ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಜನವರಿ 5 ರಿಂದ 7 ರವರೆಗೆ ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2024 ನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಸಚಿವರು ಹಾಗೂ ಮೇಳದ ಅಧ್ಯಕ್ಷರಾದ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಇಂದು ಕೃಷಿ ಇಲಾಖೆ ಹಾಗೂ ಕೆಪೆಕ್ ಸಂಸ್ಥೆಯ ವತಿಯಿಂದ ಹೋಟೆಲ್ ಶಾಂಗ್ರಿಲಾದಲ್ಲಿ “ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ವಾಣಿಜ್ಯ ಮೇಳ – 2024” ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗುತ್ತಿರುವ ರಫ್ತುದಾರರ ಸಭೆಯ ಕುರಿತು ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಾವಯವ ಕೃಷಿಯನ್ನು ರಾಜ್ಯದಲ್ಲಿ ಸುಮಾರು 2 ದಶಕಗಳಿಂದ ಉತ್ತಮ ಪರ್ಯಾಯ ಪದ್ಧತಿಯಾಗಿ ಉತ್ತೇಜಿಸಲಾಗುತ್ತಿದೆ. ಸ್ವಾವಲಂಬನೆ ಗ್ರಾಮೀಣಾಭಿವೃದ್ಧಿ ಮತ್ತು ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡಲು 2004 ರಲ್ಲಿಯೇ ಪ್ರತ್ಯೇಕ ಸಾವಯವ ಕೃಷಿ ನೀತಿಯನ್ನು ಹೊರತಂದು ನೀತಿಯಡಿಯಲ್ಲಿ ರಾಜ್ಯಾದ್ಯಂತ ಹಲವಾರು ಸಾವಯವ ಕೃಷಿ ಉತ್ತೇಜನಾ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿರುತ್ತದೆ ಎಂದು ತಿಳಿಸಿದರು.
ಸಿರಿಧಾನ್ಯಗಳು ಬಹು ಉಪಯೋಗಗಳನ್ನು (ಆಹಾರ, ಮೇವು. ಇಂಧನ) ಹೊಂದಿದ್ದು, ಸಾಮಾನ್ಯವಾಗಿ ಬರಗಾಲದ ಸಮಯದಲ್ಲಿ ಕೊನೆಯ ಬೆಳೆಯಾಗಿ ಸಹ ರೈತರಿಗೆ ಉತ್ತಮ ಅಪಾಯ ನಿರ್ವಹಣೆ ತಂತ್ರವಾಗಿದೆÉ. ಸಿರಿಧಾನ್ಯಗಳು ಪೌಷ್ಟಿಕಾಂಶ ಮತ್ತು ಆರೋಗ್ಯ ಸಮಸ್ಯೆಗಳನ್ನು (ಕಬ್ಬಿಣ, ಸತು, ಫೆÇೀಲಿಕ್ ಆಮ್ಲ, ಕ್ಯಾಲ್ಸಿಯಂ ಕೊರತೆ, ಮಧುಮೇಹ ಮತ್ತು ಇತರೆ) ನಿವಾರಿಸುವ ಶಕ್ತಿಯನ್ನು ಹೊಂದಿರುತ್ತವೆ. ಸಿರಿಧಾನ್ಯಗಳು ಕಡಿಮೆ ನೀರಿನ ಹೆಜ್ಜೆ ಗುರುತನ್ನು ಹೊಂದಿರುವುದರಿಂದ ಹಾಗೂ ಅತ್ಯಂತ ಶುಷ್ಕ ವಾತಾವರಣದಲ್ಲಿಯೂ ಬದುಕಬಲ್ಲವು ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸುವಲ್ಲಿ ಶಕ್ತಿಯನ್ನು ಹೊಂದಿರುತ್ತವೆ ಎಂದು ತಿಳಿಸಿದರು.
