ಮಂಡ್ಯ : ಕಳೆದ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಆತನ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು, ಸೋಮವಾರ ಮನೆಯಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ಜರುಗಿದೆ.
ಮದ್ದೂರು ತಾಲೂಕಿನ ದೊಡ್ಡ ಅರಸಿನಕೆರೆ ಗ್ರಾಮದ ಮಹದೇವಸ್ವಾಮಿ ಅಲಿಯಾಸ್ ಬೋಟಿ ಮಹದೇವ (45) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎನ್ನಲಾಗಿದೆ.
ಮೃತ ವ್ಯಕ್ತಿ ಮಹದೇವಸ್ವಾಮಿ ಕೆ.ಎಂ.ದೊಡ್ಡಿಯಲ್ಲಿ ಬೀದಿ ಬದಿ ಹೋಟೆಲ್ ನಡೆಸುತ್ತಿದ್ದು, ದೊಡ್ಡಅರಸಿನಕೆರೆ ಚಿಕ್ಕಮಾಯಿಗಯ್ಯ ಎಂಬುವವರ ಮನೆಯಲ್ಲಿ ಬಾಡಿಗೆಗೆ ಪಡೆದು ವಾಸವಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ವಿಪರೀತ ಸಾಲ ಮಾಡಿಕೊಂಡಿದ್ದರಿಂದ ಮನೆಬಿಟ್ಟು ನಾಪತ್ತೆಯಾಗಿದ್ದನು. ಈತನ ಪತ್ನಿ ನಾಪತ್ತೆಯಾದ ಗಂಡನನ್ನು ಸಾಕಷ್ಟು ಹುಡುಕಿ ಸಾಕಾಗಿದ್ದರು.
ಬಳಿಕ, ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ತೆರಳಿ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಒಂದೂವರೆ ವರ್ಷದಿಂದಲೂ ಮನೆ ಬಾಡಿಗೆಗೆ ನೀಡಿದ್ದ ಮಾಯಿಗಯ್ಯ ಅವರ ಪತ್ನಿ ಗೀತಾ ಎಂಬುವವರು ಬಾಡಿಗೆ ನೀಡುವಂತೆ ಕೇಳಿದ್ದರು. ಆದರೆ ಬಾಡಿಗೆ ನೀಡಲು ಮಹದೇವಸ್ವಾಮಿ ಇಲ್ಲದಿರುವ ಕಾರಣ ಈತನ ತಮ್ಮ ರವಿ ಎಂಬುವವನನ್ನು ಮನೆ ಖಾಲಿ ಮಾಡಿಕೊಡುವಂತೆ ಹೇಳಿದ್ದರು. ಸ್ವಲ್ಪ ಸಮಯ ನೀಡುವಂತೆ ಮಹದೇವಸ್ವಾಮಿ ಇಲ್ಲದ್ದರಿಂದ ಆತ ಸಿಗುವವರೆಗೆ ಕಾಲಾವಕಾಶ ನೀಡುವಂತೆ ರವಿ ಕೇಳಿಕೊಂಡಿದ್ದರು. ಆದರೆ ಮನೆ ಮಾಲೀಕರು ಬಾಡಿಗೆ ವಿಷಯವನ್ನು ಕೈಬಿಟ್ಟಿದ್ದರು.
ಮುಂದಿನ ತಿಂಗಳು ಫೆಬ್ರವರಿಯಲ್ಲಿ ಗ್ರಾಮ ದೇವತೆ ಏಳೂರಮ್ಮ ದೇವಿಯ ಜಾತ್ರೆ ಇರುವುದರಿಂದ ಸುಣ್ಣ, ಬಣ್ಣ ಮಾಡಿಸಲು ಮನೆ ಖಾಲಿ ಮಾಡಿಕೊಡುವಂತೆ ರವಿಯನ್ನು ಕೇಳಿಕೊಂಡಿದ್ದರು.
ರವಿ ಇಂದು ಸಮಯ ತೆಗೆದುಕೊಂಡಿದ್ದು, ಅದರಂತೆ ಮನೆಯಲ್ಲಿನ ಸಾಮಾನು ಸರಂಜಾಮು ತೆಗೆದುಕೊಳ್ಳಲು ಮನೆಯ ಹತ್ತಿರ ಹೋಗಿದ್ದಾರೆ. ಮನೆಯ ಬಾಗಿಲನ್ನು ಒಳಗಿನಿಂದ ಬೀಗ ಹಾಕಿರುವುದು ಗೊತ್ತಾಗಿ, ಆರೆ ಮತ್ತಿತರ ಆಯುಧ ಬಳಸಿ ಬಾಗಿನ್ನು ತೆರೆದಿದ್ದಾರೆ. ಮನೆ ಬಾಗಿಲ ಹಿಂಬದಿಯಲ್ಲೇ ನೇಣು ಬಿಗಿದುಕೊಂಡ ಮಹದೇವಸ್ವಾಮಿ ಅಸ್ಥಿಪಂಜರ ಪತ್ತೆಯಾಗಿದೆ.
ಈತ ಮನೆಬಿಟ್ಟು ಹೋದ ನಂತರ ಗ್ರಾಮದಲ್ಲಿ ಯಾರಿಗೂ ಕಾಣಿಸಿಕೊಂಡಿರಲಿಲ್ಲ. ಈ ಮಧ್ಯೆ ರಾತ್ರಿ ವೇಳೆ ಮನೆಗೆ ಆಗಮಿಸಿ ನೇಣು ಬಿಗಿದುಕೊಂಡು ಸಾವನ್ನಪ್ಪಿರಬಹುದೆಂದು ತಮ್ಮ ರವಿ ಪೊಲೀಸರಿಗೆ ತಿಳಿಸಿದ್ದಾರೆ.
ಮೃತ ಮಹದೇವಸ್ವಾಮಿ ಆತ್ಮಹತ್ಯೆಯ ವಿಚಾರವನ್ನು ಬೆಂಗಳೂರಿನಲ್ಲಿದ್ದ ಪತ್ನಿ ಪವಿತ್ರಗೆ ವಿಚಾರ ತಿಳಿಸಿ ಶವದ ಅಸ್ಥಿ ಪಂಜರವನ್ನು ಕೆ.ಎಂ.ದೊಡ್ಡಿ ಪೊಲೀಸರು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
BIG NEWS: 8 ದಿನಗಳಲ್ಲಿ ‘KPCL ನೇಮಕಾತಿ’ಯ ತಾತ್ಕಾಲಿಕ ಫಲಿತಾಂಶ ಪ್ರಕಟ – ಕೆಇಎ
ರಾಜ್ಯ ಸರ್ಕಾರದಿಂದ ‘ಬಳ್ಳಾರಿ ಶೂಟೌಟ್’ ಮುಚ್ಚಿ ಹಾಕಲು ಷಡ್ಯಂತ್ರ್ಯ: HDK ಗಂಭೀರ ಆರೋಪ








