ಕೆಎನ್ಎನ್ ಡಿಜಿಟಲ್ ಡೆಸ್ಕ್ :  ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಕಪ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಚೀನಾ ತೈಪೆಯ ಚೆನ್ ಸ್ಜು-ಯು ವಿರುದ್ಧ 4-3 ಅಂತರದಲ್ಲಿ ಜಯಗಳಿಸುವ ಮೂಲಕ ಸ್ಟಾರ್ ಪ್ಯಾಡ್ಲರ್ ಮನಿಕಾ ಬಾತ್ರಾ ಸೆಮಿಫೈನಲ್ ತಲುಪಿದ್ದಾರೆ. ಈ ಮೂಲಕ ಸೆಮಿ ಪೈನಲ್ ಪ್ರವೇಶಿದ  ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

BREAKING NEWS : ಹೈದರಾಬಾದ್ ‘ಕಾಲೇಜು ಲ್ಯಾಬ್’ನಲ್ಲಿ ಘೋರ ಪ್ರಮಾದ ; ಅನಿಲ ಸೋರಿಕೆ, 25 ವಿದ್ಯಾರ್ಥಿಗಳು ಅಸ್ವಸ್ಥ |Gas Leak

ವಿಶ್ವ ಶ್ರೇಯಾಂಕಿತ 44ನೇ ಶ್ರೇಯಾಂಕಿತೆ ಮಣಿಕಾ ಐಟಿಟಿಎಫ್ ಪಟ್ಟಿಯಲ್ಲಿ 23ನೇ ಶ್ರೇಯಾಂಕದ ಚೆನ್ ಅವರನ್ನು 6-11 11-6 11-5 11-7 8-11 9-11 11-9 ಕಠಿಣ ಹೋರಾಟದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸಿದರು.

ಈ ಹಿಂದೆ ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಭಾರತದ ಏಸ್ ವಿಶ್ವದ ನಂ.7ನೇ ಶ್ರೇಯಾಂಕದ ಚೀನಾದ ಚೆನ್ ಕ್ಸಿಂಗ್‌ಟಾಂಗ್‌ಗೆ ಆಘಾತ ನೀಡಿದ್ದರು.

ಸೆಮಿಫೈನಲ್‌ನಲ್ಲಿ ಮಣಿಕಾ ಅವರು ಕೊರಿಯಾದ ಜಿಯೋನ್ ಜಿಹೀ ಮತ್ತು ಜಪಾನ್‌ನ ಮಿಮಾ ಇಟೊ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

BREAKING NEWS : ಭಾರತದ ಗೌಪ್ಯ ಮಾಹಿತಿ ‘ಪಾಕ್’ಗೆ ರವಾನೆ ; ‘ಎಂಇಎ ಚಾಲಕ’ ಅರೆಸ್ಟ್, ಪಾಕಿಯಿಂದ ಹನಿಟ್ರ್ಯಾಪ್ |Foreign Ministry Driver Arrested

Share.
Exit mobile version