ಸಾವಯವ ಮತ್ತು ಸಿರಿಧಾನ್ಯಗಳನ್ನು “ಭವಿಷ್ಯದ ಪೀಳಿಗೆಯನ್ನು ಪೆÇೀಷಿಸುವ ಸಾಂಪ್ರದಾಯಿಕ ಪ್ರಜ್ಞಾವಂತ ಆಹಾರ” ಎಂದು ಜನಪ್ರಿಯಗೊಳಿಸುವುದು ಸರ್ಕಾರದ ಧ್ಯೇಯೋದ್ದೇಶವಾಗಿದೆ. ಪ್ರಸ್ತುತ ರಾಜ್ಯದ ಒಟ್ಟು ಸಿರಿಧಾನ್ಯ ಪ್ರದೇಶ – 15.61 ಲಕ್ಷ ಹೆಕ್ಟೇರ್, ಪ್ರಮುಖ ಸಿರಿಧಾನ್ಯಗಳು – 15.26 ಲಕ್ಷ ಹೆಕ್ಟೇರ್, ರಾಗಿ-8.28 ಲಕ್ಷ ಹೆಕ್ಟೇರ್, ಜೋಳ-5.67 ಲಕ್ಷ ಹೆಕ್ಟೇರ್, ಸಜ್ಜೆ-1.31 ಲಕ್ಷ ಹೆಕ್ಟೇರ್ ಹಾಗೂ ಹಾರಕ, ನವಣೆ, ಸಾಮೆ, ಊದಲು, ಕೊರಲು, ಬರಗು ಮುಂತಾದ ಕಿರುಧಾನ್ಯ/ಸಿರಿಧಾನ್ಯಗಳು- 0.35 ಲಕ್ಷ ಹೆಕ್ಟೇರ್.
ರಾಜ್ಯದ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಂಪರ್ಕವನ್ನು ಕಲ್ಪಿಸಲು ಮತ್ತು ರೈತರು, ಖರೀದಿದಾರರು, ಮಾರಾಟಗಾರರು, ರಫ್ತುದಾರರಿಗೆ ವಿಪುಲ ಅವಕಾಶಗಳನ್ನು ಒದಗಿಸಲು 2017, 2018, 2019 ಮತ್ತು 2023 ರಲ್ಲಿ ಆಯೋಜಿಸಿಲಾಗಿದ್ದ ಸಾವಯವ ಮತ್ತು ಸಿರಿಧಾನ್ಯಗಳ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಾಣಿಜ್ಯ ಮೇಳವು ಭಾಗವಹಿಸಿದ ಹೆಚ್ಚಿನ ಸಂಖ್ಯೆಯ ಪಾಲುದಾರರನ್ನು ಆಕರ್ಷಿಸಿ, ಆಸಕ್ತಿ ಹುಟ್ಟು ಹಾಕುವ ಮೂಲಕ ಉತ್ತಮ ಯಶಸ್ಸನ್ನು ಕಂಡಿತು. ಇದೇ ಆಸಕ್ತಿಯನ್ನು ಉಳಿಸಿ ಮುಂದಿನ ಮಟ್ಟಕ್ಕೆ ಕೊಂಡೊಯ್ಯಲು ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2024 ಸಹಕಾರಿಯಾಗಲಿದೆ.
ಮೇಳದ ಆಯೋಜನೆಯಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆÀಕ್) ಸಂಸ್ಥೆಯು ಮೇಳ ಆಯೋಜನೆಯ ನೋಡಲ್ ಏಜೆನ್ಸಿಯಾಗಿರುತ್ತದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಜಿಐಜಡ್, ಸಿಎಫ್‍ಟಿಆರ್‍ಐ, ಐಐಎಂಆರ್ ಸಂಶೋಧನಾ ಸಂಸ್ಥೆಗಳು ಮೇಳದ ಆಯೋಜನೆಯಲ್ಲಿ ಸಹಭಾಗಿಗಳಾಗಿರುತ್ತಾರೆ.
ಮೇಳದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳ ಸಂಸ್ಥೆಗಳು, ಮಾರುಕಟ್ಟೆದಾರರು, ರಫ್ತುದಾರರು, ಚಿಲ್ಲರೆ ಮಾರಾಟಗಾರರು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಸಾವಯವ ಪರಿಕರಗಳ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ ಎಂದರು.
ಈ ಮೇಳದಲ್ಲಿ ಉತ್ತರ ಪ್ರದೇಶ, ಪಂಜಾಬ್, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಒಡಿಸ್ಸಾ, ತಮಿಳುನಾಡು ಮತ್ತು ಮೇಘಾಲಯ ಮುಂತಾದ ರಾಜ್ಯಗಳು ಭಾಗವಹಿಸುತ್ತಿವೆ. ವಸ್ತು ಪ್ರದರ್ಶನದಲ್ಲಿ 281 ಮಳಿಗೆಗಳಿದ್ದು, ಈಗಾಗಲೇ 248 ಮಳಿಗೆಗಳು ನೋಂದಣಿಯಾಗಿರುತ್ತವೆ.
