ಬೆಂಗಳೂರು: ನಮ್ಮ ಮೆಟ್ರೋ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಇನ್ಮುಂದೆ ಪ್ರತಿ ಸೋಮವಾರದಂದು ಮೆಟ್ರೋ ಸೇವೆ ಬೆಳಿಗ್ಗೆ 4.15ರಿಂದ ಆರಂಭಗೊಳ್ಳಲಿದೆ. ಮತ್ತೆಲ್ಲಾ ದಿನಗಳಂದು ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಹೌದು. ಈ ಬಗ್ಗೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದ್ದು, ಮೆಟ್ರೋ ರೈಲು ಸೇವೆಯು ಪ್ರತಿ ಸೋಮವಾರ ಬೆಳಗ್ಗೆ 4.15 ರಿಂದಲೇ ಆರಂಭವಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದಲೇ ಜಾರಿಗೆ ಬರುವಂತೆ ಸೋಮವಾರದಂದು ಮಾತ್ರ ಮುಂಜಾನೆ 5 ಗಂಟೆಯ ಬದಲಾಗಿ ಬೆಳಗ್ಗೆ 4.15ರಿಂದಲೇ ಮೆಟ್ರೋ ರೈಲು ಸಂಚರಿಸಲಿದೆ. ಉಳಿದಂತೆ ಮತ್ತೆಲ್ಲಾ ದಿನಗಳಂದು ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬುದಾಗಿ ತಿಳಿಸಿದೆ.
ಮೆಟ್ರೋ ರೈಲು ಸೇವೆಯು ಪ್ರತಿ ಸೋಮವಾರ ಬೆಳಗ್ಗೆ 4.15 ರಿಂದಲೇ ಆರಂಭವಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದಲೇ ಜಾರಿಗೆ ಬರುವಂತೆ ಸೋಮವಾರದಂದು ಮಾತ್ರ ಮುಂಜಾನೆ 5 ಗಂಟೆಯ ಬದಲಾಗಿ ಬೆಳಗ್ಗೆ 4.15ರಿಂದಲೇ ಮೆಟ್ರೋ ರೈಲು ಸಂಚರಿಸಲಿದೆ. ಉಳಿದಂತೆ ಮತ್ತೆಲ್ಲಾ ದಿನಗಳಂದು ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.#NammaMetro pic.twitter.com/GiI1LWmCn6
— DIPR Karnataka (@KarnatakaVarthe) January 13, 2025
GOOD NEWS: ಬೆಂಗಳೂರಿನ ‘ಖಾತಾ’ ಇಲ್ಲದ ‘ಆಸ್ತಿ ಮಾಲೀಕ’ರಿಗೆ ಭರ್ಜರಿ ಸಿಹಿಸುದ್ದಿ