ಗದಗ: ಜಿಲ್ಲೆಯಲ್ಲಿ ಮನೆಯೊಂದರ ಪಾಯ ಅಗೆಯುವ ಸಂದರ್ಭದಲ್ಲಿ ಬಂಗಾರ ದೊರೆತಿತ್ತು. ಆ ಬಳಿಕ ಸುರಕ್ಷಿತ ಸ್ಥಳವೆಂದು ಉತ್ಖನನ ಕಾರ್ಯವನ್ನು ಪುರಾತತ್ವ ಇಲಾಖೆ ನಡೆಸುತ್ತಿದೆ. ಇಂದು ಉತ್ಖನನದ ವೇಳೆಯಲ್ಲಿ ಲಕ್ಕುಂಡಿಯಲ್ಲಿ ಲೋಹದ ವಸ್ತುವೊಂದು ಪತ್ತೆಯಾಗಿದೆ.
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 8ನೇ ದಿನದ ಉತ್ಖನನ ಕಾರ್ಯ ಮುಂದುವರೆದಿದೆ. ಇಂದು ವೀರಭದ್ರೇಶ್ವರ ದೇವಸ್ಥಾನದ ಬಳಿಯಲ್ಲಿ ಉತ್ಖನನ ನಡೆಸುತ್ತಿದ್ದಂತ ಸಂದರ್ಭದಲ್ಲಿ ಅರ್ಧ ಕೆಜಿಯಷ್ಟು ತೂಕದ ಲೋಹದ ವಸ್ತುವೊಂದು ಪತ್ತೆಯಾಗಿದೆ.








