ಬೆಂಗಳೂರು : ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಇರುವ ವಿಷಯಗಳಿಗೆ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 21 ಅಂಕ, ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 24 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಹಾಗು ಉಲ್ಲೇಖ (1) ರ ಸರ್ಕಾರಿ ಆದೇಶದಂತೆ 2025-26 ನೇ ಶೈಕ್ಷಣಿಕ ಸಾಲಿನಿಂದ ಪ್ರಾಯೋಗಿಕ ಹಾಗು ಪ್ರಾಯೋಗಿಕವಲ್ಲದ ಪರೀಕ್ಷಾ ವಿಷಯಗಳಿಗೆ ಕನಿಷ್ಠ ಉತ್ತೀರ್ಣ ಶೇಕಡವಾರು ಪ್ರಮಾಣವನ್ನು ನಿಗದಿಪಡಿಸಿ ಸರ್ಕಾರ ಅದೇಶಸಿದೆ. ಅದರಂತೆ ಭಾಷಾ ಮತ್ತು ಐಚಿಕ ವಿಷಯಗಳಿಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಯು ಪ್ರಕಟಿಸಿರುವ ಪಠ್ಯವಸ್ತುವನ್ನು ಆಧರಿಸಿ ಪರೀಕ್ಷೆಗಳನ್ನು ಈ ಕೆಳಕಂಡ ಅಂಶಗಳಂತೆ ನಡೆಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
2025-26ನೇ ಶೈಕ್ಷಣಿಕ ವರ್ಷದಿಂದ ಮನಃಶಾಸ್ತ್ರ (PSYCHOLOGY), ಗಣಕ ವಿಜ್ಞಾನ (COMPUTER SCIENCE) ಮತ್ತು ಗ್ರಹವಿಜ್ಞಾನ (HOME SCIENCE) ವಿಷಯಗಳಿಗೆ ಹೊಸ ಪಠ್ಯಕ್ರಮವನ್ನು ಅಳವಡಿಸಿದ್ದು, ಹೊಸ ವಿದ್ಯಾರ್ಥಿಗಳು (FRESH STUDENTS) ಮತ್ತು ಖಾಸಗಿ ಅಭ್ಯರ್ಥಿಗಳಿಗೆ ಹೊಸ ಪಠ್ಯಕ್ರಮದನ್ವಯ ಪ್ರಶ್ನೆಪತ್ರಿಕೆ ರಚಿಸಲಾಗುತ್ತದೆ.
ಸದರಿ ವಿಷಯಗಳ ಪುನರಾವರ್ತಿತ ಅಭ್ಯರ್ಥಿಗಳಿಗೆ 2025-26 ಮತ್ತು 2026-27ನೇ ಸಾಲಿನ ಪರೀಕ್ಷೆಗಳಿಗೆ ಮಾತ್ರ ಹಳೇ ಪಠ್ಯಕ್ರಮದಂತೆ ಪ್ರಶ್ನೆಪತ್ರಿಕೆ ರಚಿಸಿ ಪರೀಕ್ಷೆ ನಡೆಸಲಾಗುತ್ತದೆ. 2025-26ನೇ ಸಾಲಿನಿಂದ ಪರೀಕ್ಷೆಗೆ ಹಾಜರಾಗುವ ಹೊಸ (FRESHER), ಖಾಸಗಿ (PRIVATE) ಮತ್ತು ಪುನರಾವರ್ತಿತ (REPEATER) ಅಭ್ಯರ್ಥಿಗಳಿಗೆ ಈ ಕೆಳಕಂಡ ಕನಿಷ್ಠ ಉತ್ತೀರ್ಣ ಶೇಕಡವಾರು ಪ್ರಮಾಣ ಅನ್ವಯವಾಗುತ್ತದೆ.
ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಲಿಖಿತ ಪರೀಕ್ಷೆಯನ್ನು ಹಾಗೂ ಕನಿಷ್ಠ ಉತ್ತೀರ್ಣ ಶೇಕಡವಾರು ಪ್ರಮಾಣವನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ.
