ಬೆಂಗಳೂರು : 2025-26ನೇ ಶೈಕ್ಷಣಿಕ ಸಾಲಿನ ಉಳಿಕೆ ಪಠ್ಯಪುಸ್ತಕಗಳ ದಾಸ್ತಾನು ಮಾಹಿತಿಯನ್ನು SATS ತಂತ್ರಾಂಶದಲ್ಲಿ ಇಂಧೀಕರಿಸುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2025-26ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳ ದಾಸ್ತಾನು ಮಾಹಿತಿಯನ್ನು SATS ತಂತ್ರಾಂಶದಲ್ಲಿ ಇಂಧೀಕರಿಸುವ ಸಂಬಂಧ ಉಲ್ಲೇಖಿತ ಜ್ಞಾಪನದಲ್ಲಿ ಹಾಗೂ ಈ ಕಛೇರಿಯ ಅನೇಕ ಸುತ್ತೋಲೆಗಳಲ್ಲಿ ಉಚಿತ/ಅನುದಾನಿತ/ಅನುದಾನ ರಹಿತ ಹಾಗೂ ಇತರೇ ಇಲಾಖೆಯಿಂದ ನಡೆಯುತ್ತಿರುವ ಶಾಲೆಗಳು ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸುವ ಸಂದರ್ಭದಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬೇಡಿಕೆಯನ್ನು ಸಲ್ಲಿಸಿರುವ ಬಗ್ಗೆ ಪರಿಶೀಲಿಸಲು ಹಾಗೂ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಿದ ನಂತರದಲ್ಲಿ ಉಳಿಕೆಯಾಗುವ ಪಠ್ಯಪುಸ್ತಕಗಳನ್ನು ಬ್ಲಾಕ್ ಹಂತಕ್ಕೆ ಹಿಂಪಡೆದು ಸದರಿ ಮಾಹಿತಿಯನ್ನು SATS ತಂತ್ರಂಶದಲ್ಲಿ Return to block ಅಡಿಯಲ್ಲಿ ದಾಸ್ತಾನು ಮಾಹಿತಿಯನ್ನು ತಪ್ಪದೇ ದಾಖಲಿಸುವಂತೆ ಈಗಾಗಲೇ ತಿಳಿಸಲಾಗಿರುತ್ತದೆ.
ಈ ಸಂಬಂಧ 2026-27ನೇ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಲು ಪೂರ್ವ ಸಿದ್ಧತಾ ಚಟುವಟಿಕೆಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘ(ರಿ)ದಲ್ಲಿ ಮಾಡಿಕೊಳ್ಳಬೇಕಾಗಿರುವುದಿಂದ. ಈಗಾಗಲೇ 2025-26ನೇ ಸಾಲಿನಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು ಶಾಲೆಯಿಂದ ತಾಲ್ಲೂಕುಗಳಿಗೆ, ತಾಲ್ಲೂಕಿನಿಂದ ರಾಜ್ಯ ಕಛೇರಿಗೆ ಕ್ರೂಢೀಕರಣಗೊಂಡು ಬಂದಂತಹಾ ಶೀರ್ಷಿಕೆಗಳ ಅಂಕಿ-ಅಂಶಗಳ ಆಧಾರದ ಮೇಲೆ ಪಠ್ಯಪುಸ್ತಕಗಳನ್ನು ಮುದ್ರಿಸಿ, ಶಾಲೆಗಳಿಗೆ ವಿತರಿಸಲಾಗಿದೆ.
ಶಾಲೆಗಳಲ್ಲಿ ಮುಖ್ಯಶಿಕ್ಷಕರು, ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಠ್ಯಪುಸ್ತಕಗಳನ್ನು ವಿತರಿಸಿ, SATS ತಂತ್ರಾಂಶದಲ್ಲಿ ಅಳವಡಿಸುವ ಪ್ರಕ್ರಿಯೆ ಪೂರ್ಣಗೊಂಡಿರಬೇಕು. ಆಗ ಮಾತ್ರ ಪಠ್ಯಪುಸ್ತಕಗಳ ವಿತರಣೆಯ ಶೇಕಡಾ ಪ್ರಗತಿಯನ್ನು ಶೇಕಡಾ 100 ರಷ್ಟು ತಿಳಿಯಲು ಸಾಧ್ಯವಾಗುತ್ತದೆ. ಆದರೆ, SATS ತಂತ್ರಾಂಶವನ್ನು ಪರಿಶೀಲಿಸಿದಾಗ, ಕೇವಲ ಶೇ. 64 ಮಾತ್ರ ಪ್ರಗತಿಯಾಗಿರುವುದು ಕಂಡು ಬಂದಿದೆ.
