ಶಿವಮೊಗ್ಗ: ಮಹಿಳಾ ಪೌರ ಕಾರ್ಮಿಕರ ಮೇಲೆ ಸಾಗರ ನಗರಸಭೆಯ ಮೇಸ್ತ್ರಿ ನಾಗರಾಜ ಹಲ್ಲೆ ನಡೆಸಿ, ಗೂಂಡಾಗಿರಿ ವರ್ತನೆ ತೋರಿದ್ದಾರೆ ಎಂಬುದಾಗಿ ನಿಮ್ಮ ಕನ್ನಡ ನ್ಯೂಸ್ ನೌ ಸುದ್ದಿ ಪ್ರಕಟಿಸಿತ್ತು. ಈ ವಿಚಾರವಾಗಿ ಇಂದಿನ ಸಾಗರ ನಗರಸಭೆ ವಿಶೇಷ ಸಭೆಯಲ್ಲಿ ವಿಪಕ್ಷಗಳ ನಾಯಕರು, ಮುಖಂಡರು ಧ್ವನಿ ಎತ್ತಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಕಳೆದ ಎರಡು ದಿನಗಳ ಹಿಂದೆ ಕನ್ನಡ ನ್ಯೂಸ್ ನೌನಲ್ಲಿ ಶಿವಮೊಗ್ಗ: ಸಾಗರ ನಗರಸಭೆ ‘ಮೇಸ್ತ್ರಿ ನಾಗರಾಜ’ನಿಂದ ‘ಮಹಿಳಾ ಪೌರ ಕಾರ್ಮಿಕ’ರ ಮೇಲೆ ಹಲ್ಲೆ ಎಂಬುದಾಗಿ ಸುದ್ದಿಯೊಂದನ್ನು ಪ್ರಕಟಿಸಿತ್ತು. ಈ ಬಗ್ಗೆ ನಿನ್ನೆಯಷ್ಟೇ ಸಾಗರ ನಗರಸಭೆಯ ಆಯುಕ್ತರಾದಂತ ಹೆಚ್.ಕೆ ನಾಗಪ್ಪ ಅವರನ್ನು ಪ್ರತಿಕ್ರಿಯೆ ಕೋರಲಾಗಿತ್ತು. ಅವರು ನೀಡಿದಂತ ಹೇಳಿಕೆಯನ್ನು ‘ಅವರವರು ಹಲ್ಲೆ’ ಮಾಡ್ಕೊಂಡಿದ್ದಾರೆ: ಪೌರ ಕಾರ್ಮಿಕರ ಮೇಲೆ ‘ಮೇಸ್ತ್ರಿ’ ಹಲ್ಲೆಗೆ ‘ಸಾಗರ ನಗರಸಭೆ ಆಯುಕ್ತ’ರ ಉಡಾಫೆ ಉತ್ತರ ಎಂಬುದಾಗಿ ಪ್ರಕಟಿಸಲಾಗಿತ್ತು.

ಇಂದಿನ ಸಾಗರ ನಗರಸಭೆ ವಿಶೇಷ ಸಭೆಯಲ್ಲಿ ಪ್ರತಿಧ್ವನಿ

ಇಂದು ಸಾಗರ ನಗರಸಭೆಯ ವಿಶೇಷ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೇಸ್ತ್ರಿ ನಾಗರಾಜ ಮಹಿಳಾ ಪೌರ ಕಾರ್ಮಿಕರ ಮೇಲೆ ನಡೆಸಿದಂತ ಹಲ್ಲೆಯನ್ನು ವಿಪಕ್ಷಗಳ ನಾಯಕರು, ಮಹಿಳಾ ಸದಸ್ಯರು ಒಕ್ಕೊರಲಿನಿಂದ ಖಂಡಿಸೋ ಸಾಧ್ಯತೆ ಇದೆ. ಅಲ್ಲದೇ ಮೇಸ್ತ್ರಿ ನಾಗರಾಜನ ಗೂಂಡಾಗಿರಿಯ ಬಗ್ಗೆ ಕಾನೂನು ಕ್ರಮಕ್ಕೂ ಇಂದಿನ ವಿಶೇಷ ಸಭೆಯಲ್ಲಿ ಆಗ್ರಹಿಸಲಿದ್ದಾರೆ ಎನ್ನಲಾಗುತ್ತಿದೆ.