ಪ್ರಾಯೋಗಿಕ ಪರೀಕ್ಷೆ ಇಲ್ಲದ ಭಾಷಾ ಮತ್ತು ಐಚ್ಚಿಕ ವಿಷಯಗಳಿಗೆ (ಕರ್ನಾಟಕ ಸಂಗೀತ ಹಾಗು ಹಿಂದೂಸ್ಥಾನಿ ಸಂಗೀತ ವಿಷಯಗಳನ್ನು ಹೊರತುಪಡಿಸಿ) ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಯು ಪ್ರಕಟಿಸಿರುವ ಪಠ್ಯವಸ್ತುವನ್ನು ಆಧರಿಸಿ ಉಲ್ಲೇಖ (2) ರಂತೆ 80 ಅಂಕಗಳನ್ನು ಲಿಖಿತ ಪರೀಕ್ಷೆಗೆ ಹಾಗೂ 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನಿಗದಿಪಡಿಸಲಾಗಿದೆ.
ಆಂತರಿಕ ಮೌಲ್ಯಮಾಪನಕ್ಕೆ ಗರಿಷ್ಠ 20 ಅಂಕಗಳಿದ್ದು, ಇದಕ್ಕೆ ಯಾವುದೇ ಕನಿಷ್ಠ ಅಂಕಗಳ ಮಿತಿಯನ್ನು ನಿಗದಿಪಡಿಸಿರುವುದಿಲ್ಲ.
ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಪ್ರಶ್ನೆಪತ್ರಿಕಾ ವಿನ್ಯಾಸ, ನೀಲಿನಕ್ಷೆ ಹಾಗು ಪ್ರಶ್ನೆ ಪತ್ರಿಕೆಗಳನ್ನು ಗರಿಷ್ಠ 80 ಅಂಕಗಳಿಗೆ ಸಿದ್ಧಪಡಿಸಲಾಗುತ್ತದೆ. ಪ್ರತಿ ವಿಷಯದ ಲಿಖಿತ ಪರೀಕ್ಷೆಯಲ್ಲಿ ಗರಿಷ್ಠ 80 ಅಂಕಗಳಿಗೆ, ಕನಿಷ್ಠ 24 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಆಂತರಿಕ ಅಂಕಗಳೂ ಸೇರಿ ಕನಿಷ್ಠ 30 ಅಂಕಗಳನ್ನು ಪಡೆದಲ್ಲಿ ಹಾಗೂ ಎಲ್ಲಾ ವಿಷಯಗಳಲ್ಲಿ ಒಟ್ಟಾರೆಯಾಗಿ ಶೇಕಡಾ 33 ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಲಾಗುತ್ತದೆ.
ಪ್ರಾಯೋಗಿಕ ಪರೀಕ್ಷೆ ಇರುವ ವಿಷಯಗಳಿಗೆ ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಹಾಗೂ ಕನಿಷ್ಠ ಉತ್ತೀರ್ಣ ಶೇಕಡವಾರು ಪ್ರಮಾಣವನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ.
ಅ. ಕರ್ನಾಟಕ ಸಂಗೀತ ಹಾಗು ಹಿಂದೂಸ್ಥಾನಿ ಸಂಗೀತ ವಿಷಯಗಳಲ್ಲಿ ಗರಿಷ್ಠ 40 ಅಂಕಗಳ ಲಿಖಿತ ಹಾಗು 60 ಅಂಕಗಳ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ. ಉತ್ತೀರ್ಣರಾಗಲು ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 12 ಅಂಕಗಳನ್ನು ಹಾಗು ಪ್ರಾಯೋಗಿಕ ಪರೀಕ್ಷೆಯಲ್ಲಿ ಕನಿಷ್ಠ 18 ಅಂಕಗಳನ್ನು ಒಂದೇ ಪರೀಕ್ಷೆಯಲ್ಲಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಎರಡು ಅಂಶಗಳು ಸೇರಿ ಕನಿಷ್ಠ 30 ಅಂಕಗಳನ್ನು ಪಡೆದಲ್ಲಿ ಹಾಗೂ ಎಲ್ಲಾ ವಿಷಯಗಳಲ್ಲಿ ಒಟ್ಟಾರೆಯಾಗಿ ಶೇಕಡಾ 33 ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಲಾಗುತ್ತದೆ.