ಕೆಲವೊಮ್ಮೆ ದಾಖಲಾತಿಯ ವ್ಯತ್ಯಯದಿಂದ ಪಠ್ಯಪುಸ್ತಕಗಳು ಉಳಿಕೆಯಾಗಿದ್ದಲ್ಲಿ ಉಳಿಕೆಯಾದ ಶೀರ್ಷಿಕೆಗಳನ್ನು SATSನಲ್ಲಿ Return to block ಅಡಿಯಲ್ಲಿ ಇಂದೀಕರಿಸಬೇಕು, ದಿನಾಂಕ:21.08.2025ರೊಳಗೆ ಉಳಿಕೆಯಾಗಿರುವ ಪಠ್ಯಪುಸ್ತಕಗಳ ಮಾಹಿತಿಯನ್ನು ಭೌತಿಕವಾಗಿ ಹಾಗೂ SATS ತಂತ್ರಾಂಶದಲ್ಲಿ ಅಳವಡಿಸುವುದು ಕಡ್ಡಾಯವಾಗಿರುತ್ತದೆ. ಪ್ರಸ್ತುತ ಸಾಲಿಗೆ ಅಗತ್ಯವಿಲ್ಲದ ಉಳಿಕೆ ಪಠ್ಯಪುಸ್ತಕಗಳು ಯಾವುದೇ ಶಾಲೆಗಳಲ್ಲಿ ಕಂಡುಬಂದಲ್ಲಿ ಮುಖ್ಯಶಿಕ್ಷಕರನ್ನು ಹಾಗೂ ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
ತಾಲ್ಲೂಕು ಹಂತದ ಪಠ್ಯಪುಸ್ತಕ ನೋಡಲ್ ಅಧಿಕಾರಿಗಳಿಗೆ ಹಲವು ಬಾರಿ KTBS ಸಂಸ್ಥೆಯಿಂದ ಆಯೋಜಿಸಿದ ಗೂಗಲ್ ಸಭೆಗಳಲ್ಲಿ ತಿಳಿಸಿದಂತೆ, ತಾಲ್ಲೂಕು ಹಂತದಲ್ಲಿ ಹೆಚ್ಚುವರಿ/ಕೊರತೆ ಇರುವ ಪಠ್ಯಪುಸ್ತಕಗಳನ್ನು ಸರಿದೂಗಿಸಿಕೊಂಡು ಮರು ಹೊಂದಾಣಿಕೆ ಪ್ರಕ್ರಿಯೆಯನ್ನು ಮಾಡಿ, ಪಠ್ಯಪುಸ್ತಕ ದಾಸ್ತಾನು ಮಾಹಿತಿಯನ್ನು SATS ತಂತ್ರಾಂಶದಲ್ಲಿ ಅಳವಡಿಸಲು ಸಿದ್ಧತೆಯನ್ನು ಮಾಡಿಕೊಳ್ಳಲು ತಿಳಿಸಲಾಗಿತ್ತು. ಪ್ರತಿಯೊಂದು ಬ್ಲಾಕ್ ನೋಡಲ್ ಅಧಿಕಾರಿಗಳು ಕೂಡಲೇ ಕ್ರಮವಹಿಸಿ ತಮ್ಮ ತಾಲ್ಲೂಕಿನ ಶಾಲೆಯಲ್ಲಿ ಉಳಿಕೆ ಇರುವ ಪಠ್ಯಪುಸ್ತಕಗಳನ್ನು ಪಡೆದು ಭೌತಿಕವಾಗಿ ಸಂಗ್ರಹಿಸಿ ದಿನಾಂಕ: 25.08.2025ರೊಳಗೆ SATSನಲ್ಲಿ ಇಂಧೀಕರಿಸಲು ಕ್ರಮವಹಿಸುವುದು. ಈ ಹಂತದಲ್ಲಿ ಲೋಪ ಕಂಡುಬಂದಲ್ಲಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪಠ್ಯಪುಸ್ತಕ ನೋಡಲ್ ಅಧಿಕಾರಿಗಳೇ ಜವಬ್ದಾರರಾಗಿರುತ್ತಾರೆ.
