ಮನುಷ್ಯನು ತನ್ನ ಅಂತ್ಯ ಕಾಲದಲ್ಲಿ ಏನು ಯೋಚಿಸುತ್ತಾನೆ? ಬದುಕಿನ ಕೊನೆಯ ಹಂತದಲ್ಲಿ ಇರುವಾಗ ಮನದ ಯೋಚನೆಗಳು ಏನಿರ ಬಹುದು?
ಜ್ಙಾನಿಗಳ ಪ್ರಕಾರ ನಾಲ್ಕು ರೀತಿಯಲ್ಲಿ ಜೀವಿಗಳು ಪ್ರಾಣ ಬಿಡುತ್ತಾರಂತೆ. ಅವು- ಆರ್ತ, ರೌದ್ರ, ಧನ್ಯ ಮತ್ತು ಶುಕ್ಲ. ಇವುಗಳಲ್ಲಿ ಯಾವುದಾದರೂ ಒಂದು ರೀತಿಯ ಸಾವು ಬರತ್ತದೆ ಎಂಬುದು ಶಾಸ್ತ್ರವೇತ್ತರ ಅಂಬೋಣ. ಅವು ಯಾವುವು ವಿವರವಾಗಿ ನೋಡೋಣ.
1. ಆರ್ತ-ಹೆಸರೇ ಹೇಳುತ್ತದೆ ಆರ್ತ ನಾದ ಎಂದು. ಇವರಿಗೆ, ಅಯ್ಯೋ ನನ್ನ ಮಕ್ಕಳು, ನನ್ನ ಹೆಂಡತಿ, ನನ್ನ ಸಂಪತ್ತು ಎಲ್ಲಾ ಬಿಟ್ಟು ಹೋಗ ಬೇಕಲ್ಲಾ ಎಂಬ ದುಃಖ ಇರುತ್ತದೆ. ಅಂದರೆ ಇವರಿಗೆ ಈ ಲೋಕದ ಬಂಧವನ್ನು ಕಳಚಿ ಹೋಗಲು ಮನಸ್ಸಿರುವುದಿಲ್ಲ. ಅತ್ತ ಕಡೆಯಿಂದ ಯಮ ಪಾಶ ಹಾಕಿ ಎಳೆಯುತ್ತಿರುತ್ತಾನೆ. ಅಂತೂ ಕೊನೆಗೆ ಒತ್ತಾಯ ಪೂರ್ವಕ ಈ ಲೋಕವನ್ನು ತ್ಯಜಿಸುತ್ತಾನೆ. ಇದನ್ನು ಆರ್ತ ಮರಣ ಎಂದಿದ್ದಾರೆ. ಈ ರೀತಿಯಲ್ಲಿ ಸತ್ತವರು ಮುಂದಿನ ಜನ್ಮದಲ್ಲಿ ಹೇಗಾಗುತ್ತಾರೆ ಗೊತ್ತೇ? ಆತ ಮುಂದಿನ ಜನ್ಮದಲ್ಲಿ ಹುಟ್ಟಿದಾಗ ಆತನ ಅಳು ಅದನ್ನು ಸೂಚಿಸುತ್ತದೆ. ನವಜಾತ ಶಿಶುವು ವಿಪರೀತ ಅಳುತ್ತಿರುತ್ತದೆ. ಈ ವ್ಯಕ್ತಿ ಜೀವನ ಪೂರ್ತಿ ಜಿಪುಣ, ದುಃಖಿತನಾಗಿ ಯಾರಿಗೂ ಉಪಯೋಗವಾಗದೆ ಬಾಳುತ್ತಾನೆ.
2. ರೌದ್ರ: ಕೆಲ ಮನುಷ್ಯರು ಆಡುವ ಮಾತುಗಳನ್ನು ಕೇಳಿರುತ್ತೇವೆ. ‘ನಾನು ಸತ್ತರೂ ನನ್ನ ಹೆಣ ಮುಟ್ಟ ಬೇಡ, ನಾನು ಸತ್ತರೂ ದೆವ್ವವಾಗಿ ನಿನ್ನನ್ನು ಬಿಡುವುದಿಲ್ಲ, ನನ್ನ ಚಿತೆಗೆ ನೀನು ಕೊಳ್ಳಿ ಇಡುವುದು ಬೇಡ, ನಾನು ಸತ್ತರೆ ನೀನು ನನ್ನ ಅಂತ್ಯ ವಿಧಿ ಮಾಡ ಬೇಡ’, ಇತ್ಯಾದಿ ಮಾತಾಡುವವರಿಗೆ ರೌದ್ರ ಮರಣವಿರುತ್ತದೆ. ಇವರ ಮುಂದಿನ ಜನ್ಮ ಕಲಹದಲ್ಲೇ ಕಳೆಯುತ್ತದೆ. ಪುನರ್ಜನ್ಮದಲ್ಲಿ ಶಿಶುವಾಗಿ ಹುಟ್ಟಿದಂದಿನಿಂದಲೇ ಇಂತವರ ಗುಣ ತಿಳಿಯ ಬಹುದು. ವಿಪರೀತ ಹಟ ಮಾಡುವಿಕೆ, ಕೋಪದಿಂದ ಮಗುವಿನ ಮುಖದ ವರ್ಣವೇ ಬದಲಾಗುವುದು, ಹಾಲಿನ ಬಾಟಲಿಯನ್ನು ಎಳೆದು ಬಿಸಾಡುವಿಕೆ, ಕೆಲ ಜನರನ್ನು ಕಂಡರೆ ಅಳುವುದು ಇತ್ಯಾದಿ ಗುಣಗಳಿರುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