ಆ. NSQF ವಿಷಯಗಳಲ್ಲಿ ಲಿಖಿತ ಪರೀಕ್ಷೆಯನ್ನು ಗರಿಷ್ಠ 60 ಅಂಕಗಳಿಗೆ ನಡೆಸಿ, 30 ಅಂಕಗಳಿಗೆ ಪರಿವರ್ತಿಸಲಾಗುವುದು. ಪ್ರಾಯೋಗಿಕ ಪರೀಕ್ಷೆಯನ್ನು ಗರಿಷ್ಠ 50 ಅಂಕಗಳಿಗೆ ನಡೆಸಲಾಗುತ್ತದೆ ಹಾಗು 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನಿಗದಿಪಡಿಸಲಾಗಿದೆ. ಉತ್ತೀರ್ಣರಾಗಲು ಲಿಖಿತ ಪರೀಕ್ಷೆಯಲ್ಲಿ 30 ಅಂಕಗಳಿಗೆ ಕನಿಷ್ಠ 10 ಅಂಕಗಳು ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ಕನಿಷ್ಠ 18 ಅಂಕಗಳನ್ನು ಒಂದೇ ಪರೀಕ್ಷೆಯಲ್ಲಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಮೂರು ಅಂಶಗಳು ಸೇರಿ ಕನಿಷ್ಠ 30 ಅಂಕಗಳನ್ನು ಪಡೆದಲ್ಲಿ ಹಾಗೂ ಎಲ್ಲಾ ವಿಷಯಗಳಲ್ಲಿ ಒಟ್ಟಾರೆಯಾಗಿ ಶೇಕಡಾ 33 ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಲಾಗುತ್ತದೆ.
ಇ. ವಿಜ್ಞಾನ ಸಂಯೋಜನೆಯ ಪ್ರಾಯೋಗಿಕ ವಿಷಯಗಳಿಗೆ:-
(PHYSICS), 김영진 (CHEMISTRY), ) (BIOLOGY), ವಿಜ್ಞಾನ (COMPUTER SCIENCE), ವಿದ್ಯುನ್ಮಾನಶಾಸ್ತ್ರ (ELECTRONICS) ಮತ್ತು ಗೃಹವಿಜ್ಞಾನ (HOME SCIENCE) ವಿಷಯಗಳಿಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಯು ಪ್ರಕಟಿಸಿರುವ ಪಠ್ಯವಸ್ತುವನ್ನು ಆಧರಿಸಿ ಉಲ್ಲೇಖ (2) ರಂತೆ 70 ಅಂಕಗಳಿಗೆ ಲಿಖಿತ ಪರೀಕ್ಷೆಯನ್ನು ಹಾಗೂ 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ.
ಸದರಿ ವಿಷಯಗಳಿಗೆ ಪ್ರಶ್ನೆಪತ್ರಿಕಾ ವಿನ್ಯಾಸ, ನೀಲಿನಕ್ಷೆ ಹಾಗು ಪ್ರಶ್ನೆ ಪತ್ರಿಕೆಗಳನ್ನು ಗರಿಷ್ಠ 70 ಅಂಕಗಳಿಗೆ ಸಿದ್ಧಪಡಿಸಲಾಗುತ್ತದೆ. ಪ್ರತಿ ವಿಷಯದ ಲಿಖಿತ ಪರೀಕ್ಷೆಯಲ್ಲಿ ಗರಿಷ್ಠ 70 ಅಂಕಗಳಿಗೆ, ಕನಿಷ್ಠ 21 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಪ್ರಾಯೋಗಿಕ ಪರೀಕ್ಷೆ ಅಂಕಗಳೂ ಸೇರಿ ಕನಿಷ್ಠ 30 ಅಂಕಗಳನ್ನು ಪಡೆದಲ್ಲಿ ಹಾಗೂ ಎಲ್ಲಾ ವಿಷಯಗಳಲ್ಲಿ ಒಟ್ಟಾರೆಯಾಗಿ ಶೇಕಡಾ 33 ಅಂಕಗಳನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಲಾಗುತ್ತದೆ. ಪ್ರಾಯೋಗಿಕ ಪರೀಕ್ಷೆಗೆ ಗರಿಷ್ಠ 30 ಅಂಕಗಳಿದ್ದು, ಇದರಲ್ಲಿ ಯಾವುದೇ ಕನಿಷ್ಠ ಅಂಕಗಳ ಮಿತಿಯನ್ನು ನಿಗದಿಪಡಿಸಿರುವುದಿಲ್ಲ.











