ಶಿವಮೊಗ್ಗ: ಮೆಸ್ಕಾಂ ( MESCOM ) ವಿದ್ಯುತ್ ಗ್ರಾಹಕರ ಅನುಕೂಲಕ್ಕಾಗಿ ಸಾರ್ವಜನಿಕ ರಜಾ ದಿನಗಳಲ್ಲಿಯೂ ಬಿಲ್ ಪಾವತಿ ಕೌಂಟರ್ ತೆರೆದಿರಲು ಕ್ರಮವಹಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಸೊರಬ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತ್ಯಪ್ರಕಾಶ್ ಮಾಹಿತಿ ನೀಡಿದ್ದು, ಗ್ರಾಹಕರಿಗೆ ಮೆಸ್ಕಾಂ ಬಿಲ್ಲುಗಳನ್ನು ಪಾವತಿಸಲು ಅನುಕೂಲವಾಗುವಂತೆ ಸಾರ್ವತ್ರಿಕ ರಜಾ ದಿನಗಳಲ್ಲಿಯೂ ವಿದ್ಯುತ್ ಬಿಲ್ ಪಾವತಿ ಕೇಂದ್ರಗಳನ್ನು ತೆರೆದಿರಲು ನಿರ್ಧರಿಸಲಾಗಿದೆ ಅಂತ ತಿಳಿಸಿದ್ದಾರೆ.
ಸಾರ್ವತ್ರಿಕ ರಜಾ ದಿನಗಳಾದಂತ ದಿನಾಂಕ 13-07-2024ರ ಎರಡನೇ ಶನಿವಾರ, ದಿನಾಂಕ 17-07-2024ರ ಮೋಹರಂ ಕೊನೆಯ ದಿನ, ದಿನಾಂಕ 27-07-2024ರ ನಾಲ್ಕನೇ ಶನಿವಾರ ಹಾಗೂ ದಿನಾಂಕ 28-07-2024ರ ಭಾನುವಾರದಂದು ಸೊರಬ ಉಪ ವಿಭಾಗ ವ್ಯಾಪ್ತಿಯಲ್ಲಿನ ಎಲ್ಲಾ ನಗದು ಕೌಂಟರ್ ಗಳು ತೆರೆದಿರಲಾಗಿರುತ್ತದೆ ಅಂತ ಹೇಳಿದ್ದಾರೆ.
ವಿದ್ಯುತ್ ಗ್ರಾಹಕರು ಸದರಿ ರಜಾ ದಿನಗಳಂದು ತೆರೆದಿರುವ ನಗದು ಕೌಂಟರ್ ಗಳಿಗೆ ತೆರಳಿ, ವಿದ್ಯುತ್ ಬಿಲ್ ಬಾಕಿ ಇದ್ದರೇ ಪಾವತಿಸಿ, ಸದುಪಯೋಗ ಪಡೆದುಕೊಳ್ಳಿ. ವಿದ್ಯುತ್ ಸಂಪರ್ಕ ನಿಲುಗಡೆಗೆ ಅವಕಾಶ ನೀಡದಂತೆ, ನಿಗದಿತ ಅವಧಿಯೊಳಗೆ ಬಿಲ್ ಪಾವತಿಸುವಂತೆ ಕೋರಿದ್ದಾರೆ.
ಅಂದಹಾಗೇ ಕೇವಲ ಸೊರಬ ವ್ಯಾಪ್ತಿಯ ಮೆಸ್ಕಾಂ ವಿಭಾಗದಲ್ಲಿ ಮಾತ್ರ ಸಾರ್ವತ್ರಿಕ ರಜಾ ದಿನಗಳಲ್ಲಿಯೂ ವಿದ್ಯುತ್ ಬಿಲ್ ಪಾವತಿಗಾಗಿ ನಗದು ಕೌಂಟರ್ ತೆರದಿರೋದಲ್ಲದೇ, ಮೆಸ್ಕಾಂ ವ್ಯಾಪ್ತಿಯ ಎಲ್ಲಾ ವಿಭಾಗದಲ್ಲೂ ಜುಲೈ.13, 17, 27 ಹಾಗೂ ಜುಲೈ.28ರಂದು ವಿದ್ಯುತ್ ಬಿಲ್ ಪಾವತಿಗೆ ಕೌಂಟರ್ ತೆರದಿರಲಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ‘ಅಗಲಿದ ಅಪರ್ಣಾ’ ಪಂಚಭೂತಗಳಲ್ಲಿ ಲೀನ: ‘ಅಚ್ಚಕನ್ನಡ ನಿರೂಪಕಿ’ ಇನ್ನೂ ‘ನೆನಪು’ ಮಾತ್ರ | Anchor Aparna