ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಆವರಣದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಗಂಭೀರ ಸ್ವರೂಪದ ಭದ್ರತಾ ಲೋಪ ಸಂಭವಿಸಿದೆ. ಅಪರಿಚಿತ ವ್ಯಕ್ತಿಯೊಬ್ಬ ಅತಿ ಸುರಕ್ಷಿತ ವಲಯಕ್ಕೆ ಕಾರು ನುಗ್ಗಿಸಿ, ವಿಧಾನಸಭಾ ಸ್ಪೀಕರ್ ಅವರ ಕಾರಿನ ಮೇಲೆ ಇಂಕ್ ಎರಚಿ ಪರಾರಿಯಾಗಿರುವುದು ಭದ್ರತಾ ಪಡೆಗಳನ್ನು ಹೌಹಾರುವಂತೆ ಮಾಡಿದೆ.
ಘಟನೆಯ ವಿವರ: ಬ್ಯಾರಿಕೇಡ್ಗೆ ಡಿಕ್ಕಿ ಹೊಡೆಸಿ ಒಳನುಗ್ಗಿದ ಕಿರಾತಕ
ದೆಹಲಿ ವಿಧಾನಸಭೆಯ ಗೇಟ್ ನಂಬರ್ 2 ರ ಬಳಿ ಉತ್ತರ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ, ಅಲ್ಲಿದ್ದ ಬ್ಯಾರಿಕೇಡ್ಗೆ ಜೋರಾಗಿ ಡಿಕ್ಕಿ ಹೊಡೆಸಿದ್ದಾನೆ. ನಂತರ ಅತಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ವಿಧಾನಸಭಾ ಆವರಣದೊಳಗೆ ಪ್ರವೇಶಿಸಿದ್ದಾನೆ.
ಅಲ್ಲಿಗೆ ನಿಲ್ಲದ ಆ ವ್ಯಕ್ತಿ, ನೇರವಾಗಿ ಸ್ಪೀಕರ್ ಕಚೇರಿಯವರೆಗೂ ತಲುಪಿದ್ದು, ಅಲ್ಲಿ ನಿಲ್ಲಿಸಲಾಗಿದ್ದ ಸ್ಪೀಕರ್ ಅವರ ಅಧಿಕೃತ ಕಾರಿನ ಮೇಲೆ ಇಂಕ್ ಎರಚಿ ಕ್ಷಣಾರ್ಧದಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ.
ತಪಾಸಣಾ ಕಾರ್ಯಾಚರಣೆ ತೀವ್ರ
ಘಟನೆ ತಿಳಿಯುತ್ತಿದ್ದಂತೆಯೇ ದೆಹಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಪ್ರಸ್ತುತ ವಿಧಾನಸಭೆ ಆವರಣವನ್ನು ಸಂಪೂರ್ಣವಾಗಿ ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದು, ಈ ಕೆಳಗಿನ ತಂಡಗಳಿಂದ ತಪಾಸಣೆ ನಡೆಸಲಾಗುತ್ತಿದೆ:
-
ಶ್ವಾನ ದಳ (Dog Squad): ಇಡೀ ಆವರಣ ಮತ್ತು ಗೇಟ್ 2 ರ ಸುತ್ತಮುತ್ತ ಪರಿಶೀಲನೆ ನಡೆಸುತ್ತಿದೆ.
-
ಬಾಂಬ್ ಪತ್ತೆ ದಳ (Bomb Squad): ಸ್ಪೀಕರ್ ಕಚೇರಿ ಮತ್ತು ಸಂಶಯಾಸ್ಪದ ಕಾರು ಚಲಿಸಿದ ಮಾರ್ಗಗಳಲ್ಲಿ ತಪಾಸಣೆ ಕೈಗೊಂಡಿದೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಅಪರಿಚಿತ ವ್ಯಕ್ತಿ ಕಾರು ನುಗ್ಗಿಸಿದ ರೀತಿ ಮತ್ತು ಆತನ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಾರಿನ ನಂಬರ್ ಪ್ಲೇಟ್ ಆಧರಿಸಿ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ವಿಧಾನಸಭೆಯಂತಹ ಅತೀ ಸೂಕ್ಷ್ಮ ಪ್ರದೇಶದಲ್ಲಿ ಇಷ್ಟೊಂದು ಸುಲಭವಾಗಿ ವ್ಯಕ್ತಿಯೊಬ್ಬ ಒಳನುಗ್ಗಿದ್ದು ಹೇಗೆ ಎಂಬ ಬಗ್ಗೆ ಗಂಭೀರ ತನಿಖೆ ಆರಂಭವಾಗಿದೆ.
ವಿಧಾನಸಭಾ ಅಧಿವೇಶನಗಳ ಸಂದರ್ಭದಲ್ಲಿ ಇಂತಹ ಘಟನೆ ನಡೆದಿರುವುದು ಭದ್ರತಾ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಏಳುವಂತೆ ಮಾಡಿದೆ.
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಆಯ್ಕೆ ಪ್ರಶ್ನಿಸಿ ಅರ್ಜಿ: 279 ಅಂಚೆ ಮತಗಳ ಮರುಪರಿಶೀಲನೆಗೆ ಹೈಕೋರ್ಟ್ ಆದೇಶ
ರಾಜ್ಯದ ಗ್ರಾಮೀಣ ಜನತೆಯ ಗಮನಕ್ಕೆ : `ಗ್ರಾಮಪಂಚಾಯಿತಿ’ಗಳಲ್ಲಿ ಸಿಗಲಿದೆ ಈ ಸೌಲಭ್ಯಗಳು.!