ಜಿಲ್ಲಾ ಹಂತದ ವಠ್ಯವುಸ್ತಕ ನೋಡಲ್ ಅಧಿಕಾರಿಗಳಿಗೆ ತಾಲ್ಲೂಕುಗಳಿಂದ ಉಳಿಕೆ ಪಠ್ಯಪುಸ್ತಕಗಳ ಮಾಹಿತಿಯನ್ನು ಪಡೆದು ಜಿಲ್ಲಾ ಹಂತದಲ್ಲಿ ಕೊರತೆ/ಅಗತ್ಯವಿರುವ ಪಠ್ಯಪುಸ್ತಕಗಳನ್ನು ಮರುಹೊಂದಾಣಿಕ ಮಾಡಿ ಉಳಿಕೆ ಪಠ್ಯಪುಸ್ತಕಗಳ ಬಗ್ಗೆ ತಾಲ್ಲೂಕು ಪಠ್ಯಪುಸ್ತಕ ನೋಡಲ್ ಅಧಿಕಾರಿಗಳಿಗೆ ಪಠ್ಯಪುಸ್ತಕ ದಾಸ್ತಾನು ನಿರ್ವಹಿಸುವ ಬಗ್ಗೆ ಮಾರ್ಗದರ್ಶನ ನೀಡಲು KTBSಸಂಸ್ಥೆಯಿಂದ ಆಯೋಜಿಸಿದ ಗೂಗಲ್ ಸಭೆಗಳಲ್ಲಿ ತಿಳಿಸಲಾಗಿದೆ. ಅಂತಿಮವಾಗಿ ತಮ್ಮ ಜಿಲ್ಲೆಯ ತಾಲ್ಲೂಕಿನ ಶಾಲೆಗಳಲ್ಲಿ/ ಬ್ಲಾಕ್ ಪಠ್ಯಪುಸ್ತಕ ಮಳಿಗೆಯಲ್ಲಿ ಅನಗತ್ಯ ಶೀರ್ಷಿಕೆಯ ಪಠ್ಯಪುಸ್ತಕಗಳು ಉಳಿಕೆಯಾಗದಂತೆ, ಕ್ರಮವಹಿಸಲು ಹಾಗೂ ಉಳಿದ ಪಠ್ಯಪುಸ್ತಕಗಳನ್ನು SATSನಲ್ಲಿ ಇಂಧೀಕರಿಸಲು ತಾಲ್ಲೂಕುಗಳಿಗೆ ನೀಡಿರುವ ಅವಧಿಯೊಳಗೆ ಕಡ್ಡಾಯವಾಗಿ ಉಳಿಕೆ ಪಠ್ಯಪುಸ್ತಕಗಳ ಮಾಹಿತಿಯನ್ನು ರಾಜ್ಯ ಕಛೇರಿಗೆ ಸಲ್ಲಿಸುವುದು ಜಿಲ್ಲಾ ಉಪನಿರ್ದೇಶಕರು ಹಾಗೂ ಜಿಲ್ಲಾ ಪಠ್ಯಪುಸ್ತಕ ನೋಡಲ್ ಅಧಿಕಾರಿಗಳ ಅಧ್ಯ ಕರ್ತವ್ಯವಾಗಿರುತ್ತದೆ. ಅನವಶ್ಯಕವಾಗಿ ಪಠ್ಯಪುಸ್ತಕಗಳು ಉಳಿಕೆಯಾದಲ್ಲಿ ತಾವೇ ನೇರ ಹೊಣೆಗಾರಾಗಿರುತ್ತೀರಿ.
ಉಳಿಕೆ ಪಠ್ಯಪುಸ್ತಕಗಳ ಮಾಹಿತಿಯನ್ನು SATS ತಂತ್ರಾಂಶದಲ್ಲಿ ಇಂಧೀಕರಿಸದಿದ್ದಲ್ಲಿ, ಉಳಿಕೆ ಪಠ್ಯಪುಸ್ತಕಗಳ ಬಗ್ಗೆ, ನಿಖರವಾದ ಮಾಹಿತಿಯು ತಿಳಿದುಬರುವುದಿಲ್ಲ ಹಾಗೂ ಮಾರಾಟ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದ್ದು, ಪಠ್ಯಪುಸ್ತಕಗಳಿಗೆ ಶೇ. 100ರಷ್ಟು ಹಣ ಪಾವತಿಸದೇ ಪಠ್ಯಪುಸ್ತಕಗಳನ್ನು ಪಡೆಯದೇ ಇದ್ದಲ್ಲಿ ಮುಂದಿನ ಆಗು-ಹೋಗುಗಳಿಗೆ ಆಯಾ ಜಿಲ್ಲಾ ಉಪನಿರ್ದೇಶಕರು ಹಾಗೂ ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳೇ ಹೊಣೆಗಾರರು, ಮಾರಾಟ ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ, ಹಣ ಪಾವತಿಸದೇ ಇದ್ದರೆ, ಕರ್ನಾಟಕ ಪಠ್ಯಪುಸ್ತಕ ಸಂಘ(ರಿ)ಗೆ ಆರ್ಥಿಕ ನಷ್ಟವಾಗುತ್ತದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮವಹಿಸುವುದು. ದಿನಾಂಕ: 30.08.2025ರೊಳಗೆ ಉಳಿಕೆ ಪಠ್ಯಪುಸ್ತಕಗಳ ಮಾಹಿತಿಯನ್ನು ಅತೀ ಜರೂರಾಗಿ ನೀಡಲು ತಿಳಿಸಿದೆ.