ಮಧ್ಯಪ್ರದೇಶ: ರಾಜ್ಯದ ಇಂದೋರ್ ನಲ್ಲಿ ಶಾಕಿಂಗ್ ಕೃತ್ಯ ಎನ್ನುವಂತೆ, ಇದು ನೀವು ಕಂಡು ಕೇಳರಿಯದ ಭಯಾನಕ ಮರ್ಡರ್ ಒಂದು ನಡೆಯಿದೆ. ಸೆಕ್ಸ್ ಗೆ ಒಪ್ಪದಂತ ಗೆಳತಿಯನ್ನು ಕೊಂದಿರುವಂತ ಎಂಬಿಎ ವಿದ್ಯಾರ್ಥಿ, ಆಕೆಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವಂತ ಘಟನೆಯೊಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಮಧ್ಯಪ್ರದೇಶದ ಇಂಧೋರ್ ನಲ್ಲಿ, ತನ್ನ ಪ್ರೇಯಸಿಯನ್ನು ಕೊಲೆಗೈದು, ಆ ಬಳಿಕ ಅತ್ಯಾಚಾರ ಮತ್ತು ಕ್ಷುದ್ರಪೂಜೆಯನ್ನು ಎಂಬಿಎ ವಿದ್ಯಾರ್ಥಿಯೊಬ್ಬ ಮಾಡಿದ್ದಾನೆ. ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಪ್ರೇಯಸಿಯನ್ನು ಎಂಬಿಎ ವಿದ್ಯಾರ್ಥಿ ಕೊಂದಿರುವುದಾಗಿ ತಿಳಿದು ಬಂದಿದೆ.
ಎಂಬಿಎ ವಿದ್ಯಾರ್ಥಿ ಪಿಯೂಷ್ ಎಂಬಾತನಿಂದ ಈ ರಾಕ್ಷಸಿ ಕೃತ್ಯವನ್ನು ಎಸಗಲಾಗಿದೆ. ಕೊಲೆಗೈದ ಬಳಿಯ ಮದ್ಯ ಖರೀದಿಸಿ ತಂದಿರುವಂತ ಆರೋಪಿ ಪಿಯೂಷ್, ಶವದ ಪಕ್ಕದಲ್ಲೇ ಮಧ್ಯ ಸೇವನೆ ಮಾಡಿ, ಆ ಬಳಿಕ ಶವದ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿರೋದಾಗಿ ಹೇಳಲಾಗುತ್ತಿದೆ.
ಪ್ರೇಯಸಿಯನ್ನು ಕೊಂದ ಬಳಿಕ ಯೂಟ್ಯೂಬ್ ನೋಡಿ ಕ್ಷುದ್ರ ಪೂಜೆಯನ್ನು ಪಿಯೂಷ್ ಮಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ. ಊದು ಬತ್ತಿ ಹಚ್ಚಿ, ಪ್ರೇಯಸಿ ಜೊತೆಗೆ ಮಾತನಾಡೋದಕ್ಕೂ ಯತ್ನಿಸಿದ್ದಾನೆ ಎನ್ನಲಾಗಿದೆ.








