದ ವಾಹನ ಚಲಾಯಿಸಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ತಾಯಿ ಮಗುವಿನ ಜೀವ ಉಳಿಸುವ ಮೂಲಕ ಮಾನವೀಯತೆ ಮೆರೆದ ಚಾಲಕ ಬಿ.ಎಸ್ ವೆಂಕಟೇಶ್ (ಕಿಶೋರ್ ಪೂಜಾರಿ) ಅವರಿಗೆ ನಾನು ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಇಂದು ನಾನು ಕುಶಾಲ ನಗರ ಪ್ರವಾಸದಲ್ಲಿದ್ದ ವೇಳೆ ಆರೋಗ್ಯ ಇಲಾಖೆಯಿಂದ ಚಾಲಕ ಕಿಶೋರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಎಂದು ಹೇಳಿದ್ದಾರೆ.
ರೋಗಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅಂಬ್ಯುಲೆನ್ಸ ಚಾಲಕ ಕಿಶೋರ್ ಪೂಜಾರಿ ಅವರು ಇತ್ತಿಚೆಗೆ ಗರ್ಭಿಣಿ ಮಹಿಳೆಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ದ ಕಾರ್ಯ ನಿಜಕ್ಕೂ ಶ್ಲಾಘನೀಯ. ಮಡಿಕೆರೆಯಿಂದ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ಗರ್ಭೀಣಿ ಮಹಿಳೆಯೊರ್ವರನ್ನ ಕರೆತರುವಾಗ ಅಂಬ್ಯುಲೆನ್ಸ್ ನ ಚಕ್ರದಲ್ಲಿ ಸಮಸ್ಯೆ ಎದುರಾದರೂ,… pic.twitter.com/ewVIiMTyfp
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 23, 2025
ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಅ.1ರಿಂದ ನಗದುರಹಿತ ಚಿಕಿತ್ಸೆ ನೀಡುವ ‘ಆರೋಗ್ಯ ಸಂಜೀವಿನಿ ಯೋಜನೆ’ ಜಾರಿ
ಆಂಧ್ರಪ್ರದೇಶದಲ್ಲಿನ ಹೊಸ ಕ್ಯಾಂಪಸ್ ಗೆ 12,000 ಉದ್ಯೋಗಿಗಳನ್ನು ನೇಮಿಸಲು ಸಜ್ಜಾದ ಅಕ್ಸೆಂಚರ್ | Accenture Jobs