ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಇಂದು ವಿಧಾನಸೌಧದ ಬಳಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಂತ ವ್ಯಕ್ತಿಯೊಬ್ಬ ಸಿದ್ಧರಾಮಯ್ಯ ವಿರುದ್ಧವೇ ಅವರಿಗೆ ಧಿಕ್ಕಾರ ಎಂಬುದಾಗಿ ಕೂಗಿರೋದಾಗಿ ತಿಳಿದು ಬಂದಿದೆ.
ಇಂದು ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದ ನಿಮಿತ್ತ, ಬೆಂಗಳೂರಿನ ವಿಧಾನಸೌಧದ ಬಳಿಗೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಗೃಹಲಕ್ಷ್ಮೀ ಯೋಜನೆಯ ಸಮಸ್ಯೆ ಪರಿಹರಿಸಿಕೊಳ್ಳೋದಕ್ಕಾಗಿ ಸಿಎಂ ಸಿದ್ಧರಾಮಯ್ಯ ಭೇಟಿಗೆ ಆಗಮಿಸಿದ್ದರು.
ಬೆಳಿಗ್ಗೆ 10.30ರಿಂದ ಕಾಯುತ್ತಿದ್ದಂತ ಅವರಿಗೆ ಸಿಎಂ ದರ್ಶನವೇ ಆಗಲಿಲ್ಲ. ಇದರಿಂದ ಸಿಟ್ಟಾದಂತ ಅವರು ಆ ಜನಸಂದಣಿಯ ನಡುವೆ ಸಿಎಂ ಸಿದ್ಧರಾಮಯ್ಯಗೆ ಧಿಕ್ಕಾರ, ಸಿಎಂ ಸಿದ್ಧರಾಮಯ್ಯಗೆ ಧಿಕ್ಕಾರ ಎಂಬುದಾಗಿ ಧಿಕ್ಕಾರವನ್ನು ಕೂಗಿದ್ದಾರೆ.
ಕೂಡಲೇ ಆ ವ್ಯಕ್ತಿಯ ಬಳಿಗೆ ಬಂದಂತ ಪೊಲೀಸರು, ಆತನ ಸಮಸ್ಯೆ ಏನು ಎಂಬುದನ್ನು ವಿಚಾರಿಸಿ, ಸಂಬಂಧ ಪಟ್ಟ ಅಧಿಕಾರಿಗಳ ಬಳಿ ಕರೆದೊಯ್ದು, ಗೃಹಲಕ್ಷ್ಮೀ ಯೋಜನೆಯ ಸಮಸ್ಯೆ ಸರಿಪಡಿಸಿದ್ದಾರೆ. ಈ ಬಳಿಕ ಸಂತಸಗೊಂಡಂತ ಆತ, ಸಿಎಂ ಸಿದ್ಧರಾಮಯ್ಯಗೆ ಜೈ, ಸಿಎಂ ಸಿದ್ಧರಾಮಯ್ಯಗೆ ಜೈ ಎಂಬುದಾಗಿ ಜೈಕಾರವನ್ನು ಹಾಕಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
BREAKING: ತುಮಕೂರಲ್ಲಿ ಬಿಸಿಯೂಟ ಸೇವಿಸಿದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು
BREAKING NEWS: ‘ಮ್ಯಾನ್ಮಾರ್’ ಜೊತೆಗಿನ ‘ಮುಕ್ತ ಸಂಚಾರ ವ್ಯವಸ್ಥೆ’ಯನ್ನು ರದ್ದುಗೊಳಿಸಿದ ‘ಭಾರತ’