ಕಾರವಾರ: ಇಲ್ಲಿನ ಶಿರೂರು ಬಳಿಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದಾಗಿ ಅದರಡಿ ಲಾರಿಯೊಂದು ಸಿಲುಕಿತ್ತು. ಇಂತಹ ಲಾರಿ ಸೇರಿದಂತೆ ಅದರಡಿಯಲ್ಲಿ ಸಿಲುಕಿರುವಂತ ಕೆಲವರ ಮೃತದೇಹವನ್ನು ಹೊರತೆಗೆಯಲು ಮಿಲಿಟರಿ ಎಂಟ್ರಿ ಕೊಡಲಿಗೆದ.
ಬೆಳಗಾವಿಯಿಂದ ಆಗಮಿಸಿರುವಂತ ಭಾರತೀಯ ಸೈನಿಕರ ಪಡೆಯು, ಶಿರೂರು ಬಳಿಯಲ್ಲಿ ಹೆದ್ದಾರಿಯಲ್ಲಿ ಕುಸಿತಗೊಂಡಿರುವಂತ ಗುಡ್ಡವನ್ನು ತೆರವುಗೊಳಿಸಲಿದೆ. ಅಲ್ಲದೇ ಕೇರಳ ಮೂಲದ ಲಾರಿಯೊಂದು ಗುಡ್ಡದ ಮಣ್ಣಿನಡಿ ಕುಸಿತಗೊಂಡಿದ್ದು, ಅದನ್ನು ಹೊರತೆಗೆಯುವ ಕಾರ್ಯಾಚರಣೆಯನ್ನು ಆರಂಭಿಸಲಿದೆ.
ಈಗಾಗಲೇ ಎನ್ ಡಿ ಆರ್ ಎಫ್, ಅಗ್ನಿಶಾಮಕ ಸಿಬ್ಬಂದಿಗಳು ಮಣ್ಣು ತೆರವುಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈಗ ಬೆಳಗಾವಿಯಿಂದ ಆಗಮಿಸಲಿರುವಂತ ಮಿಲಿಟರಿ ಪಡೆಯು, ಶಿರೂರು ಗುಡ್ಡ ಕುಸಿತದ ಮಣ್ಣು ತೆರವು ಕಾರ್ಯಾಚರಣೆಗೆ ಇಳಿಯಲಿದೆ.
ಮತ್ತೊಂದೆಡೆ ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಶಿರೂರು ಗುಡ್ಡ ಕುಸಿತದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಸಿಎಂ ಸಿದ್ಧರಾಮಯ್ಯ ಅವರಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ, ಮಂಕಾಳು ವೈದ್ಯ ಹಾಗೂ ಆರ್ ವಿ ದೇಶಪಾಂಡೆಯವರು ಸಾಥ್ ನೀಡಿದರು.
‘ಭ್ರಷ್ಟಾಚಾರದ ಬ್ರಹ್ಮ’ ಯಾರು ಅಂತ ಎಲ್ಲರಿಗೂ ಗೊತ್ತಾಗಿದೆ: ಸಿದ್ಧರಾಮಯ್ಯ ವಿರುದ್ಧ ‘ಬೊಮ್ಮಾಯಿ ವಾಗ್ಧಾಳಿ’
ರಾಜ್ಯದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ʻಪ್ರಬುದ್ಧ ಯೋಜನೆʼ ಮುಂದುವರಿಕೆ