ಧಾರವಾಡ : ಬಸವಣ್ಣನವರು ಕೇಳಜಾತಿಯವರೊಂದಿಗೆ ಮೆಲ್ಜಾತಿಯವರ ಮದುವೆ ಮಾಡಿ, ಅಂದೇ ಸಮಾಜದಲ್ಲಿ ಸಮಾನತೆ ತರಲು ಮುನ್ನುಡಿ ಬರೆದರು. ಸರ್ವ ಧರ್ಮಗಳ ವಧುವರರು ಸಾಮೂಹಿಕ ವಿವಾಹ ಆಗುವದರೊಂದಿಗೆ ಸಮಾಜದಲ್ಲಿ ಅಂತರ್ಜಾತಿ ಮದುವೆಗಳು ಆಗಬೇಕು. ಇದರಿಂದ ಸಮಾಜದ ಸರ್ವರಲ್ಲಿ ಸಮಾನತೆ ತರಲು ಸಹಾಯವಾಗುತ್ತದೆ ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಹೇಳಿದರು.
ಅವರು ನವಲಗುಂದ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಜರುಗಿದ ಶಾಸಕ ಎನ್.ಎಚ್.ಕೋನರಡ್ಡಿ ಅವರು ಮಗ ನವೀನಕುಮಾರ ಅವರ ವಿವಾಹ ಆರತಕ್ಷತೆ ಅಂಗವಾಗಿ ಆಯೋಜಿಸಿದ್ದ 75 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭಾಶಯ ಕೋರಿ ಮಾತನಾಡಿದರು. ಅವರು ಮಾತನಾಡಿ, ಶಾಸಕಕೋನರಡ್ಡಿ ಅವರು, 75 ಜೋಡಿಗಳ ಸಾಮೂಹಿಕ ಮದುವೆಗಳನ್ನು ಏರ್ಪಡು ಮಾಡಿದ್ದಾರೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಈ ಸಂದರ್ಭದಲ್ಲಿ ಮದುವೆಯಾಗುತ್ತಿರುವುದು ಸಂತೋಷದ ಕ್ಷಣವಾಗಿದೆ ಎಂದು ಅವರು ಹೇಳಿದರು.
ನಮ್ಮ ಸಮಾಜದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧರ ನಡುವೆ ಎಲ್ಲರೂ ಮನುಷ್ಯರು ಮನುಷ್ಯರಾಗಿ ಬದುಕಬೇಕು ಮತ್ತು ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆಯು ಹೋಗಲಾಡಬೇಕು ಎಂದು ಅವರು ತಿಳಿಸಿದರು.
ಜಾತಿ ವ್ಯವಸ್ಥೆಯು ಹೋಗಬೇಕೆಂದರೆ ಅಂತರ್ಜಾತಿಯ ವಿವಾಹಗಳು ಹೆಚ್ಚು ಹೆಚ್ಚು ಆಗಬೇಕು ಮತ್ತು ಬಸವಣ್ಣವರು ದಲಿತ ಮತ್ತು ಮೇಲಜಾತಿಯ ವಧುವರರಿಗೆ ಮದುವೆ ಮಾಡಿ ಜಾತಿ ವ್ಯವಸ್ಥೆಯನ್ನು ಸಮಾಜದಿಂದ ಹೋಗಲಾಡಿಸಬೇಕೆಂದು ಅವರು ಮದುವೆಯನ್ನು ಮಾಡಿದ್ದರು ಎಂದು ಹೇಳಿದರು.
ನವಲಗಂದದಲ್ಲಿ ಮದುವೆಯು ಜಾತ್ರೆಯಂತೆ ಕಾಣುತ್ತಿದೆ. ಕೋನರೆಡ್ಡಿ ಅವರು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಈ ಸಂದರ್ಭದಲ್ಲಿ ಸೇರಿಸಿದ್ದಾರೆ ಮತ್ತು ವಧು-ವರರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರಲ್ಲಿ ನನ್ನ ಕಿವಿಮಾತು ಹೇಳುವುದೇನೆಂದರೆ ಆರ್ಥಿಗೊಬ್ಬ ಕೀರ್ತಿಗೊಬ್ಬ ಎಂಬ ನುಡಿ ಮುತ್ತಿನಂತೆ ಇಬ್ಬರೇ ಮಕ್ಕಳನ್ನು ಮಾಡಿಕೊಳ್ಳಬೇಕು. ಏಕೆಂದರೆ ಭಾರತದಲ್ಲಿ ಜನಸಂಖ್ಯೆ ಅತೀ ಹೆಚ್ಚಾಗುತ್ತಾ ಹೋಗುತ್ತಿದೆ ಎಂದು ಅವರು ತಿಳಿಸಿದರು.
ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ ಅವರು ಮಾತನಾಡಿ, ನವಲಗುಂದದಲ್ಲಿ ಐತಿಹಾಸಿಕ ಕಾರ್ಯಕ್ರಮವನ್ನು ಶಾಸಕರಾದ ಎನ್. ಹೆಚ್ ಕೋನರೆಡ್ಡಿ ಮಾಡಿದ್ದಾರೆ. ಅವರು ಬಡವರು ಮತ್ತು ದಲಿತರ ಬಗ್ಗೆ ಹೋರಾಟವನ್ನು ಮಾಡುತ್ತಾ ಬಂದವರು. ಒಬ್ಬ ಒಳ್ಳೆಯ ನಾಯಕ ಎಂದು ಹೇಳಿದರು.
ಹುಳಿ ಪೆಟ್ಟು ಬಿದ್ದ ಮೇಲೆ ಕಲ್ಲು ಶಿಲೆಯಾಗಲು ಸಾಧ್ಯ. ಇಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಇಲ್ಲದೆ ಈ ಕಾರ್ಯಕ್ರಮ ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ತಿಳಿಸಿದರು.
ಹೆಣ್ಣು ಒಂದು ಕಡೆ ಗಂಡು ಒಂದು ಕಡೆ ಇತ್ತು. ಅವರಿಬ್ಬರೂ ಸೇರಿ ವಧು ವರರಾದರೆ, ಅಕ್ಕಿ ಒಂದು ಕಡೆ ಅರಿಶಿನ ಒಂದು ಕಡೆಯಿತ್ತು ಅವೆರಡು ಸೇರಿ ಮಂತ್ರಾಕ್ಷತೆಯಾಯಿತು. ಹಾಗೆ ಇವತ್ತು ಎಲ್ಲರನ್ನು ಸೇರಿಸಿ ಈ ಸರ್ಕಾರ ನಿಮ್ಮ ತಾಲೂಕಿನ ಎಲ್ಲ ಜನತೆಗೆ ನೂತನವಾಗಿ ವಧುವರರಿಗೆ ಆಶೀರ್ವಾದ ಮಾಡುವ ಭಾಗ್ಯ ತಂದುಕೊಂಡಿದ್ದಾರೆ ಅದಕ್ಕೆ ಇಡೀ ಸರ್ಕಾರದ ಪರವಾಗಿ ಅವರಿಗೆ ನನ್ನ ಶುಭವನ್ನು ಮತ್ತು ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಕೋನರೆಡ್ಡಿ ಅವರ ಮಗ, ಸೊಸೆಗೆ ಹಾಗೂ ಇಲ್ಲಿ ಇರುವ ಎಲ್ಲಾ ವಧುವರರಿಗೆ ಈ ಪವಿತ್ರವಾದ ಶುಭ ಗಳಿಗೆಯಲ್ಲಿ ಇಡೀ ರಾಜ್ಯಕ್ಕೆ ನಿಮ್ಮ ಕುಟುಂಬ ಮಾದರಿಯಾಗುವ ಶಕ್ತಿಯನ್ನು ದೇವರು ಕೊಡಲಿ ಎಂದು ಆಶಿಸುತ್ತೇನೆ ಎಂದು ಅವರು ಹೇಳಿದರು.
