ನವದೆಹಲಿ : ಹೊಸ ಖರೀದಿಸುವವರಿಗೆ ಮಾರುತಿ ಸುಜುಕಿ ಕಂಪನಿ ಬಿಗ್ ಶಾಕ್ ನೀಡಿದೆ. ಮಾರುತಿ ಸುಜುಕಿ ಇಂಡಿಯಾ ಕಂಪನಿ ವಿವಿಧ ಮಾಡೆಲ್‌ನ ಕಾರುಗಳ ಬೆಲೆಯನ್ನು ಫೆ. 1ರಿಂದ ಸುಮಾರು 32,500 ರೂ.ವರೆಗೆ ಹೆಚ್ಚಳ ಮಾಡಲಿದೆ ಎಂದು ತಿಳಿಸಿದೆ.
ಕಾರ್ಯಾಚರಣೆ ವೆಚ್ಚ ಮತ್ತು ತಯಾರಿಕೆ ವೆಚ್ಚ ಹೆಚ್ಚಾಗಿರುವುದರಿಂದ ಈ ಕ್ರಮಕ್ಕೆ ಮುಂದಾಗಿರುವುದಾಗಿ ಕಂಪನಿ ಗುರುವಾರ ತಿಳಿಸಿದೆ. ಸೆಲೆರಿಯೊ 32,500 ರೂ., ಇನ್‌ಕ್ಟೋ 30 ಸಾವಿರ ರೂ., ವ್ಯಾಗನ್ ಆರ್ 15 ಸಾವಿರ ರೂ., ಸ್ವಿಫ್ಟ್ 5 ಸಾವಿರ ರೂ., ಬ್ರೆಜಾ ಮತ್ತು ಗ್ರಾಂಡ್ ವಿತಾರಾ ಕ್ರಮವಾಗಿ 20 ಸಾವಿರ ಮತ್ತು 25 ಸಾವಿರ ರೂ., ಆಲ್ಲೊ ಕೆ10 ಸುಮಾರು 19,500 ರೂ., ಎಸ್-ಪ್ರೆಷ್ಟೊ 5 ಸಾವಿರ ರೂ., ಬಲೆನೊ 9 ಸಾವಿರ ರೂ., ಫ್ರಾಂಕ್ಸ್ 5,500 ರೂ., ಡಿಜೈರ್ 10 ಸಾವಿರ ರೂ. ಹೆಚ್ಚಾಗಲಿದೆ ಎಂದು ಕಂಪನಿ ತಿಳಿಸಿದೆ.
ಕಂಪನಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಗ್ರಾಹಕರ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಬದ್ಧವಾಗಿದ್ದರೂ, ಹೆಚ್ಚಿದ ವೆಚ್ಚದ ಒಂದು ಭಾಗವನ್ನು ಮಾರುಕಟ್ಟೆಗೆ ವರ್ಗಾಯಿಸುವಂತೆ ನಾವು ನಿರ್ಬಂಧಿತರಾಗಿದ್ದೇವೆ” ಎಂದು ಇದು ಹೇಳಿದೆ. ಕಂಪನಿಯ ಹ್ಯಾಚ್‌ಬ್ಯಾಕ್ ಸೆಲೆರಿಯೊದ ಎಕ್ಸ್-ಶೋರೂಮ್ ಬೆಲೆ 32,500 ರೂಪಾಯಿಗಳವರೆಗೆ ಹೆಚ್ಚಾಗಲಿದೆ, ಆದರೆ ಪ್ರೀಮಿಯಂ ಮಾದರಿ ಇನ್ವಿಕ್ಟೋದ ಬೆಲೆ 30,000 ರೂಪಾಯಿಗಳವರೆಗೆ ಹೆಚ್ಚಾಗಲಿದೆ.
ಪಾಪ್ಯುಲರ್ ಮಾಡೆಲ್ ವ್ಯಾಗನ್-ಆರ್ ಬೆಲೆ 15,000 ರೂಪಾಯಿಗಳವರೆಗೆ ಹೆಚ್ಚಾಗಲಿದೆ, ಸ್ವಿಫ್ಟ್‌ನ ಬೆಲೆ 5,000 ರೂಪಾಯಿಗಳವರೆಗೆ ಹೆಚ್ಚಾಗಲಿದೆ. ಎಸ್‌ಯುವಿ ಬ್ರೆಜ್ಜಾ ಮತ್ತು ಗ್ರಾಂಡ್ ವಿಟಾರಾ ಬೆಲೆಗಳಲ್ಲಿ ಹೆಚ್ಚಳವಾಗಲಿದೆ ಎಂದು ಕಂಪನಿ ಮಾಹಿತಿ ನೀಡಿದೆ.