ಶಿವಮೊಗ್ಗ: ನಿನ್ನೆ ನಿಮ್ಮ ಕನ್ನಡ ನ್ಯೂಸ್ ನೌ, ಶಿವಮೊಗ್ಗ: ಸಾಗರ ನಗರಸಭೆ ‘ಮೇಸ್ತ್ರಿ ನಾಗರಾಜ’ನಿಂದ ‘ಮಹಿಳಾ ಪೌರ ಕಾರ್ಮಿಕ’ರ ಮೇಲೆ ಹಲ್ಲೆ  ಎಂಬುದಾಗಿ ಸುದ್ದಿಯನ್ನು ಪ್ರಕಟಿಸಿತ್ತು. ಈ ಬಗ್ಗೆ ಸಾಗರ ನಗರಸಭೆ ಆಯುಕ್ತ ನಾಗಪ್ಪ ಅವರು, ಅವರವರು ಹಲ್ಲೆ ಮಾಡ್ಕೊಂಡಿದ್ದಾರೆ. ಅವರೇ ಬಗೆ ಹರಿಸಿಕೊಳ್ಳುತ್ತಾರೆ ಅಂತ ಮಹಿಳಾ ಪೌರ ಕಾರ್ಮಿಕರ ಮೇಲೆ ಮೆಸ್ತ್ರಿ ನಾಗರಾಜ ಹಲ್ಲೆ ನಡೆಸಿದ್ರೂ ಕ್ರಮ ಕೈಗೊಳ್ಳದೇ ಉಡಾಫೆ ಉತ್ತರವನ್ನು ನೀಡಿದ್ದಾರೆ.

ಈ ಸುದ್ದಿಗೆ ಸಂಬಂಧಿಸಿದಂತೆ ಕನ್ನಡ ನ್ಯೂಸ್ ನೌ ಸಂಪಾದಕರಾದಂತ ವಸಂತ ಬಿ ಈಶ್ವರಗೆರೆ ಅವರು, ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆಯ ಆಯುಕ್ತರಾದಂತ ಹೆಚ್.ಕೆ.ನಾಗಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪ್ರತಿಕ್ರಿಯೆ ಕೇಳಿದರು. ಅದಕ್ಕೆ ಉತ್ತರಿಸಿದಂತ ಅವರು, ಮೇಸ್ತ್ರಿ ನಾಗರಾಜ ಹಾಗೂ ಮಹಿಳಾ ಪೌರ ಕಾರ್ಮಿಕರಾದಂತ ಪಣಿಯಮ್ಮ ಅವರನ್ನು ಕರೆಸಿ ಕೇಳಲಾಗಿದೆ ಎಂದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ನಾನು ಕೇಳಿದಂತ ಸಂದರ್ಭದಲ್ಲಿ ನಾವು ನಾವೇ ಮಾಡಿಕೊಂಡಿದ್ದೇವೆ. ನಮ್ಮ ಜಗಳ ನಾವೇ ಪರಿಹರಿಸಿಕೊಳ್ಳುವುದಾಗಿ ಹೇಳಿದ್ದಾರೆ. ನನಗೆ ಯಾರು ದೂರು ನೀಡಿಲ್ಲ. ಹೀಗಾಗಿ ಅವರವರು ಹಲ್ಲೆ ಮಾಡ್ಕೊಂಡಿದ್ದಾರೆ. ಅವರೇ ಪರಿಹರಿಸಿಕೊಳ್ಳುತ್ತಾರೆ ಅಂತ ಉಡಾಫೆ ಉತ್ತರವನ್ನು ನೀಡಿದ್ದಾರೆ.

ಅಲ್ಲ ಸ್ವಾಮಿ ಮಹಿಳಾ ಪೌರ ಕಾರ್ಮಿಕರ ಮೇಲೆ ಮೇಸ್ತ್ರಿ ನಾಗರಾಜ ಹಲ್ಲೆ ಮಾಡಿರೋದು ನಿಮಗೆ ಸಣ್ಣ ವಿಷಯವೇ.? ಒಬ್ಬ ಜವಾಬ್ದಾರಿಯುತ ಸಾಗರ ನಗರ ಸಭೆಯ ಆಯುಕ್ತರಾದ ನಾಗಪ್ಪ ಅವರೇ ದೂರು ಕೊಟ್ರೆ ಮಾತ್ರವೇ ನೀವು ಕ್ರಮ ಕೈಗೊಳ್ಳೋದಾ? ಮಹಿಳಾ ಪೌರ ಕಾರ್ಮಿಕರ ಮೇಲೆ ಹಲ್ಲೆ ಎಷ್ಟು ಸರಿ ಅಂತ ಸಾಗರದ ಜನತೆ ಪ್ರಶ್ನಿಸಿದ್ದಾರೆ.

ಇನ್ನೂ ಈಗಾಗಲೇ ಕನ್ನಡ ನ್ಯೂಸ್ ಮೂಲಕ ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ನಗರಾಭಿವೃದ್ಧಿ ಸಚಿವರಾದಂತ ಭೈರತಿ ಸುರೇಶ್ ಅವರ ಗಮನಕ್ಕೂ ತರಲಾಗಿದೆ. ಜೊತೆಗ ಜೊತೆಗೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಎಕ್ಸ್ ನಲ್ಲಿ ಟ್ಯಾಗ್ ಮಾಡಿ ಮೇಸ್ತ್ರಿ ನಾಗರಾಜ ವಿರುದ್ಧ ಕ್ರಮಕ್ಕೂ ಆಗ್ರಹಿಸಲಾಗಿದೆ.

UPDATE: ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

UPDATE: ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

Share.
Exit mobile version