ಒಬ್ಬ ಮಹಿಳಾ ಪೌರ ಕಾರ್ಮಿಕರ ಮೇಲೆ ಹಲ್ಲೆಯಾಗಿದೆ. ಅದನ್ನು ಅವರವರೇ ಹಲ್ಲೆ ಮಾಡ್ಕೊಂಡಿದ್ದಾರೆ. ಅವರೇ ಬಗೆ ಹರಿಸುತ್ತಾರೆ ಅನ್ನೋ ಆಯುಕ್ತ ಹೆಚ್.ಕೆ ನಾಗಪ್ಪ ಅವರನ್ನು ಇಂದಿನ ವಿಶೇಷ ಸಭೆಯಲ್ಲಿ ನಗರಸಭೆಯ ಸದಸ್ಯರು, ವಿಪಕ್ಷಗಳ ನಾಯಕರು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಶಾಸಕರ ನಿವಾಸದಲ್ಲಿ ಬೆಳ್ಳಂ ಬೆಳಿಗ್ಗೆ ಮೀಟಿಂಗ್, ಮೇಸ್ತ್ರಿ ನಾಗರಾಜನ ಅಮಾನತ್ತಿಗೂ ನಿರ್ಧಾರ

ಶಾಸಕ ಬೇಳೂರು ಗೋಪಾಲಕೃಷ್ಣ ಅವರ ನಿವಾಸದಲ್ಲಿ ಇಂದು ನಗರಸಭೆಯ ವಿಶೇಷ ಸಭೆಯಲ್ಲಿ ಯಾವೆಲ್ಲ ವಿಷಯಗಳನ್ನು ಚರ್ಚಿಸಬೇಕು ಅಂತ ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯರ ಸಭೆಯನ್ನು ಕರೆದು ಚರ್ಚಿಸಲಾಗಿದೆ. ಈ ಸಭೆಯಲ್ಲೂ ಮೇಸ್ತ್ರಿ ನಾಗರಾಜ ಮಹಿಳಾ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದಂತ ವಿಷಯವನ್ನು ನಗರಸಭೆಯ ಸದಸ್ಯರು ಎತ್ತಿದ್ದಾರೆ ಎಂಬುದಾಗಿ ಉನ್ನತ ಮೂಲಗಳ ಮಾಹಿತಿಯಿಂದ ತಿಳಿದು ಬಂದಿದೆ.

ನಗರಸಭೆಯ ಸದಸ್ಯರ ಧ್ವನಿಗೆ ಧ್ವನಿ ಗೂಡಿಸಿರುವಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಮಹಿಳಾ ಪೌರ ಕಾರ್ಮಿಕರ ಮೇಲೆ ಮೇಸ್ತ್ರಿ ನಾಗರಾಜ ಮಾಡಿರುವಂತ ಹಲ್ಲೆ ಖಂಡನೀಯ. ಇದು ಸಮಾಜವೇ ತಲೆ ತಗ್ಗಿಸುವಂತ ಘಟನೆಯಾಗಿದೆ. ಮೇಸ್ತ್ರಿ ನಾಗರಾಜನನ್ನು ಅಮಾನತ್ತುಗೊಳಿಸೋದಕ್ಕೆ ಸೂಚಿಸಲಾಗುತ್ತದೆ ಅಂತ ಸ್ಪಷ್ಟ ಪಡಿಸಿದ್ದಾರೆ ಎಂಬುದಾಗಿ ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳ ಮಾಹಿತಿಯಿಂದ ತಿಳಿದು ಬಂದಿದೆ.

