ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ಸಂಪುಟ ಸಭೆಯಲ್ಲಿ ರಾಜ್ಯದ ಎಲ್ಲಾ ಬಿ-ಖಾತಾ ಆಸ್ತಿ ಮಾಲೀಕರಿಗೆ ಎ-ಖಾತಾ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಇದಲ್ಲದೇ ಇನ್ನೂ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಆ ಎಲ್ಲಾ ಇಂದಿನ ರಾಜ್ಯ ಸಚಿವ ಸಂಪುಟ ಸಭೆ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಇಂದಿನ ರಾಜ್ಯ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಇಂದು 27 ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಸಾಬೂನು ತಯಾರಿಕೆ ಯಂತ್ರ ಖರೀದಿಗೆ ಒಪ್ಪಿಗೆ ನೀಡಲಾಗಿದೆ. 17 ಕೋಟಿ ವೆಚ್ಚದಲ್ಲಿ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಕೆಎಸ್ ಐಡಿಎಲ್ ಗೆ ಖರೀದಿಗೆ ಒಪ್ಪಿಗೆ ನೀಡಲಾಗಿದೆ ಎಂದರು.
ಹಸಿತ್ಯಾಜ್ಯ ಸಂಸ್ಕರಣೆಗೆ ಅನುಮತಿ ನೀಡಲಾಗಿದೆ. 150 ಟಿಪಿಟಿ ಸಿಬಿಜಿ ಘಟಕಕ್ಕೆ ಅನುಮತಿಸಲಾಗಿದೆ. ಗೇಲ್ ಸಂಸ್ಥೆ ಸ್ಥಾಪಿಸುತ್ತಿರುವ ಘಟಕ ಇದಾಗಿದೆ ಎಂದರು.
ಕಲಬುರಗಿಯಲ್ಲಿ ಸಹಕಾರ ಭವನವನ್ನು 10 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಪಿಎಂಎಬಿಹೆಚ್ ಐ ಯೋಜನೆಯಡಿ 196 ಗ್ರಾಮಾಂತರ ವೆಲ್ ನೆಸ್ ಸೆಂಟರ್ ಸ್ಥಾಪನೆಗೆ ನಿರ್ಧರಿಸಲಾಗಿದೆ. 127.40 ಕೋಟಿ ವೆಚ್ಚದ ಯೋಜನೆಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದರು.
33 ಜೀವಾವಧಿ ಕೈದಿಗಳಿಗೆ ಬಿಡುಗಡೆ ಭಾಗ್ಯ ಕಲ್ಪಿಸಲಾಗುತ್ತಿದೆ. ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ರಾಜ್ಯದ ವಿವಿಧ ಜೈಲುಗಳಲ್ಲಿರುವ ಕೈದಿಗಳು ಇವರಾಗಿದ್ದಾರೆ. ಇಬ್ಬರು ಕೇಂದ್ರ ಗೃಹ ಇಲಾಖೆ ಅನುಮತಿ ಮೇಲೆ ರಿಲೀಸ್ ಮಾಡಲಾಗುತ್ತಿದೆ ಎಂದು ಹೇಳಿದರು.
ನಂದಿ ವೈದ್ಯಕೀಯ ಸಂಸ್ಥೆಗೆ ಪೀಠೋಪಕರಣವನ್ನು 40 ಕೋಟಿ ಅಂದಾಜು ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ. ಹೊಳೆನರಸೀಪುರ ತಾ.ಪಂ ಕಚೇರಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಸಲಾಗಿದೆ. 12 ಕೋಟಿ ವೆಚ್ಚದ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಲಾಗಿದೆ. ಶಿರಾದ ಕಲ್ಲುಕೋಟೆಯಲ್ಲಿ 7.5 ಗುಂಟೆ ಭೂಮಿಯನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ನೀಡಲು ಒಪ್ಪಿಗೆ ನೀಡಲಾಗಿದೆ. ಸಿರವಾರದಲ್ಲಿ 10 ಗುಂಟೆ ಭೂಮಿ ನೀಡಿಕೆ. ಚಾಮರಾಜನಗರದ 160 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. 33.04 ಕೋಟಿ ವೆಚ್ಚದ ಅಂದಾಜು ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ಬಂಟ್ವಾಳದ ಸರಪಾಡಿಗೆ ಕುಡಿಯುವ ನೀರು ಯೋಜನೆಗಾಗಿ 16.70 ಕೋಟಿ ಅಂದಾಜು ಮೊತ್ತಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಕಲಬಿರಗಿ ವಿವಿ ಆವರಣದಲ್ಲಿ ಬಹುಕೋಶ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಹಳಿಯಾಳದಲ್ಲಿ ಒಳ ಚರಂಡಿ ಯೋಜನೆಗಾಗಿ 10 ಕೋಟಿ ವೆಚ್ಷದ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳ ಅನಧಿಕೃತ ಕಟ್ಟಡಗಳಿಗೆ ಅನುಮತಿ ನೀಡಲಾಗುತ್ತಿದೆ. ಬಿ- ಖಾತೆ ಇರುವುದಕ್ಕೆ ಎ ಖಾತೆ ನೀಡಲು ಅನುಮತಿ ನೀಡಲಾಗಿದೆ ಎಂದರು.
