ಮಂಗಳೂರು: ನಗರದಲ್ಲಿ ನಡು ರಸ್ತೆಯಲ್ಲೇ ಐಷಾರಾಮಿ ಕಾರಾಗಿರುವಂತ ಬಿಎಂಡಬ್ಲ್ಯೂ ಕಾರೊಂದು ಧಗಧಗಿಸಿ ಹೊತ್ತಿ ಉರಿದಿರುವಂತ ಘಟನೆ ನಡೆದಿದೆ.
ಮಂಗಳೂರಿನ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಸಮೀಪದಲ್ಲಿ ಗುರುದೀಪ್ ಎಂಬುವರಿಗೆ ಸೇರಿದಂತ ಬಿಎಂಡಬ್ಲ್ಯೂಕಾರೊಂದು ದಿಢೀರ್ ಬೆಂಕಿಯಿಂದ ಹೊತ್ತಿ ಉರಿದಿದೆ.
ದೆಹಲಿಯ ನೋಂದಣಿ ಹೊಂದಿದ್ದಂತ ಕಾರು ಇದಾಗಿದ್ದು, ಸರ್ವೀಸ್ ಮಾಡಿಸಲು ಗ್ಯಾರೇಜಿಗೆ ತರುತ್ತಿದ್ದಂತ ವೇಳೆಯಲ್ಲಿ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ನಡು ರಸ್ತೆಯಲ್ಲೇ ನಿಲ್ಲಿಸಿ, ಗುರುದೀಪ್ ಹೊರ ಓಡಿ ಬಂದ ಕಾರಣ, ಕ್ಷಣಾರ್ಧದಲ್ಲಿ ಕಾರು ಧಗಧಗಿಸಿ ಹೊತ್ತಿ ಉರಿದಿದೆ.
ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸುವ ವೇಳೆಗಾಗಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತು ಎನ್ನಲಾಗಿದೆ. ಸ್ಥಳದಲ್ಲಿದ್ದಂತ ಜನರು ನಡು ರಸ್ತೆಯಲ್ಲೇ ಕಾರು ಧಗಧಗಿಸಿ ಹೊತ್ತಿ ಉರಿದಿದ್ದರಿಂದ ಬೆಚ್ಚಿ ಬಿದ್ದಿದ್ದಾರೆ ಎನ್ನಲಾಗಿದೆ.
ಕಾರು ಹೊತ್ತಿ ಉರಿಯಲು ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಆದರೇ ಈ ಬಗ್ಗೆ ಹೆಚ್ಚಿನ ತನಿಖೆಯ ನಂತ್ರ ನಿಖರ ಮಾಹಿತಿ ತಿಳಿಯಬೇಕಿದೆ.
ಬೆಂಗಳೂರಿನ ‘1ಎಂಜಿ ಮಾಲ್’ನಲ್ಲಿ ‘ರಿಲಯನ್ಸ್’ನ ಫ್ರೆಶ್ ಪಿಕ್’ ಮಳಿಗೆ ಓಪನ್ | Reliance’s fresh Pick store
BREAKING : ಮುಸ್ಲಿಂರು ‘ಹಮ್ ಪಾಂಚ್ ಹಮಾರಾ ಪಂಚಿಸ್’ ಅಂತಾರೆ : ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