ಬೆಳಗಾವಿ: ಜಿಲ್ಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಸಹಿತ ಕೆರೆಗೆ ಬಿದ್ದಂತ ವ್ಯಕ್ತಿಯೊಬ್ಬ ಸಾವನ್ನಪ್ಪಿರುವಂತ ಘಟನೆ ಬೆಳಗಾವಿ ಜಿಲ್ಲೆಯ ಬೆನಕನಹೊಳಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿ ದಡ್ಡಿ ಗ್ರಾಮ ನಿವಾಸಿಯಾಗಿದ್ದಂತ ಕಿರಣ್ ನಾವಲಗಿ ಎಂಬಾತ ಕಾರು ಚಾಲನೆ ಮಾಡಿಕೊಂಡು ತೆರಳುತ್ತಿದ್ದಂತ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ.
ಕಾರಿನ ಒಳಗಡೆ ಸಿಲುಕಿಕೊಂಡಿದ್ದಂತ ಕಿರಣ್ ನೀರಿನಿಂದ ಹೊರ ಬರಲಾಗದೇ ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ಕಿರಣ್ ನಾವಲಗಿ(45) ಹುಕ್ಕೇರಿ ತಾಲ್ಲೂಕಿನ ದಡ್ಡಿ ಗ್ರಾಮದವರು ಎಂಬುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿ ಕಾರು ಮೇಲೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ.
ನೀವು ಪದೇ ಪದೇ ಶೀತ, ಸೀನುಗಳಿಂದ ಬಳಲುತ್ತಿದ್ದೀರಾ? ಇಲ್ಲಿದೆ ಸುಲಭ ಪರಿಹಾರ
ತಾಯಿ ,ನಾಲ್ವರು ಸಹೋದರಿಯರ ಹತ್ಯೆ ಪ್ರಕರಣ: ‘ಹಿಂದೂ’ ಆಗಲು ಬಯಸಿದ್ದ ಆರೋಪಿ ಅರ್ಷದ್