ಬೆಂಗಳೂರಿನ ಜಿಬಿಎನಲ್ಲಿ ಎ ಖಾತಾ ಸರಿಯಾಗಿ ಕೊಡ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದಂತ ಅವರು, ಸಮಸ್ಯೆ ಇದ್ದರೆ ಅದನ್ನ ಬಗೆಹರಿಸೋಣ. ಆದರೆ ಜಿಬಿಎ ಅಂತೆ ಬೇರೆಡೆಯೂ ಎ- ಖಾತ ನೀಡಿಕೆ ಮಾಡಲಾಗುತ್ತದೆ. 10 ಲಕ್ಷ ಆಸ್ತಿಗಳು ನಗರ ಪ್ರದೇಶ ವ್ಯಾಪ್ತಿಯಲ್ಲಿವೆ. ದಂಡದ ಪ್ರಮಾಣದ ಬಗ್ಗೆ ಇನ್ನು ನಿರ್ಧರಿಸಿಲ್ಲ ಎಂದರು.
ಅಕ್ಕಾ ಪಡೆ ಯೋಜನೆ ರಚನೆಗೆ ಅನುಮತಿ ನೀಡಲಾಗಿದೆ. 31 ಜಿಲ್ಲೆಗಳಲ್ಲಿ ಅಕ್ಕ ಪಡೆ ರಚನೆ ಮಾಡಲಾಗುತ್ತಿದೆ. ಕಲಬುರಗಿಯಲ್ಲಿ ಗಣ್ಯರ ಪ್ರತಿಮೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಗಾಂಧೀಜಿ, ನೆಹರು, ಇಂದಿರಾ, ರಾಜೀವ್ ಪ್ರತಿಮೆ ನಿರ್ಮಾಣ. ಕಲಬುರಗಿ ಮಹಾನಗರ ಪಾಲಿಕೆಯಿಂದ ನಿರ್ಮಾಣಕ್ಕೆ ಸಂಪುಟ ಸಭೆಯಲ್ಲಿ ಅದಕ್ಕೆ ಒಪ್ಪಿಗೆ ನೀಡಿದೆ ಎಂದರು.
ಎಲೆಕ್ಟ್ರಿಕ್ ಬಸ್ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ದಲಿತ ಒಬಿಸಿ ಮಠಗಳಿಗೆ ಭೂಮಿ ನೀಡಿಕೆ ವಿಚಾರ ಮುಂದೂಡಿಕೆ. ರಾವುತನಹಳ್ಳಿ ಬಳಿ ಕೊಡಲು ಉದ್ದೇಶಿಸಿದ್ದ ಸರ್ಕಾರ. ಕೆಲವು ಗೊಂದಲಗಳುಮೂಡಿದ ಹಿನ್ನೆಲೆ ಯಾವುದೇ ನಿರ್ಧಾರವಿಲ್ಲ.
ಕೇಂದ್ರದ ಜಿ ರಾಂ ಜಿ ಕಾಯ್ದೆ ಬಗ್ಗೆ ಗಂಭೀರ ಚರ್ಚೆ ಮಾಡಲಾಗಿದೆ. ಕಾಯ್ದೆ ವಿರುದ್ಧ ಸುಪ್ರೀಂಗೆ ಹೋಗಲು ತೀರ್ಮಾನ ಕೈಗೊಳ್ಳಲಾಗಿದೆ. ಜನತಾ ನ್ಯಾಯಾಲಯಕ್ಕೆ ಹೋಗಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರಕ್ಕೆ ನಾವು ಎಚ್ಚರಿಕೆ ಕೊಟ್ಟಿದ್ದೇವೆ. ವಿಕೇಂದ್ರೀಕರಣ ಚಳುವಳಿ ಪ್ರಾರಂಭವಾಗಿದೆ. ವಿಕೇಂದ್ರೀಕರಣಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಗ್ರಾಮಾಂತರ ಭಾಗದ ಬಡವರ ಉದ್ಯೋಗದ ಹಕ್ಕು ಇಲ್ಲದಂತಾಗಿದೆ. ಪಂಚಾಯ್ತಿಗಳ ಆಸ್ತಿ ನಿರ್ವಣೆಗೂ ಪೆಟ್ಟು ಬಿದ್ದಿದೆ. ಕೂಲಿಕಾರರ ಹಿತಕ್ಕೂ ಧಕ್ಕೆಯಾಗಿದೆ. ಹಾಗಾಗಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.
ವರದಿ: ವಸಂತ ಬಿ ಈಶ್ವರಗೆರೆ… ಸಂಪಾದಕರು…
ಚಾಮರಾಜನಗರದ 329 ಹಾಗೂ ದಕ್ಷಿಣ ಕನ್ನಡದ 95 ಗ್ರಾಮಗಳಿಗೆ ನೀರು ಸರಬರಾಜು ಯೋಜನೆಗಳಿಗೆ ಸಚಿವ ಸಂಪುಟದ ಒಪ್ಪಿಗೆ
BREAKING : ಪಕ್ಕದ ಮನೆಯವರ ಮೇಲೆ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು








