ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇಕರದಿಕೆಯ ಟಿ.ಎ ನಾರಾಯಣಗೌಡ ಬಣದ ತಾಲ್ಲೂಕು ಅಧ್ಯಕ್ಷರಾಗಿ ಮನೋಜ್ ಕುಗ್ವೆ ಅವರು ಇಂದು ಪಗ್ರಹಣ ಮಾಡಿದರು. ಅವರೊಂದಿಗೆ ಇತರೆ ಪದಾಧಿಕಾರಿಗಳಿಗೂ ಶಿವಮೊಗ್ಗ ಜಿಲ್ಲಾಧ್ಯಕ್ಷ ಆರ್.ಮಂಜು ಕೇಬಲ್ ನೇಮಕಾತಿ ಪತ್ರವನ್ನು ವಿತರಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ, ಟಿಎ ನಾರಾಯಣಗೌಡ ಬಣದಿಂದ ಪಗ್ರಹಣ ಕಾರ್ಯಕ್ರಮ ನಡೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದಂತ ಶಣ್ಮುಖ ಕೆಂಚಾಳಸರ ಅವರು, ಕರವೆಯಿಂದ ಕನ್ನಡ ಭಾಷಣೆ ಉಳಿಸಲು ಹೋರಾಟ ನಡೆಸುವಂತ ಕೆಲಸ ಮಾಡಲಾಗುತ್ತಿದೆ. ಸಾಗರ ತಾಲ್ಲೂಕು ಸಮಿತಿ ರಚನೆಯಾಗಿದೆ. ಜೋಗ ವ್ಯಾಪ್ತಿಯಲ್ಲೂ ಸಂಘಟನೆ ಕಟ್ಟಲಾಗುತ್ತದೆ. ಸಾಗರ ತಾಲ್ಲೂಕಿನ ಹೋಬಳಿ ಮಟ್ಟದಲ್ಲೂ ಕರ್ನಾಟಕ ರಕ್ಷಣಾ ವೇದಿಕೆಯನ್ನು ಕಟ್ಟುವ ಕೆಲಸ ಮಾಡಲಾಗುವುದು. ಕನ್ನಡ ಭಾಷೆಗೆ ಕುತ್ತು ಬಂದಾಗ ಗ್ರಾಮ ಪಂಚಾಯ್ತಿ ಮಟ್ಟದಿಂದಲೂ ಹೋರಾಟಕ್ಕೆ ತಾಲ್ಲೂಕು ಅಧ್ಯಕ್ಷ ಮನೋಜ್ ಕುಗ್ವೆ ನೇತೃತ್ವದಲ್ಲಿ ಹೋರಾಟಕ್ಕೆ ಸಜ್ಜುಗೊಳಿಸುವುದಾಗಿ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಕರವೇ ಮಹಿಳಾ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಮಾತನಾಡಿ ಕನ್ನಡ ನಾಡಿನ ನೆಲ, ಜಲ, ಭಾಷೆಗೆ ಧಕ್ಕೆ ಬಂದಾಗ ಮುನ್ನುಗ್ಗಿ ಹೋರಾಟವನ್ನು ಕರವೇ ಮಾಡುತ್ತಿದೆ. ಈ ಸಂಘಟನೆಯಲ್ಲಿ ಮಹಿಳೆಯರಿಗೂ ಮುಂಚೂಣಿ ಸ್ಥಾನ ಮಾನ ನೀಡಲಾಗಿದ್ದು, ಅತೀ ಹೆಚ್ಚಿನ ಗೌರವ ಕೂಡ ದೊರೆಯುತ್ತಿದೆ. ಕರವೇ ಸಂಘಟನೆಯಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ ಎಂದರು.