ಮದುವೆಯ ಖರ್ಚಿನ ಹಣದಿಂದ ಸ್ವಂತ ಉದ್ಯೋಗವನ್ನು ಮಾಡುವ ಮೂಲಕ ಹೊಸ ಜಗತ್ತಿನಲ್ಲಿ ಮತ್ತೊಬ್ಬರಿಗೆ ಉದ್ಯೋಗವನ್ನು ಕೊಡುವ ರೀತಿಯಲ್ಲಿ ಬೆಳೆಯಿರಿ ಚೆನ್ನಾಗಿ ಸಂಸಾರವನ್ನು ತೂಗಿಸಿಕೊಂಡು ಹೋಗಿ, ಆದರ್ಶ ದಂಪತಿಗಳಾಗಿ ಬದುಕಬೇಕೆಂದರು.
ಶಾಸಕರಾದ ಎನ್. ಹೆಚ್ ಕೋನರೆಡ್ಡಿ ಮತ್ತು ಸರಕಾರವು ಒಳ್ಳೆಯ ಕೆಲಸ ಮಾಡುತ್ತದೆ. ಎಲ್ಲರಿಗೂ ಶುಭವಾಗಲಿ, ಮಂಗಳವಾಗಲಿ ಬದುಕು ಬಂಗಾರವಾಗಿರಲಿ ಎಂದು ಉಪಮುಖ್ಯಮಂತ್ರಿಗಳು ಹೇಳಿದರು.
ಕೇಂದ್ರ ಸಚಿವರು ಮತ್ತು ಧಾರವಾಡ ಲೋಕಸಭಾ ಮತಕ್ಷೇತ್ರದ ಸಂಸದರು ಆಗಿರುವ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಶಾಸಕ ಎನ್. ಎಚ್ ಕೋನರಡ್ಡಿ ಅವರ ಸುಪುತ್ರನ ವಿವಾಹ ಸಂದರ್ಭದಲ್ಲಿ ರಿಸೆಪ್ಶನ್ ನಡೆಯುತ್ತಿರುವ ದಿವಸ 75 ಜೋಡಿಗಳ ಸಾಮೂಹಿಕ ವಿವಾಹವನ್ನು ಮಾಡಿದ್ದು, ಇತರರಿಗೆ ಮಾದರಿ ಎಂದು ಅವರು ಹೇಳಿದರು.
ಕೋನರೆಡ್ಡಿ ಅವರ ಮಗ ಮತ್ತು ಅವರ ಧರ್ಮ ಪತ್ನಿಗೆ ಎಲ್ಲ 75 ಜೋಡಿಗಳಿಗೆ, ನವದಂಪತಿಗಳಿಗೆ ನಾನು ಹೃದಯ ಪೂರ್ವಕವಾದ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.
ನವೀನಕುಮಾರ ಕೋನರಡ್ಡಿ ದಂಪತಿಗಳು ಸೇರಿದಂತೆ ಎಲ್ಲ 76 ನವಜೋಡಿಗಳನ್ನು ನೂರಾರು ವರ್ಷ ಅತಿ ಸಂತೋಷದಿಂದ ನೆಮ್ಮದಿಯಿಂದ ಬಾಳಬೇಕೆಂದು, ಮಕ್ಕಳೊಂದಿಗೆ, ಮೊಮ್ಮಕ್ಕಳೊಂದಿಗೆ, ಮರಿ ಮೊಮ್ಮಕ್ಕಳೊಂದಿಗೆ ಬಾಳಲಿ ಎಂದು ಹರಿಸುತ್ತೇನೆ ಪರಮಾತ್ಮ ದಯಪಾಲಿಸಲಿ ಎಂದು ಅವರು ತಿಳಿಸಿದರು.
75 ಸಾಮೂಹಿಕ ವಿವಾಹ ಮಾಡಿದ ಎನ್.ಎಚ್ ಕೋನರೆಡ್ಡಿ ಅವರಿಗೆ ನನ್ನ ವೈಯಕ್ತಿಕ ಧನ್ಯವಾದಗಳು ತಿಳಿಸುತ್ತೇನೆ ಎಂದು ಅವರು ಹೇಳಿದರು.
