ಬೆಂಗಳೂರು: ಕರ್ನಾಟಕ ವಿಧಾನಸಭೆಯ ಸ್ಪೀಕರ್ ಪೀಠಕ್ಕೆ ಅಗೌರವ ತಂದಂತ ಆರೋಪದ ಹಿನ್ನಲೆಯಲ್ಲಿ ವಿಧಾನಸಭೆಯಲ್ಲಿ ಆರು ತಿಂಗಳುಗಳ ಕಾಲ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದರು. ಅಲ್ಲದೇ ತಕ್ಷಣವೇ ಹೊರ ನಡೆಯುವಂತೆ ಸ್ಪೀಕರ್ ಸೂಚಿಸಿದರು. ಆದರೇ ಸ್ಪೀಕರ್ ಸೂಚನೆಗೆ ಧಿಕ್ಕರಿಸಿ ಸದನದಲ್ಲೇ ಇದ್ದಂತ 18 ಬಿಜೆಪಿಯ ಅಮಾನತು ಶಾಸಕರನ್ನು ಮಾರ್ಷಲ್ ಗಳು ಹೊತ್ತೊಯ್ದು ಹೊರ ಹಾಕಿದರು.
ಇಂದು ವಿಧಾನಸಭೆಯ ಕಲಾಪ ಮಧ್ಯಾಹ್ನ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಶಾಸಕರಿಂದ ಗಲಾಟೆ, ಕೋಲಾಹಲ ಏಳಿಸಲಾಯಿತು. ಸ್ಪೀಕರ್ ಪೀಠಕ್ಕೆ ಅಗೌರವ ತೋರುವಂತ ನಡೆಯನ್ನು ಬಿಜೆಪಿಯ ಶಾಸಕರು ನಡೆದುಕೊಂಡಿದ್ದಾಗಿ ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ವಿಧಾನಸಭೆಯ ಕಲಾಪದಿಂದ 6 ತಿಂಗಳವರೆಗೆ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯುಟಿ ಖಾದರ್ ಆದೇಶ ಮಾಡಿದ್ದಾರೆ.
ಹೀಗಿದೆ ವಿಧಾನಸಭೆ ಕಲಾಪದಿಂದ 6 ತಿಂಗಳುಗಳ ಕಾಲ ಅಮಾನತುಗೊಂಡ 18 ಬಿಜೆಪಿ ಶಾಸಕರ ಪಟ್ಟಿ
- ದೊಡ್ಡನಗೌಡ ಪಾಟೀಲ್
- ಅಶ್ವಥನಾರಾಯಣ
- ಎಸ್ ಆರ್ ವಿಶ್ವನಾಥ್
- ಬೈರತಿ ಬಸವರಾಜು
- ಎಮ್ ಆರ್ ಪಟೇಲ್
- ಚನ್ನಬಸಪ್ಪ
- ಉಮಾನಾಥ್ ಕೋಟ್ಯನ್
- ಸುರೇಶ್ ಗೌಡ
- ಶೈಲೇಂದ್ರ ಬೆಲ್ದಾಳೆ
- ಶರಣು ಸಲಗಾರ್
- ಸಿಕೆ ರಾಮಮೂರ್ತಿ
- ಯಶ್ಪಾಲ್ ಸುವರ್ಣ
- ಹರಿಶ್ ಬಿ ಪಿ
- ಭರತ್ ಶೆಟ್ಟಿ
- ಬಸವರಾಜ ಮತ್ತಿಮೂಡ್
- ಧೀರಜ್ ಮುನಿರಾಜು
- ಮುನಿರತ್ನ
- ಚಂದ್ರು ಲಮಾಣಿ
ಸ್ಪೀಕರ್ ಪೀಠದಲ್ಲಿ ಕುಳಿತಿರುವ ಯು.ಟಿ ಖಾದರ್ ನಿಮ್ಮನ್ನು ಕ್ಷಮಿಸಬಹುದು. ಆದರೇ ಸ್ಪೀಕರ್ ಪೀಠಕ್ಕೆ ಅಗೌರವ ತೋರುವುದನ್ನು ಸಹಿಸುವುದಿಲ್ಲ ಎಂಬುದಾಗಿ ಸ್ಪೀಕರ್ ಯುಟಿ ಖಾದರ್ ಅವರು ಅಮಾನತು ಆದೇಶದ ಸಂದರ್ಭದಲ್ಲಿ ಹೇಳಿದ್ದಾರೆ. ಅಲ್ಲದೇ ಕೂಡಲೇ ಹೊರ ಹೋಗುವಂತೆ ಸೂಚಿಸಿದರು. ಆದರೇ ಸದನದಲ್ಲೇ ಉಳಿದಂತ ಅಮಾನತುಗೊಂಡ ಶಾಸಕರನ್ನು ಮಾರ್ಷಲ್ ಗಳು ಹೊತ್ತೊಯ್ದು ಹೊರ ಹಾಕಿದರು.
BREAKING : `ಹನಿಟ್ರ್ಯಾಪ್’ಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ : CM ಸಿದ್ದರಾಮಯ್ಯ ಘೋಷಣೆ | Honeytrap cace