1999ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹುಟ್ಟಿತು. ಅಲ್ಲಿನಿಂದ ಇಲ್ಲಿಯವರೆಗೆ ಕನ್ನಡ ನಾಡು, ನುಡಿ, ಭಾಷೆಗಾಗಿ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ನೇತೃತ್ವದಲ್ಲಿ ಹೋರಾಟಗಳು ನಡೆದುಕೊಂಡು ಬಂದಿದ್ದಾವೆ. ಇಂದು ಬೆಂಗಳೂರು ಭಾರತವಾಗಿ ಬಿಟ್ಟಿದೆ. ಅಲ್ಲಿ ಕನ್ನಡ ಮಾಯವಾಗುತ್ತಿದ್ದಂತ ಸಂದರ್ಭದಲ್ಲಿ ಶೇ.60ರಷ್ಟು ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಕನ್ನಡ ಇರಬೇಕು ಎಂಬುದಾಗಿ ಕಡ್ಡಾಯಗೊಳಿಸಿದ್ದರ ಹಿಂದೆ ನಾರಾಯಣಗೌಡ ಅವರ ಹೋರಾಟವಿದೆ. ಅವರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದರ ಪರಿಣಾಮ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯವಾಗಿದೆ. ಕನ್ನಡ ಮಣ್ಣಿನಲ್ಲಿ ಹುಟ್ಟಿದ ಮೇಲೆ ಕನ್ನಡ ನೆಲದ ಋಣ ತೀರಿಸುವಂತ ಕೆಲಸ ಮಾಡಿ ಎಂಬುದಾಗಿ ತಿಳಿಸಿದರು.
ಶಿವಮೊಗ್ಗ ಜಿಲ್ಲಾಧ್ಯಕ್ಷ ಕೆ.ಮಂಜು ಕೇಬಲ್ ಮಾತನಾಡಿ, ಕನ್ನಡ ತನವನ್ನು ನಮ್ಮಲ್ಲಿ ಉಳಿಸಿಕೊಳ್ಳಬೇಕು. ನನ್ನ ಕನ್ನಡಪರ ಹೋರಾಟದಿಂದಲೇ ಎರಡು ಕೇಸ್ ನನ್ನ ಮೇಲೆ ಬಿದ್ದಿವೆ. ಅದಕ್ಕೆಲ್ಲ ಹೆದರಬಾರದು. ಎದೆಗುಂದದೇ ಹೋರಾಟ ಮಾಡಬೇಕು. ಇಂದು ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ 72 ಲಕ್ಷ ಕಾರ್ಯಕರ್ತರಿದ್ದಾರೆ. ಅದು ಬೇರೆ ಯಾವುದೇ ಸಂಘಟನೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಇಲ್ಲ. ಟಿ.ಎ ನಾರಾಯಣಗೌಡ ಮಹಾನ್ ರಾಯಕರು. ಅವರ ಹೋರಾಟದ ಬದುಕು ಸತತ 40 ವರ್ಷಗಳದ್ದಾಗಿದೆ. ತ್ರಿಭಾಷಾ ನೀತಿ ಜಾರಿಯ ಹಿಂದೆ ನಾರಾಯಣಗೌಡ ಅವರ ಹೋರಾಟವಿದೆ. ಸರ್ಕಾರ ಏನಾದರೂ ಮಣಿಯುತ್ತದೆ ಅಂದರೇ ಅದು ನಾರಾಯಣಗೌಡರಿಗೆ ಮಾತ್ರವೇ ಆಗಿದೆ ಎಂದರು.