ಕರ್ನಾಟಕ ಪೆವಿಲಿಯನ್‍ನಲ್ಲಿ ಕರ್ನಾಟಕದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು Millets beyond borders : Karnataka welcomes the world ಎಂಬ ಶೀರ್ಷಿಕೆಯೊಂದಿಗೆ ಪ್ರದರ್ಶಿಸಲಾಗುತ್ತಿದ್ದು, ICRISAT, IIMR, CFTRI, NIFTEM, UAS millet center of excellence ಈ ಮುಂತಾದ ಸಂಸ್ಥೆಗಳಿಂದ ಉತ್ತೇಜನಗೊಂಡಿರುವ ಕರ್ನಾಟಕದ ನವೋದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ. ಸಿರಿಧಾನ್ಯ / ಸಾವಯವ ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಹಾಗೆಯೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ಸೇರಿದಂತೆ ಒಟ್ಟು 81 ಮಳಿಗೆಗಳು ಇರುತ್ತವೆ.
ಉತ್ಪಾದಕರು-ಮಾರುಕಟ್ಟೆಗಾರರ ಸಭೆ – ರಾಜ್ಯದ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮೇಳದಲ್ಲಿ ಉತ್ಪಾದಕರ – ಮಾರುಕಟ್ಟೆದಾರರ ಸಮಾಲೋಚನಾ ಸಭೆಗಳನ್ನು ಏರ್ಪಡಿಸಲಾಗುತ್ತದೆ. ಬಿ2ಬಿ ಸಭೆಗೆ ಈಗಾಗಲೇ 61 ಕೊಂಡುಕೊಳ್ಳುವವರು ಮತ್ತು 54 ಮಾರಾಟಗಾರರು ನೋಂದಣಿ ಮಾಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ಮಾರುಕಟ್ಟೆದಾರರು, ಎಫ್‍ಪಿಒ ಒಕ್ಕೂಟಗಳು ಭಾಗವಹಿಸಲಿದ್ದಾರೆ.
ಅಂತರರಾಷ್ಟ್ರೀಯ ಸಮ್ಮೇಳನವನ್ನು GIZ IIMR ಹಾಗೂ ICCOA ಸಂಸ್ಥೆಗಳ ಸಹಯೋಗದೊಂದಿಗೆ “Transformation into organic and agroecology- based agriculture in Karnataka” ಎಂಬ ಶೀರ್ಷಿಕೆಯಡಿ ಆಯೋಜಿಸಲಾಗುತ್ತಿದ್ದು, ಸಮ್ಮೇಳನದಲ್ಲಿ 35 ಕ್ಕಿಂತ ಹೆಚ್ಚು ಪ್ರಖ್ಯಾತ ಉಪನ್ಯಾಸಕರು ಮಾಹಿತಿ ನೀಡಲಿದ್ದಾರೆ. ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರು/ವಿದ್ಯಾರ್ಥಿಗಳು ಹಾಗೂ ಇತರ ಪಾಲುದಾರರು ಭಾಗವಹಿಸುವರು.
ರೈತರ ಕಾರ್ಯಾಗಾರ: ರಾಜ್ಯದ ಸಾವಯವ ಮತ್ತು ಸಿರಿಧಾನ್ಯ ಬೆಳೆಯುವ ರೈತರಿಗಾಗಿ ಕನ್ನಡ ಭಾμÉಯಲ್ಲಿ ಮೂರು ದಿನಗಳ ಕಾರ್ಯಗಾರವನ್ನು ಕೃಷಿ ವಿಶ್ವವಿದ್ಯಾನಿಲಯ ಸಂಶೋಧನಾ ವಿಭಾಗದಿಂದ ಆಯೋಜಿಸಲಾಗುತ್ತದೆ. ಸಾವಯವ ಮತ್ತು ಸಿರಿಧಾನ್ಯ ಪರಿಣಿತರು/ ತಜ್ಞರು ಈ ಕಾರ್ಯಾಗಾರದಲ್ಲಿ ಸಾವಯವ ಪದ್ಧತಿ, ಸಾವಯವ ಮಾರುಕಟ್ಟೆ ಪ್ರವೃತ್ತಿ ಬೇಡಿಕೆ, ಸಾವಯವ ಪ್ರಮಾಣೀಕರಣ ಪ್ರಕ್ರಿಯೆ, ನೈಸರ್ಗಿಕ ಕೃಷಿ, ಸಿರಿಧಾನ್ಯಗಳ ಬಗ್ಗೆ ವಿಷಯ ತಜ್ಞರು ಉಪನ್ಯಾಸ’ ನೀಡಲಿದ್ದಾರೆ.
