ಬೆಂಗಳೂರು: ರಾಜ್ಯದಲ್ಲಿ ವಿವಾಹ ನೋಂದಣಿ ಮತ್ತಷ್ಟು ಸರಳೀಕರಣಗೊಳಿಸಲಾಗಿದೆ. ಸಬ್ ರಿಜಿಸ್ಟಾರ್ ಕಚೇರಿಗೆ ಅಲೆಯೋದಕ್ಕೆ ಬ್ರೇಕ್ ಹಾಕಿರೋ ರಾಜ್ಯ ಸರ್ಕಾರ, ಕಾವೇರಿ-2 ಆಪ್ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿದೆ.
ಫೆಬ್ರವರಿ.1ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿವಾಹ ನೋಂದಣಿ ಮಸೂದೆಗೆ ತಿದ್ದುಪಡಿ ತರೋ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹಿಂದೂ ವಿವಾಹಗಳ ನೋಂದಣಿ(ತಿದ್ದುಪಡಿ) ನಿಯಮಗಳು-2024ಅನ್ನು ಸಚಿವ ಸಂಪುಟ ಸಭೆ ಅನುಮೋದಿಸಲಾಗಿದೆ.
ಈ ತಿದ್ದುಪಡಿ ನಿಯಮಗಳಂತೆ ವಿವಾಹ ನೋದಂಣಿ ಇನ್ನೂ ಸುಲಭವಾಗಿದ್ದು, ಕಾವೇರಿ-2 ತಂತ್ರಾಂಶದಲ್ಲಿ ಆನ್ ಲೈನ್ ಮೂಲಕ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದ ವಿವಾಹ ನೋಂದಣಿಗೆ ಗ್ರಾಮ ಪಂಚಾಯ್ತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿಯೂ ಅವಕಾಶ ಕಲ್ಪಿಸಲಾಗುತ್ತಿದೆ.
ಒಟ್ಟಾರೆಯಾಗಿ ರಾಜ್ಯದಲ್ಲಿ ವಿವಾಹ ನೋಂದಣಿಗಾಗಿ ಸಬ್ ರಿಜಿಸ್ಟರ್ ಕಚೇರಿಗೆ ಅಲೆಯೋದು ಇನ್ಮುಂದೆ ತಪ್ಪಲಿದೆ. ಇನ್ನೂ ಏನಿದ್ದರೂ ಡಿಜಿಟಲ್ ಯುಗದಲ್ಲಿ ವಿವಾಹ ಆಗೋ ಎಲ್ಲರೂ ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ವಿವಾಹ ನೋಂದಣಿಯನ್ನು ಮಾಡಬಹುದಾಗಿದೆ.