ಮಂಗಳೂರು: ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣಪತ್ರ ನೀಡಲು 25 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತ ಮನ್ಸೂರ್ ಅಲಿ ಮತ್ತು ಬ್ರೋಕರ್ ಮೊಹಮ್ಮದ್ ಸಲೀಂ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಲಿ ಮತ್ತು ಆಯುಕ್ತರ ಪರವಾಗಿ ಲಂಚ ಸ್ವೀಕರಿಸಿದ್ದ ಬ್ರೋಕರ್ ಮೊಹಮ್ಮದ್ ಸಲೀಂ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ ಎಂದು ಲೋಕಾಯುಕ್ತ ಪ್ರಭಾರ ಎಸ್ಪಿ ಚೆಲುವರಾಜು ಬಿ ತಿಳಿಸಿದ್ದಾರೆ.
ಮಂಗಳೂರು ತಾಲೂಕಿನ ಕುಡುಪು ಗ್ರಾಮದ ಸರ್ವೆ ನಂ.57/ಪಿಯಲ್ಲಿ 10.8 ಎಕರೆ ಜಮೀನು ಖರೀದಿಸಿದ್ದರು.
ಮಹಾನಗರ ಪಾಲಿಕೆಯ ಪತ್ರ
ಮಂಗಳೂರು ಮಹಾನಗರ ಪಾಲಿಕೆಯು ಪಚ್ಚನಾಡಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕದ ವಿಸ್ತರಣೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ದೂರುದಾರರಿಗೆ ಪತ್ರ ಬರೆದು ಟಿಡಿಆರ್ ನೀಡಿತ್ತು.
TDR ಪ್ರಮಾಣಪತ್ರ
ಅದರಂತೆ, 2024 ರ ಜನವರಿಯಲ್ಲಿ ಭೂಮಿಯನ್ನು ಎಂಸಿಸಿ ಹೆಸರಿನಲ್ಲಿ ನೋಂದಾಯಿಸಲಾಯಿತು. ನಂತರ ಫೆಬ್ರವರಿಯಲ್ಲಿ ಪಾಲಿಕೆ ಆಯುಕ್ತರು ಮುಡಾ ಆಯುಕ್ತರಿಗೆ ಪತ್ರ ಬರೆದು ಟಿಡಿಆರ್ ಪ್ರಮಾಣಪತ್ರ ನೀಡುವಂತೆ ಕೋರಿದ್ದರು.
ಆದರೆ, ಮುಡಾ ಆಯುಕ್ತರು ಕಡತ ತೆರವುಗೊಳಿಸುವಲ್ಲಿ ವಿಫಲರಾಗಿದ್ದಾರೆ.
ಈ ಸಂಬಂಧ ದೂರುದಾರರು ಮುಡಾ ಆಯುಕ್ತರನ್ನು ಭೇಟಿಯಾದಾಗ ಅವರು 25 ಲಕ್ಷ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಲೋಕಾಯುಕ್ತರು ಬಲೆ ಬೀಸಿ ಬ್ರೋಕರ್ ಮೊಹಮ್ಮದ್ ಸಲೀಂ ಅವರನ್ನು ಬಂಧಿಸಿದರು