ಖಾನಾವಳಿ (ಪುಡ್ ಕೋರ್ಟ್): ಮೂರು ದಿನಗಳ ಮೇಳದ ಅವಧಿಯಲ್ಲಿ ಸುಮಾರು 10 ವಿವಿಧ ಸಿರಿಧಾನ್ಯ ಹೋಟೆಲ್/ ರೆಸ್ಟೋರೆಂಟ್‍ಗಳ ಮಳಿಗೆಗಳಲ್ಲಿ ವೈವಿಧ್ಯಮಯ ಮತ್ತು ರುಚಿಕರವಾದ ಸಿರಿಧಾನ್ಯಗಳ ಊಟ ಮತ್ತು ಉಪಹಾರಗಳನ್ನು ಸವಿಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಮೇಳದ ಪ್ರಚಾರದಲ್ಲಿ ಪೂರ್ವಬಾವಿ ಕಾರ್ಯಕ್ರಮಗಳಾಗಿ ಸಿರಿಧಾನ್ಯ ನಡಿಗೆ, ಸಿರಿಧಾನ್ಯ ಅಡುಗೆ ಸ್ಪರ್ಧೆ, ಕ್ರೀಡಾಕೂಟ ಸೇರಿದಂತೆ ಸಿರಿಧಾನ್ಯ ಮೇಳವನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿರುತ್ತದೆ.
ಗ್ರಾಹಕರಲ್ಲಿ ಅರಿವು ಮೂಡಿಸುವ ಉದ್ದೇಶದೊಂದಿಗೆ 2023ನೇ ಡಿಸೆಂಬರ್ 17ರಂದು ಬೆಂಗಳೂರಿನ ಕಬ್ಬನ್ ಪಾರ್ಕ್‍ನಲ್ಲಿ ಸಿರಿಧಾನ್ಯ ನಡಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿಗಳಾದ ವಿ. ಅನ್ಬುಕುಮಾರ್, ಕೃಷಿ ಆಯುಕ್ತರಾದ ವೈ.ಎಸ್.ಪಾಟೀಲ, ಕಿದ್ವಾಯಿ ಮೆಮೋರಿಯಲ್ ಇನ್ಸಿಟ್ಯೂಟ್ ಆಫ್ ಅಂಕಾಲಜಿಯ ವಿಶ್ರಾಂತ ನಿರ್ದೇಶಕರಾದ ಡಾ. ಸಿ. ರಾಮಚಂದ್ರ, ಹಾಗೂ ಬೆಳ್ಳಿತರೆ ನಟಿ ಸಪ್ತಮಿಗೌಡ ಇವರು ಸಿರಿಧಾನ್ಯ ನಡಿಗೆಗೆ ಚಾಲನೆ ನೀಡಿದ್ದು, ಕಾರ್ಯಕ್ರಮದಲ್ಲಿ 2500 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಕೃಷಿ ಇಲಾಖೆಯು ಕ್ರೈಸ್ಟ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ 2023ನೇ ಡಿಸೆಂಬರ್ 20ರಂದು ಸಿರಿಧಾನ್ಯಗಳ ಪಾಕಶಾಸ್ತ್ರ ವಿಚಾರ ಸಂಕಿರಣ “ಸಿರಿಧಾನ್ಯ ತಿಂತೀರಾ?” ಕಾರ್ಯಕ್ರಮವನ್ನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಕ್ರೈಸ್ಟ್ ವಿಶ್ವವಿದ್ಯಾನಿಲಯ ಕುಲಪತಿಗಳಾದ ಫಾದರ್ ಡಾ. ಜೋಸೆಫ್, ಕೃಷಿ ಆಯುಕ್ತರು, ಕೃಷಿ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು, ಕೆಪೆಕ್ ಸಂಸ್ಥೆ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ. ಮಮತಾ, ಸಹ ಭಾಗವಹಿಸಿದ್ದರು.
