ಬೆಳಗಾವಿ: ಒಂದೆಲ್ಲ ಒಂದು ವಿಚಾರಕ್ಕೆ ಖ್ಯಾತೆ ತೆಗೆಯುತ್ತಿದ್ದ ಎಂಇಎಸ್‌ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ. ಇದೀಗ ಅವರು ಕರ್ನಾಟಕ ಪೊಲೀಸರನ್ನು ಬೈಯುವ ಸಿನಿಮಾವನ್ನ ಮಾಡಿದ್ದಾರೆ. ಆ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

BIGG NEWS: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಮತಾಂತರ ನಿಷೇಧ ಕಾಯ್ದೆ ವಾಪಸ್‌ ಪಡೆಯುತ್ತೇವೆ- ಪ್ರಿಯಾಂಕ್‌ ಖರ್ಗೆ

 

ಹೌದು, ಮರಾಠಿ ಚಿತ್ರ ಬಾಯ್ಸ್‌- 3 ಸಿನಿಮಾ ಇಂದು ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಕೆಲ ಕಡೆ ಬಿಡುಗಡೆ ಮಾಡು ಎಂಇಎಸ್‌ ಸಿದ್ಧತೆ ನಡೆಸಿದೆ. ಇದಕ್ಕೆ ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆ ಪೊಲೀಸ್‌ ಇಲಾಖೆಗೆ ಮನವಿ ಮಾಡಿದ್ದಾರೆ.
ಇದು ಕನ್ನಡಿಗರನ್ನು ಪ್ರಚೋದಿಸುವಂತೆ ಈ ಚಿತ್ರ ಬಿಡುಗಡೆ ಮಾಡಲಾಗಿದ್ದು, ಇದು ಮನೋರಂಜನಾ ಚಿತ್ರವಾದ್ರೆ ನಮ್ಮ ವಿರೋಧವೇನು ಇಲ್ಲ. ಆದರೆ ಕರ್ನಾಟಕ- ಮಹಾರಾಷ್ಟ್ರ ಗಡಿ ವಿಷಯವಿಟ್ಟು ಚಿತ್ರ ತಯಾರಾಗಿದೆ ಎಂದು ಹೇಳಿದ್ದಾರೆ.

Share.
Exit mobile version