ಶಿವಮೊಗ್ಗ: ಜಿಲ್ಲೆಯಲ್ಲಿ ಎಂಡಿ ವ್ಯಾಸಂಗ ಮಾಡುತ್ತಿದ್ದಂತ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ನಡೆದಿದೆ.
ಶಿವಮೊಗ್ಗದ ಸಿಮ್ಸ್ ಹಾಸ್ಟೆಲ್ ನಲ್ಲಿ ಎಂ.ಡಿ ವ್ಯಾಸಂಗ ಮಾಡುತ್ತಿದ್ದಂತ ಸಂದೀಪ್ ರಾಜ್(27) ಆತ್ಮಹತ್ಯೆಗೆ ಶರಣಾದಂತ ವಿದ್ಯಾರ್ಥಿಯಾಗಿದ್ದಾನೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ತರಬೇತಿ ವೈದ್ಯನಾಗಿ ಸೇವೆಯನ್ನು ಮೃತ ಸಂದೀಪ್ ರಾಜ್ ಸಲ್ಲಿಸುತ್ತಿದ್ದರು.
ಶಿವಮೊಗ್ಗ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂ.ಡಿ ರೇಡಿಯಾಲಜಿ ವ್ಯಾಸಂಗ ಮಾಡುತ್ತಿದ್ದನು. ಇಂದು ಸಿಮ್ಸ್ ನ ಕಾಲೇಜು ಭದ್ರಾ ಹಾಸ್ಟೆಲ್ ನ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ಸಂದೀಪ್ ರಾಜ್ ತುಮಕೂರಿನ ಮಧುಗಿರಿ ಮೂಲದವರು ಎನ್ನಲಾಗುತ್ತಿದೆ. ಎಂಬಿಬಿಎಸ್ ಮುಗಿಸಿದ ಬಳಿಕ ಎಂಡಿ ವ್ಯಾಸಂಗ ಮಾಡುತ್ತಿದ್ದಂತ ಸಂದೀಪ್ ರಾಜ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದಕ್ಕಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ: ಸಿಎಂ ಸಿದ್ಧರಾಮಯ್ಯ
BREAKING: KPCL 622 ಹುದ್ದೆಗಳ ನೇಮಕಾತಿಯ ಮರು ಪರೀಕ್ಷೆ ಅಂತಿಮ ಫಲಿತಾಂಶ ಪ್ರಕಟ | KPCL Recruitment








