ಮಧ್ಯಪ್ರದೇಶ: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಂತ ವ್ಯಕ್ತಿಗೆ ಎಷ್ಟೇ ಎಚ್ಚರಿಕೆ ನೀಡಿದರೂ, ತನ್ನ ಚಾಳಿಯನ್ನು ಮುಂದುವರೆಸಿದ್ದನು. ಈ ಸಿಟ್ಟಿನಿಂದ ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಂತ ಬಾಯ್ ಫ್ರೆಂಡ್ ಜನನಾಂಗವನ್ನೇ ಕತ್ತರಿಸಿ ಠಾಣೆಗೆ ತಂದಂತ ಪತಿಯೊಬ್ಬ, ಪೊಲೀಸರ ಮುಂದೆ ಶರಣಾಗಿದ್ದಾನೆ.
ಮಧ್ಯಪ್ರದೇಶದ ಇಂದೋರ್ ನ ದೆಹರಿ ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ. ಈಶ್ವರ್ ಸಿಂಗ್ ಎಂಬಾತ ಕಾಲು ಸಿಂಗ್ ಎಂಬುವರ ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನು. ಈ ಕಾರಣಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿ, ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೇ ಇದಕ್ಕೂ ಡೋಂಟ್ ಕೇರ್ ಎನ್ನುವಂತೆ ಕಾಲು ಸಿಂಗ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಮುಂದುವರೆಸಿದ್ದನು.
ಇಂದು ಕಾಲು ಸಿಂಗ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಈಶ್ವರ್ ಸಿಂಗ್ ಹಿಡಿದು, ಆತನ ಜನನಾಂಗವನ್ನೇ ಕತ್ತರಿಸಿದ್ದಾನೆ. ಕತ್ತರಿಸಿದಂತ ಜನನಾಂಗದೊಂದಿಗೆ ಬರೋಡ್ ಪೊಲೀಸ್ ಠಾಣೆಗೆ ತೆರಳಿ ಕಾಲು ಸಿಂಗ್ ಪೊಲೀಸರ ಮುಂದೆ ಶರಣಾಗಿದ್ದಾನೆ.
ಇನ್ನೂ ಜನನಾಂಗ ಕತ್ತರಿಸಿದ್ದರಿಂದ ಗಾಯಗೊಂಡಿದ್ದಂತ ಈಶ್ವರ್ ಸಿಂಗ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬರೋಡ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದು ಅತಿರೇಖದ ವರ್ತನೆ: ಸಚಿವ ದಿನೇಶ್ ಗುಂಡೂರಾವ್ ಖಂಡನೆ
Online Scam: ನಕಲಿ ವೆಬ್ಸೈಟ್ ಲಿಂಕ್ ಗಳ ಬಗ್ಗೆ ಜಾಗರೂಕರಾಗಿರಲು ಪ್ರವಾಸಿಗರಿಗೆ ಕೇಂದ್ರ ಸರ್ಕಾರ ಸೂಚನೆ