3. ಧನ್ಯ: ಈ ವ್ಯಕ್ತಿಯು ಜೀವನದಲ್ಲಿ ಸದಾ ಸಜ್ಜನಿಕೆಯುಳ್ಳಾತ ಇವನು ಸದಾ ‘ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ಅನೇಕ ಜನರಿಗೆ, ಆರ್ತರಿಗೆ ದಾನ ಮಾಡಿದ್ದೇನೆ, ಯಾರನ್ನೂ ದೂಷಿಸಿಲ್ಲ, ಒಟ್ಟಿನಲ್ಲಿ ಸತ್ಯದಲ್ಲೇ ನಡೆದಿದ್ದೇನೆ’ ಎಂದು ಯೋಚಿಸುತ್ತಾ ಜೀವ ಬಿಡುತ್ತಾನೆ. ಇದು ಧನ್ಯ ಚಿಂತನಾ ಮರಣ. ಈತ ಮುಂದಿನ ಜನ್ಮದಲ್ಲಿ ಸಾತ್ವಿಕನೂ ಶ್ರೀಮಂತನೂ, ದಾನಿಯೂ ಆಗಿ ಹುಟ್ಟುತ್ತಾನೆ. ಇವನು ಮಗುವಿದ್ದಾಗಲೂ ಯಾರಿಗೂ ಹಿಂಸೆ ನೀಡುವುದಿಲ್ಲ. ನೀವು ಕೆಲ ತಾಯಂದಿರ ಮಾತು ಕೇಳಿರ ಬಹುದು. ನನ್ನ ಮಗು ಶಿಶುವಾಗಿದ್ದಾಗ ರಗಳೆಯೇ ಇರಲಿಲ್ಲ. ಹಾಲು ಕೊಟ್ಟು ಮಲಗಿಸಿದರೆ ಅವನಷ್ಟಕ್ಕೇ ಆಟವಾಡಿ ಕೊಂಡು ಇರುತ್ತಾನೆ. ಅಳುವುದು ತೀರಾ ಕಡಿಮೆ. ಅಂತೂ ಇವನ ಬಾಲ್ಯದಲ್ಲಿ ನನಗೇನೂ ರಗಳೆಯಾಗಲಿಲ್ಲ’ ಎಂದು ಮಗುವಿನ ಬಗ್ಗೆ ಗುಣಗಾನ ಮಾಡುತ್ತಾಳೆ. ಇದು ಧನ್ಯ ಚಿಂತನೆಯಲ್ಲಿ ಮರಣಿಸಿದವನ ಪುನರ್ಜನ್ಮದ ರೂಪ.
4. ಶುಕ್ಲ : ಈ ಮರಣ ಬರುವುದು ತೀರಾ ಅಪರೂಪ. ಪುಣ್ಯಾತ್ಮರಿಗೆ ಮಾತ್ರಾ ಬರುವ ಸಾವು ಇದು. ಕಲಿಯುಗದಲ್ಲಂತೂ ಲಕ್ಷಕ್ಕೆ ಒಬ್ಬನಿಗೆ ಮಾತ್ರ ಇಂತಹ ಮರಣ ಪ್ರಾಪ್ತಿಯಾಗುತ್ತದೆ. ಉದಾ: ಮಾಜಿ ರಾಷ್ಟ್ರಪತಿ ಕಲಾಂ, ಯಕ್ಷಗಾನ ವೇಷಧಾರಿಯಾದ ಕೆರೆಮನೆ ಶಂಬು ಹೆಗ್ಗಡೆ, ಯಕ್ಷಗಾನ ಭಾಗವತರಾದ ದಾಮೋದರ ಮಂಡೆಚ್ಚರು, ಹೋರಾಟದಲ್ಲೇ ಮಡಿಯುವ ಯೋಧರ ಮರಣ ಈ ರೀತಿಯದು. ತನ್ನ ಉದ್ದೇಶಿತ ಕೆಲಸದ ಮಧ್ಯದಲ್ಲೇ ಅಸು ನೀಗುವವರು. ಅವರಿಗೆ ಗತ ಕಾಲದ ಬಗೆಗೆ ವಿಷಾದಗಳಿಲ್ಲ. ಭವಿಷ್ಯದ ಚಿಂತೆಯೂ ಇಲ್ಲ. ಅಂದಿನ ವಿಚಾರ ಮಾತ್ರವೇ ಇರುತ್ತದೆ. ಅವರು ಪದ್ಮ ಪತ್ರದ ಮೇಲಿರುವ ಜಲ ಬಿಂದುವಿನಂತೆ ಬದುಕುವವರು. ಇಂತಹ ಜ್ಞಾನಿಗಳು ಶುಕ್ಲ ಮರಣವನ್ನು ಪಡೆಯುತ್ತಾರೆ. ಇವರು, ನಾನು ಏನೂ ಮಾಡಲಿಲ್ಲ, ಎಲ್ಲಾ ದೈವ ಪ್ರೇರಣೆಯಂತೆ ನನ್ನ ಮೂಲಕ ದೇವರು ಮಾಡಿಸಿರಬಹುದು, ನಾನು ಕೇವಲ ನಿಮಿತ್ತ ಮಾತ್ರ ಎಂದು ಯೋಚಿಸುವವರು.
ಇಂತವರಿಗೆ ಮೋಕ್ಷ ಲಭಿಸುತ್ತದೆ. ಇಂತವರಿಗೆ ಮರು ಹುಟ್ಟಿಲ್ಲ. ಜ್ಞಾನಿಯ ಬಳಿಗೆ ದುಃಖ ಸುಳಿಯದು. ದುಃಖ ರಹಿತನಿಗೆ ಶುಕ್ಲ ರೂಪದ ಮರಣವೂ ಮೋಕ್ಷವೂ ಲಭ್ಯವಾಗುತ್ತದೆಯಂತೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559