ಸಾಗರ ತಾಲ್ಲೂಕು ಕರವೇ ಅಧ್ಯಕ್ಷರಾಗಿ ಪದಗ್ರಹಣ ವಹಿಸಿ ಮಾತನಾಡಿದಂತ ಮನೋಜ್ ಕುಗ್ವೆ, ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನನಗೆ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ. ನಮ್ಮ ಸಾಗರದ ನೆಲ ಹೋರಾಟದ ಭೂಮಿಯಾಗಿದೆ. ಹಲವು ಹೋರಾಟಗಳ ಮೂಲಕ ನೊಂದವರಿಗೆ, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಂತ ಕೆಲಸ ಈ ನೆಲದಲ್ಲಿ ನಡೆದಿದೆ. ಕರ್ನಾಟಕ ರಕ್ಷಣಾ ವೇದಿಕೆಯಂತ ಸಂಘಟನೆಯ ಅನಿವಾರ್ಯತೆ ಸಾಗರ ತಾಲ್ಲೂಕಿನಲ್ಲಿದೆ. ಇಂದು ಬ್ಯಾಂಕ್ ಗಳಲ್ಲಿನ ಸಿಬ್ಬಂದಿಗಳು ಹಿಂದಿಯವರಾಗಿದ್ದಾರೆ. ಕನ್ನಡ ಕಲಿತು, ಕನ್ನಡದಲ್ಲೇ ವ್ಯವಹರಿಸುವ ಕೆಲಸ ಮಾಡಲು ಕರವೆಯಂತ ಸಂಘಟನೆಗಳಿದ್ದಾಗ ಮಾತ್ರವೇ ಸಾಧ್ಯವಿದೆ ಎಂದರು.
ಮೊನ್ನೆ ಎಕ್ಸಿಸ್ ಬ್ಯಾಂಕ್ ಗೆ ಸಾಗರದ ವ್ಯಕ್ತಿಯೊಬ್ಬರು ತೆರಳಿದ್ದಾಗ ಕನ್ನಡ ಬಾರದ, ಹಿಂದಿಯ ಬ್ಯಾಂಕ್ ಸಿಬ್ಬಂದಿ ಚಲನ್ ತುಂಬೋದಕ್ಕೂ ಕನ್ನಡಿಗರಿಗೆ ನೆರವಾಗಿಲ್ಲ. ಸರಿಯಾದ ರೀತಿಯಲ್ಲಿ ವ್ಯವಹರಿಸಿಲ್ಲ. ನಮ್ಮ ಸಂಘಟನೆಗೆ ಮಾಹಿತಿ ಬಂತು. ಸ್ಥಳಕ್ಕೆ ತೆರಳಿ ಸರ್ಕಾರದ ಆದೇಶವನ್ನು ವಿವರಿಸುವ ಮೂಲಕ ಕನ್ನಡ ಕಲಿಯಲು ತಿಳಿಸಿಕೊಡಲಾಯಿತು. ಆ ಮೂಲಕ ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಕಲ್ಪಿಸುವಂತ ಕೆಲಸವನ್ನು ಕರವೆ ಮಾಡಿತು ಎಂದರು.
ಸಾಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾಗಿ ಯಾರೆಲ್ಲ ಪದಗ್ರಹಣ? ಇಲ್ಲಿದೆ ಪಟ್ಟಿ
- ಮನೋಜ್ ಕುಗ್ವೆ, ಅಧ್ಯಕ್ಷರು, ಸಾಗರ ತಾಲ್ಲೂಕು
- ಷಣ್ಮುಕ ಕೆಂಚಾಳಸರ, ನಗರ ಅಧ್ಯಕ್ಷರು, ಸಾಗರ ತಾಲ್ಲೂಕು
- ಮಹೇಶ್ ರಾಮನಗರ, ನಗರ ಪ್ರಧಾನ ಕಾರ್ಯದರ್ಶಿ, ಸಾಗರ
- ಗಣಪತಿ ಹಂಚಿ ಪಡವಗೋಡು, ಉಪಾಧ್ಯಕ್ಷರು, ಸಾಗರ
- ರಮೇಶ್ ಜಿಗಡೆಕೊಪ್ಪ, ಉಪಾಧ್ಯಕ್ಷರು, ಸಾಗರ
