ಧಾರವಾಡ: ಹೊರಗುತ್ತಿಗೆ ನೌಕರರಿಗೂ ಮಾತೃತ್ವ ರಜೆ ಅನ್ವಯವಾಗಲಿದೆ. ಮಾತೃತ್ವ ರಜೆಯ ಬಳಿಕವೂ ಉದ್ಯೋಗ ಮುಂದುವರೆಸುವಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಸಂಬಂಧ ಧಾರವಾಡದ ಹೈಕೋರ್ಟ್ ನ್ಯಾಪೀಠದಲ್ಲಿ ವಿಜಯಪುರ ಜಿಲ್ಲೆಯ ಹೂವಿನಹಡಗಲಿಯ ರೈತ ಸಂಪರ್ಕ ಕೇಂದ್ರದ ಚಾಂದ್ವಿ ಬಳಿಗಾರ್ ಎಂಬುವರು ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿಗಳು ಈ ತೀರ್ಪು ನೀಡಿದ್ದಾರೆ.
ಚಾಂದ್ವಿ ಬಳಿಗಾರ್ ಅವರು 2014ರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹೂವಿನಹಡಗಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರ ಮೇಲೆ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದ್ದರು. 2024ರವರೆಗೂ ಕೆಲಸ ಮಾಡಿದ್ದಂತ ಅವರು, ನಂತ್ರ ಮಾತೃತ್ವರ ರಜೆಗಾಗಿ ಅರ್ಜಿಯನ್ನು ಸಲ್ಲಿಸಿ, ತೆರಳಿದ್ದರು.
ಆದರೇ ಹೂವಿನಹಡಗಲಿಯ ರೈತ ಸಂಪರ್ಕ ಕೇಂದ್ರದಿಂದ ಅಕೌಟೆಂಟ್ ಹುದ್ದೆಗೆ ಚಾಂದ್ವಿ ಬಳಿಗಾರ ಮಾತೃತ್ವ ರಜೆಯಲ್ಲಿ ತೆರಳಿದ ನಂತ್ರ ಬೇರೆಯವರನ್ನು ಇಲಾಖೆ ನೇಮಕ ಮಾಡಿತ್ತು.
ರಜೆ ಮುಗಿಸಿಕೊಂಡು ಬಂದಂತ ಚಾಂದ್ವಿ ಬಳಿಗಾರ ಅವರಿಗೆ ಬೇರೆಯವರನ್ನು ನೇಮಕ ಮಾಡಲಾಗಿದೆ. ನಿಮ್ಮನ್ನು ತೆಗೆದು ಹಾಕಲಾಗಿದೆ ಎಂಬುದಾಗಿ ಇಲಾಖೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಧಾರವಾಡದ ಹೈಕೋರ್ಟ್ ನ್ಯಾಯಪೀಠಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವಂತ ಮಹಿಳಾ ನೌಕರರಿಗೂ ಮಾತೃತ್ವ ರಜೆ ಅನ್ವಯ ಆಗಲಿದೆ. ನೀಡಬೇಕು. ಅಲ್ಲದೇ ಅವರು ಮಾತೃತ್ವ ರಜೆಯಿಂದ ಮರಳಿದ ನಂತ್ರ ಉದ್ಯೋಗದಲ್ಲಿ ಮುಂದುವರೆಸಬೇಕು. ಇಲ್ಲಿಯವರೆಗೆ ಚಾಂದ್ವಿ ಬಳಿಗಾರ ಅವರಿಗೆ ಆಗಿರುವಂತ ನಷ್ಟವನ್ನು ಭರಿಸಿಕೊಡುವಂತೆ ಮಹತ್ವದ ಸೂಚನೆ, ತೀರ್ಪು ನೀಡಿದೆ.