ಹಾಸನ: ಜಿಲ್ಲೆಯ ಶಿರಾಡಿ ಘಾಟ್ ನಲ್ಲಿ ಭಾರೀ ಭೂ ಕುಸಿತ ಉಂಟಾಗಿದೆ. ಇದರ ಪರಿಣಾಮ ಕಾರು, ಟ್ಯಾಂಕರ್ ಗಳು ಮಣ್ಣಿನಡಿ ಸಿಲುಕಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರು ಟು ಮಂಗಳೂರಿಗೆ ಸಂಪರ್ಕ ಕಲ್ಪಿಸುವಂತ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ನ ಸಕಲೇಶಪುರ ತಾಲ್ಲೂಕಿನ ದೊಡ್ಡತೆಪ್ಲೆ ಬಳಿಯಲ್ಲಿ ಭೂ ಕುಸಿತ ಉಂಟಾಗಿದೆ. ದಿಢೀರ್ ಭೂ ಕುಸಿತ ಉಂಟಾದ ಪರಿಣಾಮ, ಎರಡು ಕಾರು, ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಮಣ್ಣಿನಡಿ ಸಿಲುಕಿರುವುದಾಗಿ ಹೇಳಲಾಗುತ್ತಿದೆ.
ಸತತ ಮಳೆಯ ಕಾರಣದಿಂದ ಭೂ ಕುಸಿತ ಉಂಟಾದ ಪರಿಣಾಮ ಶಿರಾಡಿ ಘಾಟ್ ರಸ್ತೆ ಸಂಚಾರ ಬಂದ್ ಆಗಿದೆ. ಇದೀ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಯಾವುದೇ ಸಾವು ನೋವು ಆದ ಬಗ್ಗೆ ವರದಿಯಾಗಿಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಮನು ಭಾಕರ್-ಸರಬ್ ಜಿತ್ ಸಿಂಗ್ ಕಂಚಿನ ಪದಕ ಗೆಲುವು: ಪ್ರಧಾನಿ ಮೋದಿ ಅಭಿನಂದನೆ | PM Modi
BREAKING :40 ವರ್ಷಗಳ ಹಿಂದೆಯೇ HD ಕುಮಾರಸ್ವಾಮಿಗೆ ‘ಮುಡಾ’ ಸೈಟ್ ಸಿಕ್ಕಿದೆ : ಸಿಎಂ ಸಿದ್ದರಾಮಯ್ಯ ತಿರುಗೇಟು