ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವಂತ ಸಾಹಿತ್ಯ ಸಮ್ಮೇಳನದಲ್ಲಿ ಮಳೆರಾಯನ ಅಡ್ಡಿಯಾಗಿದೆ. ಭಾರೀ ಮಳೆಯಿಂದಾಗಿ ಮಂಡ್ಯ ಸಾಹಿತ್ಯ ಸಮ್ಮೇಳನವೇ ಅಸ್ತವ್ಯಸ್ತಗೊಂಡಿದೆ.
ಮಂಡ್ಯದಲ್ಲಿ ನಡೆಯುತ್ತಿರುವಂತ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನದಂದು ಸಂಜೆ 6.30ಗಂಟೆಗೆ ಶುರುವಾದಂತ ಮಳೆ, ಅರ್ಧಗಂಟೆಗೂ ಹೆಚ್ಚುಕಾಲ ಎಡಬಿಡದೇ ಸುರಿಯಿತು. ಮಳೆಯಿಂದಾಗಿ ವೇದಿಕೆಯ ಆಸುಪಾಸು ಸಂಪೂರ್ಣ ಕೆಲಸರು ಗದ್ದೆಯಂತಾಗಿದೆ.
ಸಾಹಿತ್ಯ ಸಮ್ಮೇಳನಕ್ಕೆ ಮಳೆಯ ಸಿಂಚನದಿಂದ ಒಂದೆಡೆ ಅಡ್ಡಿಯಾದರೇ, ಮತ್ತೊಂದೆಡೆ ಬಿರುಬಿಸಿಲಿನಿಂದ ತತ್ತರಿಸಿದ್ದಂತ ಜನರಿಗೆ ತಂಪೆರೆದಂತೆ ಆಗಿದೆ. ಮಳೆಯಲ್ಲಿ ನನೆದು ಜನರು ಒದ್ದೆಯಾಗಿದ್ದಾರೆ. ಸನ್ಮಾನ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದಂತ ಜನರಿಗೆ ಭಾರೀ ಮಳೆಯಿಂದಾಗಿ ಅಡ್ಡಿಯಾದಂತೆ ಆಗಿದೆ.
ವರದಿ: ಗಿರೀಶ್ ರಾಜ್, ಮಂಡ್ಯ
BREAKING: ಪಂಜಾಬ್ ನಲ್ಲಿ 6 ಅಂತಸ್ತಿನ ಕಟ್ಟಡ ಕುಸಿದು ಭೀಕರ ದುರಂತ: 20ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ
BREAKING: ಸಾಗರದಲ್ಲಿ ಉಪನ್ಯಾಸಕರ ಮೇಲೆ ವಿದ್ಯಾರ್ಥಿಗಳು ಪೋಷಕರಿಂದ ಮಾರಣಾಂತಿಕ ಹಲ್ಲೆ
BREAKING: ಪಂಜಾಬ್ ನಲ್ಲಿ 6 ಅಂತಸ್ತಿನ ಕಟ್ಟಡ ಕುಸಿದು ಭೀಕರ ದುರಂತ: 20ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