ಗದಗ: ಜಿಲ್ಲೆಯಲ್ಲಿ ಬಿರಿಯಾನಿ ತಿನ್ನಲು ಹೋಟೆಲ್ ಗೆ ತೆರಳಿದಂತ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವಂತ ಘಟನೆ ಗದಗದಲ್ಲಿ ನಡೆದಿದೆ.
ಗದಗ ಜಿಲ್ಲೆಯ ನರಗುಂದ ಪಟ್ಟಣದ ಬಿರಿಯಾನಿ ತಿನ್ನೋದಕ್ಕೆ ಬಸವರಾಜ್ ಮಮ್ಮಟಗೇರಿ(22) ಎಂಬ ಯುವಕ ತೆರೆಳಿದ್ದನು. ತಾಜ್ ಹೋಟೆಲ್ ಗೆ ಬಿರಿಯಾನಿ ತಿನ್ನಲು ತೆರಳಿದ್ದಂತ ಬಸವರಾಜ್ ಮಮ್ಮಟಗೇರಿಯನನ್ನು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ತೆರಳಿಂದಂತ ಮೂವರು ಕಣ್ಣಿಗೆ ಕಾರದಪುಡಿ ಎರಚಿದ್ದಾರೆ. ಆ ಬಳಿಕ ಮನಸೋ ಇಚ್ಛೆ ಹಲ್ಲೆ ಮಾಡಿ, ಹತ್ಯೆಗೈದು ಪರಾರಿಯಾಗಿದ್ದಾರೆ.
ಮಮ್ಮಟಗೇರಿಯ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿದು ಸ್ಥಳಕ್ಕೆ ನರಗುಂದ ಡಿವೈಎಸ್ಪಿ ಪ್ರಭು ಭೇಟಿ ನೀಡಿ, ಪರಿಶೀಲಿಸಿದರು. ಈ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸ ಮೈಲುಗಲ್ಲು ದಾಖಲಿಸಿದ ನಮ್ಮ ಮೆಟ್ರೋ: ಹಳದಿ ಮಾರ್ಗದಲ್ಲಿ ಒಂದೇ ದಿನ 10.48 ಲಕ್ಷ ಮಂದಿ ಪ್ರಯಾಣ
ರಾಸಾಯನಿಕ ಮಿಶ್ರಿತ ಶೇಂದಿ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ: ಸಚಿವ ಆರ್.ಬಿ ತಿಮ್ಮಾಪುರ