ಶಿವಮೊಗ್ಗ: ಜಿಲ್ಲೆಯ ಸಾಗರದ ಅರಣ್ಯ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಎರಡು ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ, ಅಕ್ರಮವಾಗಿ ದಾಸ್ತಾನು ಮಾಡಿದ್ದಂತ ನಾಲ್ವರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಉಪ ವಿಭಾಗದ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಅಣ್ಣಪ್ಪ ಅವರಿಗೆ ಮೇಖರವಳ್ಳಿಯ ಕಾಸ್ವಾಡಿ ಅರಣ್ಯದಲ್ಲಿ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿದ್ದಂತ ಖಚಿತ ಮಾಹಿತಿ ದೊರೆತಿತ್ತು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಎರಡು ಸಾಗುವಾನಿ ಮರಗಳನ್ನು ಕಡಿತಲೆ ಮಾಡಿದ್ದು ಗಮನಕ್ಕೆ ಬಂದಿತ್ತು. 10-15 ದಿನಗಳ ಹಿಂದೆ ಸಾಗುವಾನಿ ಮರಗಳನ್ನು ಕಡಿದಿರೋದು ಸ್ಥಳ ಪರಿಶೀಲನೆ ವೇಳೆಯಲ್ಲಿ ತಿಳಿದು ಬಂದಿತ್ತು.
ಈ ಹಿನ್ನಲೆಯಲ್ಲಿ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿದವರ ಪತ್ತೆಗೆ ಬಲೆಯನ್ನು RFO ಅಣ್ಣಪ್ಪ ಬೀಸಿದ್ದರು. ಫಾರೆಸ್ಟರ್ ಶಿವರಾಜ್, ಗಾರ್ಡ್ ಉಮೇಶ್ ಪಾಟೀಲ್, ವಾಚರ್ ಯಮನೂರಪ್ಪ ಅವರನ್ನೊಳಗೊಂಡ ತಂಡದಿಂದ ಕಾಸ್ವಾಡಿ ಗ್ರಾಮದಲ್ಲಿ 2 ಸಾಗುವಾನಿ ಮರ ಕಡಿತಲೆ ಮಾಡಿ ಬಚ್ಚಿಟ್ಟಿದ್ದಂತ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ ಅಕ್ರಮವಾಗಿ ಕಡಿತಲೆ ಮಾಡಿದ್ದಂತ 2 ಸಾಗುವಾನಿ ಮರದ ಐದು ತುಂಡುಗಳನ್ನು ಜಪ್ತಿ ಮಾಡಿದ್ದಾರೆ. ಇದರ ಮೌಲ್ಯ ಸುಮಾರು 1 ಲಕ್ಷದಿಂದ 1.50 ಲಕ್ಷದ್ದು ಎಂದು ಅಂದಾಜಿಸಲಾಗಿದೆ.
ಅಕ್ರಮವಾಗಿ ಸಾಗುವಾನಿ ಮರ ಕಡಿತಲೆ ಮಾಡಿದಂತ ಸಂಬಂಧ ಕಾಸ್ವಾಡಿಯ ಪ್ರಶಾಂತ, ಪ್ರೀತಂ, ವೇಣು ಹಾಗೂ ಪ್ರದೀಪ್ ಎಂಬ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಇನ್ನೂ ಇಬ್ಬರಿದ್ದು ಅವರು ತಲೆ ಮರೆಸಿಕೊಂಡಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅವರ ಪತ್ತೆಗೆ ಬಲೆ ಬೀಸಲಾಗಿದೆ.
ಸಾಗರದ ಉಪ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಸಾಗರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. RFO ಅಣ್ಣಪ್ಪ, ಫಾರೆಸ್ಟರ್ ಶಿವರಾಜ್, ಗಾರ್ಡ್ ಉಮೇಶ್ ಪಾಟೀಲ್, ವಾಚರ್ ಯಮನೂರಪ್ಪ ಅವರ ಕಾರ್ಯವನ್ನು ಸಾಗರ DFO, ACF ಶ್ಲಾಘಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BIG NEWS: ಸಾಗರ ತಾಯಿ ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’ ಕೇಸ್: ಆರೋಗ್ಯ ಇಲಾಖೆ ‘ಕಚೇರಿ ಅಧೀಕ್ಷಕ’ನೇ ಸಾಥ್