ಮಂಡ್ಯ : ಮದ್ದೂರು ತಾಲ್ಲೂಕಿನ ಕೊಪ್ಪ, ಕೆಸ್ತೂರು ಹಾಗೂ ಕೆ.ಹೊನ್ನಲಗೆರೆಯ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 4 ನೇ ತ್ರೈಮಾಸಿಕ ಕಾರ್ಯ ಹಮ್ಮಿಕೊಂಡಿರುವುದರಿಂದ ಎಲ್ಲಾ ವಿತರಣಾ ಕೇಂದ್ರದಿಂದ ಫೆ. 8 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ( Power Cut ) ಎಂದು ಸೆಸ್ಕಾಂ ಗ್ರಾಮಾಂತರ ಉಪ ವಿಭಾಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊಪ್ಪ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೊಪ್ಪ, ಹೊಸಗಾವಿ, ಕೌಡ್ಲೆ, ಬೆಕ್ಕಳಲೆ, ನಂಬಿನಾಯಕನಹಳ್ಳಿ, ಬಿದರಕೋಟೆ, ಗೂಳೂರು ಮತ್ತು ಆಬಲವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು.
ಕೆಸ್ತೂರು / ದುಂಡನಹಳ್ಳಿ ವಿತರಣಾ ಕೇಂದ್ರ ವ್ಯಾಪ್ತಿಯ ಮಲ್ಲನಕುಪ್ಪೆ, ದುಂಡನಹಳ್ಳಿ, ಕೆಸ್ತೂರು, ತೊರೆಶೆಟ್ಟಿಹಳ್ಳಿ, ಆತಗೂರು, ಕದಲೂರು, ಅಡಗನಹಳ್ಳಿ, ಹೂತಗೆರೆ ಹಾಗೂ ಹೆಮ್ಮನಹಳ್ಳಿ ಗ್ರಾಮಗಳಲ್ಲಿ ವ್ಯತ್ಯಯವಾಗಲಿದೆ.
ಕೆ.ಹೊನ್ನಲಗೆರೆ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಕೆ.ಬೆಳ್ಳೂರು, ಬ್ಯಾಡರಹಳ್ಳಿ, ತೊಪ್ಪನಹಳ್ಳಿ, ಹಳ್ಳಿಕೆರೆ, ಬಿ.ಗುಡ್ಡೆ, ಅರೆಕಲ್ ದೊಡ್ಡಿ, ಕಬ್ಬಾರೆ, ತೈಲೂರು ಹಾಗೂ ಕೆ. ಹೊನ್ನಲಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ 4 ನೇ ತ್ರೈಮಾಸಿಕ ನಿರ್ವಹಣಾ ಕಾರ್ಯದ ಹಿನ್ನಲೆಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುವುದು ಎಂದು ಸೆಸ್ಕಾಂ ಗ್ರಾಮಾಂತರ ಉಪ ವಿಭಾಗದ ಎಇಇ ಮೋಹನ್ ತಿಳಿಸಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
ಮಡಿಕೇರಿಯ ಈ ಪ್ರದೇಶಗಳಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ |Power Cut