ಶಾಸಕರಾದ ಎನ್.ಹೆಚ್ ಕೋನರಡ್ಡಿ ಅವರು ಮಾತನಾಡಿ, ನವಲಗುಂದದಲ್ಲಿ ದೊಡ್ಡ ಇತಿಹಾಸ ಸೃಷ್ಟಿಯಾಗಿದೆ. 75 ಜೋಡಿಯ ಸರ್ವ ಧರ್ಮದ ಮದುವೆಯನ್ನು ನಮ್ಮ ಕ್ಷೇತ್ರದ ಜನ ಮಾಡಿದ್ದಾರೆ ಎಂದು ಹೇಳಿದರು.
ನನ್ನ ಮಗನ ಆರಕ್ಷತೆ ಕಾರ್ಯಕ್ರಮ ಜರಗಿತ್ತು. 10 ಎಕರೆಯ ಜಮೀನಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಮತ್ತು 26 ಎಕರೆಯ ಜಮೀನಿನಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿದರೂ, ಎಲ್ಲ ಕಡೆ ಜಾಮ್ ಆಗಿದೆ ಅದು ನಿಮ್ಮೆಲ್ಲರ ಆಶೀರ್ವಾದ ಎಂದು ಅವರು ಹೇಳಿದರು.
ಮಾನ್ಯ ಮುಖ್ಯಮಂತ್ರಿ , ಉಪ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಎಲ್ಲ ಸಹೋದರರು ಸೇರಿ ದೊಡ್ಡ ಆಶೀರ್ವಾದವನ್ನು ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಇವತ್ತಿನ ನಮ್ಮ ಸರಕಾರದಿಂದ ಹಾಸ್ಟೆಲ್ ಕಟ್ಟಡ ಉದ್ಘಾಟನೆ ಆಗುತ್ತಿದ್ದು, ಅದು ಫೈವ್ ಸ್ಟಾರ್ ಹೋಟೇಲ್ ತರಹ ಸೌಲಭ್ಯ ಹೊಂದಿದೆ. ಮತ್ತು 5 ಗ್ಯಾರಂಟಿ ಸೌಲಭ್ಯಗಳನ್ನು ನಮ್ಮ ಸರಕಾರ ಜನರಿಗೆ ಕೊಟ್ಟು ಜನ ಸೇವೆಯನ್ನು ಮಾಡುತ್ತಿದೆ ಎಂದು ಅವರು ಹೇಳಿದರು.
ಜಾತ್ಯಾತೀತವಾಗಿ ನವಲಗುಂದ ಜನ ನಂಗೆ ಸಹಕಾರವನ್ನು ನೀಡಿದ್ದೀರಿ ನಿಮ್ಮೆಲ್ಲರಿಗೂ ಹೃದಯಪೂರ್ವಕ ವಂದನೆಗಳು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ಸಂಪುಟದ ಸಚಿವರಾದ
ಕೆ.ಜೆ.ಜಾರ್ಜ್, ಎಚ್.ಸಿ.ಮಹಾದೇವಪ್ಪ, ಕೃಷ್ಣ ಭೈರೆಗೌಡ, ರಾಮಲಿಂಗಾರಡ್ಡಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಬಸವರಾಜ ರಾಯರೆಡ್ಡಿ, ಪ್ರಸಾದ ಅಬ್ಬಯ್ಯ, ಬಸವರಾಜ ಶಿವಣ್ಣವರ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಸೇರಿದಂತೆ
ವಿವಿಧ ಸಚಿವರು, ಶಾಸಕರು, ವಿಧಾನ ಪರಿಷತ್ತ ಸದಸ್ಯರು, ಮಾಜಿ ಸಚಿವರು, ಶಾಸಕರು, ವಿವಿಧ ಜನ್ರತಿನಿಧಿಗಳು, ಗಣ್ಯರು ಭಾಗವಹಿಸಿ, ನವ ವಧುವರರಿಗೆ ಆಶಿರ್ವದಿಸಿ, ಶುಭಾಶಯ ಕೋರಿದರು.
ನವಲಗುಂದ ತಾಲೂಕಿನ ನಾಗರಿಕರು ಸೇರಿದಂತೆ ನವಲಗುಂದ ತಾಲೂಕಿನ ಸುತ್ತಮುತ್ತಲಿನ ವಿವಿಧ ತಾಲೂಕಿನ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾಕ್ಷೀಕರಿಸಿದರು.








