ಮಂಡ್ಯ : ಮದ್ದೂರು ತಾಲೂಕಿನ ಮನ್ ಮುಲ್ ಮೇಗಾ ಡೈರಿಯ ಉಪ ವ್ಯವಸ್ಥಾಪಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ಸಂಜೆ ಜರುಗಿದೆ.
ಮೇಗಾ ಡೈರಿಯ ಹಾಲು ಶೇಖರಣಾ ವಿಭಾಗದ ಉಪ ವ್ಯವಸ್ಥಾಪಕ ಭರತ್ ರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿಯಾಗಿದ್ದಾರೆ.
ಗುರುವಾರ ಸಂಜೆ 4 ರಿಂದ 5 ಗಂಟೆಯೊಳಗೆ ಮಂಡ್ಯ ನಗರದ ಸಕ್ಕರೆ ಕಾರ್ಖಾನೆ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಶವವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಮಂಡ್ಯ ರೈಲ್ವೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ವರದಿ : ಗಿರೀಶ್ ರಾಜ್, ಮಂಡ್ಯ
ತಾಯಿಯಿಂದ ಅವಳಿ ಶಿಶುಗಳು ಬೇರ್ಪಡುವುದು ‘ಅತ್ಯುನ್ನತ ಕ್ರೌರ್ಯ’: ಸುಪ್ರೀಂ ಕೋರ್ಟ್
BREAKING : ಏಪ್ರಿಲ್’ನಲ್ಲಿ ದೇಶಾದ್ಯಂತ ‘SIR’ ಜಾರಿ ; ‘ಚುನಾವಣಾ ಆಯೋಗ’ ಘೋಷಣೆ!








