ಮಂಗಳೂರು: ಜಿಲ್ಲೆಯ ಕಾರಾಗೃಹದಲ್ಲಿ ಪುಡ್ ಪಾಯಿಸನ್ ಆಗಿದ್ದರಿಂದ 40ಕ್ಕೂ ಹೆಚ್ಚು ಕೈದಿಗಳು ಅಸ್ವಸ್ಥಗೊಂಡಿದ್ದರು. ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರಲ್ಲಿ ಓರ್ವ ಕೈದಿಯ ಸ್ಥಿತಿ ಗಂಭೀರಗೊಂಡಿರುವುದಾಗಿ ತಿಳಿದು ಬಂದಿದೆ.
ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಜೈಲಿಗೆ ಭೇಟಿ ನೀಡಿ, ನೀರಿನ ಸ್ಯಾಂಪಲ್ ಹಾಗೂ ಆಹಾರದ ಮಾದರಿಯನ್ನು ಸಂಗ್ರಹಿಸಿದ್ದಾರೆ. ಈ ವೇಳೆ ಅವಲಕ್ಕಿ, ಅನ್ನ, ಸಾಂಬಾರ್ ಊಟವನ್ನು ಮಧ್ಯಾಹ್ನ ಖೈದಿಗಳಿಗೆ ನೀಡಿರೋದಾಗಿ ತಿಳಿದು ಬಂದಿದೆ.
ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರು ಮಾತನಾಡಿ, ಇಂದು ಸಂಜೆ 4.30ಕ್ಕೆ ಕೈದಿಗಳಿಗೆ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಅವರನ್ನು ಕೂಡಲೇ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 45 ಕೈದಿಗಳ ಪೈಕಿ ಓರ್ವನ ಸ್ಥಿತಿ ಗಂಭೀರಗೊಂಡಿದೆ ಎಂದಿದ್ದಾರೆ.
ಪುಡ್ ಪಾಯಿಸನ್ ಹೇಗೆ ಆಯ್ತು ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತದೆ. ಆಹಾರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಯ ಬಳಿಕ ಕಾರಣ ತಿಳಿಯಲಿದೆ ಎಂದರು.
BREAKING: ಪರಿಷ್ಕೃತ ಜಾನುವಾರು ಆರೋಗ್ಯ ಕಾರ್ಯಕ್ರಮಕ್ಕೆ ಸಂಪುಟದ ಅನುಮೋದನೆ: ಪ್ರಧಾನಿ ಮೋದಿ
ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಮಾ.8ರಂದು ಕೊಡಗಿನಲ್ಲಿ ‘ಉದ್ಯೋಗ ಮೇಳ’ ಆಯೋಜನೆ