ಬೆಂಗಳೂರು: ಬ್ಯಾಗ್ನಲ್ಲಿ ಬಾಂಬ್ ಇದೇ ಅಂತ ಸಿಎಂ ನಿವಾಸದ ಬಳಿ ವ್ಯಕ್ತಿಯೊಬ್ಬ ಹೇಳಿದ ಘಟನೆ ನಡೆದಿದೆ.
ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ವ್ಯಕ್ತಿಯೊಬ್ಬರು ಆಗಮಿಸಿದ್ದರು, ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಸಿಎಂ ದೆಹಲಿಗೆ ತೆರಳಿದಿದ್ದಾರೆ ಇನ್ನೊಮ್ಮೆ ಬನ್ನಿ ಅಂಥ ಹೇಳಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮತ್ತು ವ್ಯಕ್ತಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಬ್ಯಾಗ್ನಲ್ಲಿ ಇರೋದು ಎನು ಅಂತ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ವ್ಯಕ್ತಿ ಬಾಂಬ್ ಇದೇ ಅಂತ ಹೇಳಿದ್ದಾನೆ. ಈ ನಡುವೆ ಸ್ಥಳದಲ್ಲಿದ್ದ ಪೊಲೀಸರು ಗಾಬರಿಯಾಗಿ, ವ್ಯಕ್ತಿಯನ್ನು ಪರಿಶೀಲನೆ ನಡೆಸಿ, ಬಳಿಕ ಆತನಿಗೆ ಬುದ್ದಿ ಹೇಳಿ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.