ಬೆಂಗಳೂರು: ವಿಧಾನಪರಿಪತ್‌ ನಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಸರ್ಕಾರ ವಿಧೇಯಕವನ್ನು ಮಂಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ , ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲಾಗುವುದು ಎಂದು ಹೇಳಿದ್ದಾರೆ.

BIGG NEWS: ಬೆಂಗಳೂರಿನಲ್ಲಿ ಆಪರೇಷನ್‌ ಒತ್ತುವರಿಗೆ ಬ್ರೇಕ್;‌ ಎಪ್ಸಿಲಾನ್, ದಿವ್ಯಶ್ರೀ ವಿಲ್ಲಾ ತೆರವು ಕಾರ್ಯಾಚರಣೆ ಸ್ಥಗಿತ

 

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸಾರ್ವಜನಿಕ ಅಭಿಪ್ರಾಯಕ್ಕೆ ವಿರುದ್ಧವಾಗಿ ಎಲ್ಲ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ನಮ್ಮ ಸರ್ಕಾರ ಬಂದ್ರೆ ನಾವು ಇದೆಲ್ಲವನ್ನೂ ವಾಪಸ್‌ ಪಡೆಯುತ್ತೇವೆ. ಇನ್ನೂ ಹಣಕಾಸು ಮಸೂದೆಯ ನಡುವೆಯೇ ಗೋಹತ್ಯೆ ಕಾಯ್ದೆ ಜಾರಿ ಮಾಡಿದ್ದರೂ ಅದು ಕೂಡ ವಾಪಸ್‌ ಪಡೆಯುತ್ತೇವೆ ಎಂದಿದ್ದಾರೆ.ಮತಾಂತರ ನಿಷೇಧ ಕಾಯ್ದೆಯು ವೈಯಕ್ತಿಕ ಸ್ವಾತಂತ್ರ್ಯ ಹರಣ ಮಾಡುತ್ತದೆ. ಬೇರೆ ಧರ್ಮವನ್ನು ನಾನು ಒಪ್ಪಬೇಕಾದ್ರೆ ಅದಕ್ಕೆ ಅರ್ಜಿ ಹಾಕಬೇಕು. ನಮ್ಮ ಎಲ್ಲ ವೈಯಕ್ತಿಕ ಮಾಹಿತಿ ನೀಡಬೇಕು ಎಂದರು.

Share.
Exit mobile version