ಮಂಡ್ಯ: ಇಂದು ಮಂಡ್ಯ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್‌ನ ನಾಗೇಶ್, ಉಪಾಧ್ಯಕ್ಷರಾಗಿ ಬಿಜೆಪಿಯ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಗೆ ಭಾರೀ ಮುಖಭಂಗವೇ ಆಗಿದೆ.
ಮಂಡ್ಯ ನಗರ ಸಭೆಯು 35 ಸದಸ್ಯರ ಬಲ ಹೊಂದಿದೆ. ಇದರಲ್ಲಿ ಎಂಪಿ 1, ಶಾಸಕ 1 ಸೇರಿ 37 ಜನರಿಗೆ ಮತದಾನದ ಹಕ್ಕು ಹೊಂದಿದ್ದರು.
ಒಟ್ಟು ಜೆಡಿಎಸ್ 18 ಸದಸ್ಯರಿದ್ದರೇ, ಒಟ್ಟು ಬಿಜೆಪಿಯ 2 ಸದಸ್ಯರು ಇದ್ದಾರೆ. ಒಟ್ಟು ಕಾಂಗ್ರೆಸ್‌ನ 10 ಸದಸ್ಯರು. ಒಟ್ಟು ಪಕ್ಷೇತರ 5 ಸದಸ್ಯರು. ಜೆಡಿಎಸ್ 15+, ಬಿಜೆಪಿ 2+, ಕಾಂಗ್ರೆಸ್‌ನಿಂದ ಅಪರೇಷನ್ 1+, ಸಂಸದ 1 = ಜೆಡಿಎಸ್ 19 ಸದಸ್ಯರ ಸಂಖ್ಯಾಬಲವಿತ್ತು.
ಕಾಂಗ್ರೆಸ್ 9+, ಪಕ್ಷೇತರ 5+, ಜೆಡಿಎಸ್‌ನಿಂದ ಅಪರೇಷನ್ 3+, ಶಾಸಕ 1 = 18 ಸದಸ್ಯರ ಬಲವಿತ್ತು. ಅಂತಿಮವಾಗಿ ಮಂಡ್ಯ ನಗರಸಭೆ ಜೆಡಿಎಸ್ ತೆಕ್ಕೆಗೆ ಸೇರಿದೆ. ಮಂಡ್ಯ ನಗರಸಭೆ ಗದ್ದುಗೆಯನ್ನು ಜೆಡಿಎಸ್ ಏರಿದೆ. ಆಪರೇಷನ್‌ಗೆ ಸೆಡ್ಡು ಹೊಡೆದು ಜೆಡಿಎಸ್ ಗೆಲುವು ಸಾಧಿಸಿದೆ. ಈ ಮೂಲಕ ಸಚಿವ ಚಲುವರಾಯಸ್ವಾಮಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಟಕ್ಕರ್ ಕೊಟ್ಟಿದ್ದಾರೆ.
ಅಂದಹಾಗೇ ಮಂಡ್ಯ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ನಾಗೇಶ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅರುಣ್‌ಕುಮಾರ್ ಆಯ್ಕೆಯಾಗಿದ್ದಾರೆ. ಮಂಡ್ಯ ನಗರಸಭೆ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಇದಾಗಿತ್ತು.
ಬಿಜೆಪಿ ಕೇಂದ್ರ ಸರ್ಕಾರದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿವರ್ತನೆ ಪರ್ವ ಆರಂಭ…!








