ಬೆಂಗಳೂರು: ನರೇಗಾ ಯೋಜನೆಯ ಅಡಿಯಲ್ಲಿ ಕೂಲಿ ಕಾರ್ಮಿಕರಿಗೆ ಪಾವತಿಸುವ ಕೂಲಿಯನ್ನು ಬ್ಯಾಂಕುಗಳು ಕೂಲಿಕಾರರ ಸಾಲ ಬಾಕಿಗೆ ಹೊಂದಾಣಿಕೆ ಮಾಡಿಕೊಳ್ಳುವಂತಿಲ್ಲ ಎಂಬುದಾಗಿ ರಾಜ್ಯ ಸರ್ಕಾರ ಖಡಕ್ ಆದೇಶ ಮಾಡಿದೆ.
ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿರುವಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಅವರು, ಮಹಾತ್ಮಾಗಾಂಧಿ ನರೇಗಾ ಯೋಜನೆಡಯಿ ಕೂಲಿ ಹಣವನ್ನು ಬ್ಯಾಂಕ್ ಸಾಲದ ಖಾತೆಗೆ ಜಮಾ ಮಾಡಿಕೊಂಡಿದ್ದು, ಕೂಲಿ ಹಣವನ್ನು ಕೊಡಿಸುವಂತೆ ಕೆಲ ಜನರು ಪತ್ರದಲ್ಲಿ ಕೋರಿದ್ದಾರೆ ಎಂದಿದೆ.
ಮಹಾತ್ಮಾಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಪ್ರದೇಶಗಳ ಬಡ ಜನರಿಗೆ ಆಕುಶಲ ಕೆಲಸ ಒದಗಿಸುವ ಮೂಲಕ ಜೀವನೋಪಾಯಕ್ಕೆ ನೆರವು ನೀಡುವ ಯೋಜನೆಯಾಗಿರುತ್ತದೆ. ಆದುದ್ದರಿಂದ ಈ ಯೋಜನೆಯಡಿ ದುಡಿದ ಕೂಲಿಕಾರರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುವ ಕೂಲಿ ಹಣವನ್ನು ಕೂಲಿಕಾರರ ಬ್ಯಾಂಕ್ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳದಂತೆ ತಮ್ಮ ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್ ಮತ್ತು ಎಲ್ಲಾ ಬ್ಯಾಂಕ್ ಗಳ ವ್ಯವಸ್ಥಾಪಕರಿಗೆ ತಿಳಿಸುವಂತೆ ಸೂಚಿಸಿದೆ.
ALERT : ತಲೆಯ ಬಳಿ `ಮೊಬೈಲ್’ ಇಟ್ಟುಕೊಂಡು ಮಲಗುವವರೇ ತಪ್ಪದೇ ಇದನ್ನೊಮ್ಮೆ ಓದಿ.!
BREAKING : ಬೆಳಗಾವಿಯಲ್ಲಿ ಘೋರ ಘಟನೆ :ಕಾಲೇಜಿಗೆ ಹೋಗು ಅಂದಿದಕ್ಕೆ ನೇಣಿಗೆ ಶರಣಾದ ಯುವಕ!