ಮಂಡ್ಯ: ಹೊರ ರಾಜ್ಯಗಳಿಂದ ಆಗಮಿಸುವಂತೆ ವಾಹನ ಸಾವರರನ್ನೇ ಗುರಿಯಾಗಿಸಿಕೊಂಡು, ವಿನಾ ಕಾರಣ ದಾಖಲೆ ಸೇರಿದಂತೆ ಇತರೆ ವಿಚಾರಗಳ ಕಾರಣ ಹಣ ವಸೂಲಿ ಮಾಡುತ್ತಿದ್ದಂತ ಕೆ ಆರ್ ಎಸ್ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.
ಮಂಡ್ಯ ಜಿಲ್ಲೆಯ ಕೆ ಆರ್ ಎಸ್ ಡ್ಯಾಂ, ಬೃಂದಾವನ ವೀಕ್ಷಣೆಗೆ ಬರುವಂತ ಹೊರ ರಾಜ್ಯದ ವಾಹನ ಸವಾರರಿಂದ ಹಣ ವಸೂಲಿಗೆ ಕೆ ಆರ್ ಎಸ್ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳು ಇಳಿದಿದ್ದರು. ಈ ಘಟನೆಯ ಸಂಬಂಧ ವಾಹನ ಚಾಲಕರೊಬ್ಬರು ವೀಡಿಯೋ ಸಹಿತ ಪೊಲೀಸರಿಗೆ ದೂರು ನೀಡಿದ್ದರು. ವೀಡಿಯೋ ಸಾಕ್ಷಿ ಸಹಿತ ದೂರಿನ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಆದೇಶ ಹೊರಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ ಆರ್ ಎಸ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಪುರುಷೋತ್ತಮ್, ಕಾನ್ಸ್ ಸ್ಟೇಬಲ್ ಅನಿಲ್ ಕುಮಾರ್ ಹಾಗೂ ಪ್ರಭು ಸ್ವಾಮಿ ಎಂಬುವರನ್ನು ಅಮಾನತುಗೊಳಿಸಿ ಎಸ್ಪಿ ಆದೇಶಿಸಿದ್ದಾರೆ. ಈ ಮೂಲಕ ಹೊರ ರಾಜ್ಯದ ವಾಹನ ಸವಾರರಿಂದ ಹಣ ವಸೂಲಿಗೆ ಇಳಿದಿದ್ದಂತ ಮೂವರು ಪೊಲೀಸ್ ಸಿಬ್ಬಂದಿಗಳಿಗೆ ಶಾಕ್ ನೀಡಿದ್ದಾರೆ.
BREAKING: ಹುಬ್ಬಳ್ಳಿ ಸಿಲಿಂಡರ್ ಸ್ಪೋಟ ಕೇಸ್: ಮೃತ 8 ಅಯ್ಯಪ್ಪ ಮಾಲಾಧಾರಿ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ
ಇಲ್ಲಿದೆ ಇಂದಿನ ‘ರಾಜ್ಯ ಸಚಿವ ಸಂಪುಟ ಸಭೆ’ಯ ಪ್ರಮುಖ ಹೈಲೈಟ್ಸ್ | Karnataka Cabinet Meeting