ದಿನ ನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳ ಪುನರುತ್ಥಾನ ಪ್ಯಾನಲ್ ಚರ್ಚೆಯನ್ನು ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ 2023ನೇ ಡಿಸೆಂಬರ್20 ಮತ್ತು 21ರಂದು ಆಯೋಜಿಸಲಾಗಿತ್ತು. ಯುವ ಸಮೂಹ ಸಿರಿಧಾನ್ಯಗಳನ್ನು ಉಪಯೋಗಿಸಿ ಆರೋಗ್ಯಕರ ಆಹಾರ ಪದ್ಧತಿ ಅನುಸರಿಸಬೇಕಾಗಿರುವ ಕುರಿತು ಅರಿವು ಮೂಡಿಸಲಾಯಿತು. ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ನೈಸರ್ಗಿಕ ಮತ್ತು ಅನ್ವಯಿಕ ವಿಜ್ಞಾನಗಳ ಡೀನ್ ಡಾ. ಎ. ಸುಂದರವಲ್ಲಿ ಅವರು ಸಿರಿಧಾನ್ಯಗಳ ಬಳಕೆಯಿಂದ ದೈಹಿಕ ಮತ್ತು ಮಾನಸಿಕ ಆರೈಕೆಗೆ ಸಹಕಾರಿಯಾಗಿದೆ ಎಂದು ತಿಳಿಸಿಕೊಟ್ಟರು.
2023ನೇ ಡಿಸೆಂಬರ್ 23ರಂದು ಜಿಲ್ಲಾಮಟ್ಟದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ, ರಾಜ್ಯ ಮಟ್ಟದಲ್ಲಿ ಸಿರಿಧಾನ್ಯ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಆಯುಕ್ತರು, ಸ್ಟರ್ಪ್ ಕಲಿನರಿ ಅಕಾಡೆಮಿ ನಿರ್ದೇಶಕರು ಹಾಗೂ ಖ್ಯಾತ ಚಲನ ಚಿತ್ರ ನಟಿ ರಾಗಿಣಿ ದ್ವಿವೇದಿ ಭಾಗವಹಿಸಿದ್ದರು, ಸಿರಿಧಾನ್ಯಗಳ ಮೂಲಕ ಪಿಜ್ಜಾ, ಬರ್ಗರ್, ಪಾಸ್ತಾ, ಮ್ಯಾಗಿ, ಅಂಬಲಿ, ಉಪ್ಪಿಟ್ಟು, ರೊಟ್ಟಿ ಮುಂತಾದ ಬಾಯಲ್ಲಿ ನೀರೂರಿಸುವ ಬಗೆ ಬಗೆಯ ಭಕ್ಷ ಭೋಜನಗಳನ್ನು ತಯಾರಿಸಬಹುದಾಗಿದೆ ಎಂಬುದನ್ನು ಸಾಬೀತುಪಡಿಸಿದರು.
2022-23 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ ರೂ. 36.00 ಕೋಟಿ ಮೌಲ್ಯದ 7764 ಮೆಟ್ರಿಕ್ ಟನ್ ಪ್ರಮಾಣದ ಸಿರಿಧಾನ್ಯ ಮತ್ತು ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳನ್ನು ರಫ್ತು ಮಾಡಲಾಗಿರುತ್ತದೆ. ಅಮೇರಿಕಾ, ಆಸ್ಟ್ರೇಲಿಯ, ಯುಎಇ, ಕೆನಡಾ, ಕತಾರ್, ಥೈಲ್ಯಾಂಡ್, ಸಿಂಗಾಪುರ ಮುಂತಾದವು ಸಿರಿಧಾನ್ಯಗಳ ಪ್ರಮುಖ ರಫ್ತು ತಾಣಗಳಾಗಿವೆ. ರಫ್ತು ಮಾಡಲಾಗುತ್ತಿರುವ ಜೋಳ, ಸಜ್ಜೆ, ರಾಗಿ ಮತ್ತು ಇತರೆ ಸಿರಿಧಾನ್ಯಗಳನ್ನು ಪ್ರಮುಖವಾಗಿ ಬಳ್ಳಾರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಹಾವೇರಿ, ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ ಪಡೆಯಲಾಗುತ್ತಿದೆ.
