ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಪೋಟೋವನ್ನು ಬಳಸಿಕೊಂಡು ಸೈಬರ್ ವಂಚಕನೊಬ್ಬ ಹಲವರಿಗೆ ಮೆಸೇಜ್ ಮಾಡ್ತಿದ್ದನಂತೆ. ಇದನ್ನು ಗಮನಿಸಿದಂತ ಬಿಬಿಎಂಪಿಯು, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದೆ. ಈ ಪರಿಣಾಮ ಎಫ್ಐಆರ್ ದಾಖಲಾಗಿದೆ.
ಈ ಕುರಿತಂತೆ ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರ ಹೆಸರು, ಪದನಾಮ ಹಾಗೂ ಭಾವಚಿತ್ರವನ್ನು ಅಪರಿಚಿತ ದೂರವಾಣಿ ಸಂಖ್ಯೆ: 9428053334 ಯಿಂದ ವ್ಯಾಟ್ಸಪ್ ಮೂಲಕ ಅಧಿಕಾರಿಗಳಿಗೆ ಸಂದೇಶಗಳನ್ನು ರವಾನಿಸಲಾಗುತ್ತಿದೆ ಎಂದು ಹೇಳಿದೆ.
ಅನಧಿಕೃತವಾಗಿ ಮುಖ್ಯ ಆಯುಕ್ತರ ಹೆಸರು, ಪದನಾಮ ಹಾಗೂ ಭಾವಚಿತ್ರವನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿಗಳಿಗೆ ತಪ್ಪು ಮಾಹಿತಿ ರವಾನೆಯಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆ ಮಾಹಿತಿ ತಂತ್ರಜ್ಞಾನ ವಿಭಾಗದ ಉಪ ಮುಖ್ಯ ಮಾಹಿತಿ ಅಧಿಕಾರಿಯಾದ ಪ್ರಭಾಕರ್ ರವರು ತಕ್ಷಣ ಸೈಬರ್ ಕ್ರೈಮ್‌ನಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿಸಿದೆ.
ಮುಂದುವರಿದು, ಪಾಲಿಕೆಯ ಅಧಿಕಾರಿಗಳು ಅಥವಾ ನಾಗರೀಕರು 9428053334 ಸಂಖ್ಯೆಯಿಂದ ವ್ಯಾಟ್ಸಪ್ ಮೂಲಕ ಬರುವ ಸಂದೇಶಗಳಿಗೆ ಸ್ಪಂದಿಸದಂತೆ ಮುಖ್ಯ ಆಯುಕ್ತರು ಕೋರಿರುತ್ತಾರೆ. ಈ ರೀತಿಯ ಸಂದೇಶಗಳು ಯಾರಿಗಾದರೂ ಬಂದಲ್ಲಿ ಅಥವಾ ಯಾವುದೇ ಅನುಮಾನಗಳಿದ್ದಲ್ಲಿ ಕೂಡಲೆ ಮುಖ್ಯ ಆಯುಕ್ತರ ಕಛೇರಿಗೆ ವರದಿ ಮಾಡುವಂತೆ ಅಥವಾ ಸೈಬರ್ ಕ್ರೈಮ್‌ಗೆ ದೂರು ನೀಡುವಂತೆ ವಿನಂತಿಸಿದೆ.
ಸಂಪರ್ಕಕ್ಕಾಗಿ:
ಬಿಬಿಎಂಪಿ ಸಹಾಯವಾಣಿ ಸಂಖ್ಯೆ: 1533/080-22660000
ಮುಖ್ಯ ಆಯುಕ್ತರ ಕಛೇರಿ ಸಂಖ್ಯೆ: 080-22221286/22975550
ಮುಖ್ಯ ಆಯುಕ್ತರ ಕಛೇರಿಯ ಇ-ಮೇಲ್ ಐಡಿ: comm@bbmp.gov.in
ಸೈಬರ್ ಕ್ರೈಮ್ ಟೋಲ್ ಫ್ರೀ ಸಂಖ್ಯೆ: 100/1930/080-22942222
6.80 ಲಕ್ಷ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸುವುದಕ್ಕೆ ಮುಂದಾದ ದೂರಸಂಪರ್ಕ ಇಲಾಖೆ
ಪ್ರಜ್ವಲ್ ಪೆನ್‌ಡ್ರೈವ್‌ಕೇಸ್: ಎಸ್‌ಐಟಿ ಸಹಾಯವಾಣಿಗೆ 30 ಕ್ಕೂ ಹೆಚ್ಚು ಕರೆ!