ಶಿವಮೊಗ್ಗ: ಮೂತ್ರ ವಿಸರ್ಜನೆಗೆ ತೆರಳಿದ್ದಂತ ವ್ಯಕ್ತಿಯ ಮೇಲೆ ಸಿಮೆಂಟ್ ಸ್ಲ್ಯಾಬ್ ಕುಸಿದು ಬಿದ್ದ ಪರಿಣಾಮ, ಅದರಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ವಿನೋಬನಗರದಲ್ಲಿ ನಡೆದಿದೆ.
ಶಿವಮೊಗ್ಗದ ವಿನೋಬನಗರದ ರೈಲ್ವೆ ಪ್ಯಾರಲರ್ ರಸ್ತೆಯಲ್ಲಿ ಮೂತ್ರ ವಿಸರ್ಜನೆಗೆಂದು ಚರಂಡಿ ಸ್ಲ್ಯಾಬ್ ಮೇಲೆ ನಿಂತಿದ್ದಂತ ಬೊಮ್ಮನಕಟ್ಟೆ ನಿವಾಸಿ ಮುತ್ತಪ್ಪ(45) ಎಂಬುವರ ಮೇಲೆ ಕುಸಿತಗೊಂಡು ಅದರಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಮುತ್ತಪ್ಪ ಚರಂಡಿಗೆ ಬೀಳುತ್ತಿದ್ದಂತ ಸ್ಲ್ಯಾಬ್ ಕೂಡ ಅವರ ಮೇಲೆ ಬಿದ್ದಿದೆ. ಈ ಅವಘಡದಲ್ಲಿ ಗಾಯಗೊಂಡಿದ್ದಂತ ಮುತ್ತಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ವಿನೋಬನಗರ ಠಾಣೆಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಬಿಜೆಪಿ ಸರ್ಕಾರ’ದಂತೆಯೇ ರೈತರಿಗೆ ಪರಿಹಾರ ನೀಡಿ, ಇಲ್ಲ ‘ಕುರ್ಚಿ ಬಿಡಿ’ – ಆರ್.ಅಶೋಕ ಆಗ್ರಹ
BREAKING: ಮಂಡ್ಯದಲ್ಲಿ ಉದ್ರಿಕ್ತರಿಂದ ಕಲ್ಲು ತೂರಾಟ: ಸಿಎಂ ಸಿದ್ಧರಾಮಯ್ಯ, ಶಾಸಕ ಗಣಿಗ ರವಿ ಬ್ಯಾನರ್ ಹರಿದು ಆಕ್ರೋಶ