ಬೆಂಗಳೂರು: ರಾಜ್ಯ ಸರ್ಕಾರದಿಂದ ಕರಾವಳಿ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವಂತ ಕೋಮು ಗಲಭೆ ತಡೆಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಕೋಮು ಗಲಭೆ ನಿಯಂತ್ರಣ ಕ್ರಮವಾಗಿ ಡಿಐಜಿ, ಎಸ್ಪಿ ವರ್ಗಾವಣೆ ಮಾಡಿದ್ದು, ಆ ಸ್ಥಳಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳನ್ನು ನೇಮಿಸಿದೆ.
ಈ ಸಂಬಂಧ ಆದೇಶ ಮಾಡಿರುವಂತ ರಾಜ್ಯ ಸರ್ಕಾರವು, 2010ನೇ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಇಂಟಲಿಜೆನ್ಸಿ ಡಿಐಜಿಯಿಂದ ಮಂಗಳೂರು ಸಿಟಿ ಡಿಐಜಿಯಾಗಿ ವರ್ಗಾವಣೆ ಮಾಡಿ ಆದೇಶಿಸಿದೆ. ಈ ಹುದ್ದೆಯಲ್ಲಿದ್ದಂತ ಅನುಪಮ್ ಅಗರ್ವಾಲ್ ಅವರನ್ನು ಎತ್ತಂಗಡಿ ಮಾಡಿದೆ.
ಇನ್ನೂ ಉಡುಪಿ ಎಸ್ಪಿಯಾಗಿದ್ದಂತ 2014ರ ಐಪಿಎಸ್ ಅಧಿಕಾರಿ ಡಾ.ಕೆ ಅರುಣ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿದೆ. ಈ ಹುದ್ದೆಯಲ್ಲಿದ್ದಂತ ಯತೀಶ್ ಎನ್ ಅವರನ್ನು ವರ್ಗಾವಣೆ ಮಾಡಿದೆ.
ಇಂಟಲಿಜೆನ್ಸಿಯ ಎಸ್ಪಿಯಾಗಿದ್ದಂತ ಹರಿರಾಮ್ ಶಂಕರ್ ಅವರನ್ನು ಉಡುಪಿ ಎಸ್ಪಿಯಾಗಿ ನೇಮಕ ಮಾಡಿದೆ. ಈ ಹುದ್ದೆಯಲ್ಲಿದ್ದಂತ ಅರುಣ್ ಕೆ ಅವರನ್ನು ಮಂಗಳೂರು ಎಸ್ಪಿಯಾಗಿ ನೇಮಿಸಲಾಗಿದೆ.
ಥಾಣೆಯಲ್ಲಿ ಪಾಕಿಸ್ತಾನದ ಗುಪ್ತಚರ ಏಜೆಂಟ್ ಗೆ ಭಾರತದ ಸೂಕ್ಷ್ಮ ಮಾಹಿತಿ ರವಾನಿಸುತ್ತಿದ್ದ ವ್ಯಕ್ತಿ ಅರೆಸ್ಟ್