ಮೇಸ್ತ್ರಿ ನಾಗರಾಜ ಮಹಿಳಾ ಪೌರ ಕಾರ್ಮಿಕರ ಮೇಲಿನ ಹಲ್ಲೆ ನಿಜ, ಸುದ್ದಿಯೂ ನಿಖರ

ನಿಮ್ಮ ಕನ್ನಡ ನ್ಯೂಸ್ ನೌ, ಕನ್ನಡದಲ್ಲಿ ಅತ್ಯಂತ ತ್ವರಿತವಾಗಿ ಸುದ್ದಿಗಳನ್ನು ಮುಟ್ಟಿಸುವಲ್ಲಿ ನಂ.1 ಸ್ಥಾನದಲ್ಲಿದೆ. ಸಾಮಾಜಿಕ ಮಾಧ್ಯಮ ಫ್ಲಾಟ್ ಫಾರ್ಮ್ ಆದಂತ ‘ಡೈಲಿಹಂಟ್’ನಲ್ಲಿ ಬರೋಬ್ಬರಿ 1.9 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದೆ. ಒಂದು ದಿನದ ಪೇಜ್ ಹಿಟ್ಸ್ ಸಂಖ್ಯೆಯೇ 30 ಲಕ್ಷದಿಂದ 40 ಲಕ್ಷವಾಗಿದೆ. ಇದು ‘ಕನ್ನಡ ನ್ಯೂಸ್ ನೌ’ ಸುದ್ದಿಗಳ ನೈಜತೆಗೆ ಓದುಗರು ನೀಡಿದಂತ ಬೆಂಬಲವಾಗಿದೆ.

ಇನ್ನೂ ಸ್ವಚ್ಚತೆಗೆ ಪ್ರಥಮ ಆದ್ಯತೆ ನೀಡುತ್ತಿರುವಂತ ಪೌರ ಕಾರ್ಮಿಕರಿಗೆ ಕನ್ನಡ ನ್ಯೂಸ್ ನೌ ಗೌರವ ಸೂಚಿಸುತ್ತದೆ. ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತದೆ. ಅಷ್ಟೇ ಅಲ್ಲದೇ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ, ಅವರ ಧ್ವನಿಯಾಗಿ ನಿಲ್ಲುತ್ತದೆ. ಅದರ ಒಟ್ಟಿಗೆ ಸಾಮಾಜಿಕ ಜಾಲತಾಣದ ಕೆಲ ಸುದ್ದಿಗಳು ನಿಜ ಇರದೇ ಇರಬಹುದು. ಆದ್ರೇ ಮೇಸ್ತ್ರಿ ನಾಗರಾಜ ಮಹಿಳಾ ಪೌರ ಕಾರ್ಮಿಕರ ಮೇಲಿನ ಹಲ್ಲೆ ನಿಜ ಎಂಬುದನ್ನು ಈ ಮೂಲಕ ಸ್ಪಷ್ಟ ಪಡಿಸುತ್ತದೆ. ಈ ಬಗ್ಗೆ ಸೂಕ್ತ ದಾಖಲೆಗಳು ನಮ್ಮ ಬಳಿಯಲ್ಲಿದೆ ಎಂಬುದನ್ನು ಸಾಗರ ನಗರಸಭೆಯ ಅಧ್ಯಕ್ಷರು, ಸದಸ್ಯರು, ವಿಪಕ್ಷಗಳ ಮುಖಂಡರು, ಅಧಿಕಾರಿಗಳ ಗಮನಕ್ಕೆ ತರಬಯಸುತ್ತಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BREAKING : ರಾಜ್ಯದಲ್ಲಿ ʻಡೆಂಗ್ಯೂʼ ಮಹಾಮಾರಿಗೆ ಮತ್ತೊಂದು ಬಲಿ : ಮೈಸೂರಿನಲ್ಲಿ ಆರೋಗ್ಯಾಧಿಕಾರಿ ಸಾವು!

BREAKING: ಶಿವಮೊಗ್ಗ ಜಿಲ್ಲೆಯ ಯಾವುದೇ ಶಾಲೆಗಳಿಗೆ ರಜೆ ಘೋಷಣೆ ಮಾಡಿಲ್ಲ: ಡಿಸಿ ಗುರುದತ್ತ ಹೆಗಡೆ ಸ್ಪಷ್ಟನೆ

 

Share.
Exit mobile version