ಸಿರಿಧಾನ್ಯಗಳ ಪೈಕಿ ಪ್ರಸ್ತುತ ಪೌಷ್ಟಿಕ ಭರಿತ ಹಾಗೂ ಗ್ಲುಟನ್ ಮುಕ್ತ ಸಜ್ಜೆ ಹಿಟ್ಟಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೇಡಿಕೆಯಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಪರಿಗಣಿಸಲಾಗಿದೆ. ಅಲ್ಲದೇ ಗೋಧಿ ಹಿಟ್ಟಿಗೆ ಪರ್ಯಾಯವಾಗಿ ಇದನ್ನು ಪ್ರಪಂಚದಾದ್ಯಂತ ಬಳಸಲಾಗುತ್ತದೆ. ಸಜ್ಜೆಯ ಜೊತೆಗೆ ಜೋಳ ಮತ್ತು ರಾಗಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುತ್ತದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ Ready to eat ಸಿರಿಧಾನ್ಯ ತಿಂಡಿಗಳ ಬೇಡಿಕೆ ಇದ್ದು, ಒಟ್ಟಾರೆಯಾಗಿ ಸಿರಿ ಧಾನ್ಯಗಳ ಉತ್ಪನ್ನಗಳನ್ನು ಹಾಗೆಯೇ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳ ರಫ್ತಿಗಾಗಿ ಜಾಗತಿಕ ಮಟ್ಟದಲ್ಲಿ ಇರುವ ಅವಕಾಶ/ಸವಾಲುಗಳ ಬಗ್ಗೆ, ಇಂದಿನ ಸಭೆಯಲ್ಲಿ ವಿಚಾರ ವಿನಿಮಯ ನಡೆಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಹಾರ ಸಂರಕ್ಷಣೆ ಮತ್ತು ಕಟಾವು ತಂತ್ರಜ್ಞಾನದ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಮಾತನಾಡಿ, ರಾಜ್ಯದಲ್ಲಿ ಆಹಾರ ಸಂಸ್ಕರಣೆ ಹಾಗೂ ರಫ್ತು ಕಾರ್ಯ ಇನ್ನೂ ಶಿಶು ಅವಸ್ಥೆಯಲ್ಲಿಯೇ ಇದೆ. ನಾವು ಅಕ್ಕಿ, ಸಾಂಬಾರು ಪದಾರ್ಥ, ಸಕ್ಕರೆ, ಕಾಫಿ, ಪ್ರಾಣಿ ಹಾಗೂ ಮೀನು ಉತ್ಪನ್ನಗಳನ್ನು ಹೇರಳವಾಗಿ ಉತ್ಪಾದಿಸುತ್ತಿದ್ದರೂ ಸರಿಯಾದ ರೀತಿಯಲ್ಲಿ ಸಂಸ್ಕರಿಸಿ ರಫ್ತು ಮಾಡುತ್ತಿಲ್ಲ. 2022-23 ರಲ್ಲಿ ನಮ್ಮ ರಫ್ತು ಶೇ.26 ರಷ್ಟು ಮಾತ್ರ ನಾವು ಸಿರಿಧಾನ್ಯಗಳ ಆಹಾರವನ್ನು ದಿನಕ್ಕೆ ಒಂದು ಬಾರಿಯಾದರೂ ಸೇವಿಸುವುದು ಆರೋಗ್ಯಕ್ಕೆ ಒಳಿತು ಎಂದ ಅವರು, 2023ನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿ ಘೋಷಿಸಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಆಯುಕ್ತರಾದ ವೈ.ಎಸ್.ಪಾಟಿಲ, ನಿರ್ದೇಶಕರಾದ ಡಾ.ಜಿ.ಟಿ.ಪುತ್ರ, ಜಲಾನಯನ ನಿರ್ದೇಶಕರಾದ ಡಾ.ಶ್ರೀನಿವಾಸ್, ಕೆಪೆಕ್ ಮತ್ತು ಅಪೇಡಾ ಮುಂತಾದ ಸಂಸ್ಥೆಗಳ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.