- ಸಂತೋಷ್ ಮನೆಗಟ್ಟ, ಅಧ್ಯಕ್ಷರು, ಕಸಬಾ ಹೋಬಳಿ
- ಅರುಣ್ ತಾಳಗುಪ್ಪ, ಅಧ್ಯಕ್ಷರು, ತಾಳಗುಪ್ಪ ಹೋಬಳಿ
- ಪುನೀತ್ ಕಾಗೋಡು, ಪ್ರಧಾನ ಕಾರ್ಯದರ್ಶಿ, ಸಾಗರ ತಾಲ್ಲೂಕು
- ಸಯ್ಯದ್ ತೋಫಿ, ಅಧ್ಯಕ್ಷರು, ಅಲ್ಪ ಸಂಖ್ಯಾತ ಘಟಕ
- ಶರತ್ ನೇರಲಗಿ, ಅಧ್ಯಕ್ಷರು, ಯುವ ಘಟಕ
- ಅಖಿಲೇಶ್ ಕಾನ್ಲೆ, ಉಪಾಧ್ಯಕ್ಷರು, ಯುವ ಘಟಕ
- ದೇವರಾಜ್ ಪಡವಗೋಡು, ಖಜಾಂಚಿ, ಸಾಗರ ತಾಲ್ಲೂಕು
- ನರೇಂದ್ರ ಕುಗ್ವೆ, ಕಾರ್ಯದರ್ಶಿ, ಸಾಗರ ತಾಲ್ಲೂಕು
- ಕುಶ ಕಾಗೋಡು, ಪ್ರಧಾನ ಕಾರ್ಯದರ್ಶಿ, ಯುವ ಘಟಕ
- ನಿಖಿತ್ ಮೂಲೆಮನೆ ಜನ್ನೆಹಕ್ಲು, ಅಧ್ಯಕ್ಷರು, ವಿದ್ಯಾರ್ಥಿ ಘಟಕ, ಸಾಗರ
- ಸಾವಿರ, ಅಧ್ಯಕ್ಷರು, ಆಟೋ ಘಟಕ, ಸಾಗರ
- ಸುಭಾಷ್ ನೇರಲಗಿ, ಕಾರ್ಯದರ್ಶಿ, ಸಾಗರ ತಾಲ್ಲೂಕು
ಇದೇ ಸಂದರ್ಭದಲ್ಲಿ ಸಾಗರದ ರೆಡ್ ಚಿಲ್ಲಿ ಹೋಟೆಲ್ ಮಾಲೀಕರಾದಂತ ತನು ಅವರಿಗೆ ಸಾಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಘಟಕದಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಕರವೇ ರಾಜ್ಯ ಉಪಾಧ್ಯಕ್ಷ ಹ.ನಾ ಹಯಾತ್ ಕಾರ್ಗಲ್, ರಾಜ್ಯ ಸಹ ಕಾರ್ಯದರ್ಶಿ ಮಧು ಶಿವಮೊಗ್ಗ, ಕುಗ್ವೆ ಯುವಕ ಸಂಘದ ಅಧ್ಯಕ್ಷರಾದ ನಾಗರಾಜ್ ಕುಗ್ವೆ, ದಾಮೋದರ್ ಕುಗ್ವೆ, ಬಸವರಾಜ್ ಕುಗ್ವೆ, ವಿನಾಯಕ ಗುಡಿಗಾರ್, ಭವ್ಯ, ನವೀನ್, ಶ್ರೀಧರ ಪಾಟೀಲ್ ಆವಿನಹಳ್ಳಿ, ಮಂಜು ಸೂರನಗದ್ದೆ, ಸಚಿನ್ ವಿನೊಬನಗರ, ಅಕ್ಷಯ ಸಾಗರ, ಐಜಿ ಸ್ವರೂಪ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸುಧಾಕರ್ ಕುಗ್ವೆ ನಿರೂಪಿಸಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ವಿಧಾನಸಭೆಯಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ-2025 ಅಂಗೀಕಾರ
BREAKING: ಇಂದು ಸಂಜೆ 5ಕ್ಕೆ ನಡೆಯಬೇಕಿದ್ದ ವಿಶೇಷ ರಾಜ್ಯ ಸಚಿವ ಸಂಪುಟ ಸಭೆ 7.30ಕ್ಕೆ ಮುಂದೂಡಿಕೆ