ಚಾಮರಾಜನಗರ: ತಲೆಯಲ್ಲಿ ಕೂದಲಿಲ್ಲ. ಹೊರಗೆ ತಲೆಯಲ್ಲಿ ಕೂದಲಿಲ್ಲದ ಗಂಡನ ಜೊತೆಗೆ ಹೋದ್ರೆ ನಾಚಿಕೆ ಆಗುತ್ತೆ ಎಂಬುದಾಗಿ ಕಿರುಕುಳ ನೀಡುತ್ತಿದ್ದಂತ ಪತ್ನಿಯ ಕಾಟಕ್ಕೆ ಬೇಸತ್ತು, ಪತಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ.
ಚಾಮರಾಜನಗರ ಉಡಿಗಾಲದ ಪರಶಿವಮೂರ್ತಿ(32) ಎಂಬುವರೇ ಪತ್ನಿಯ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವಂತ ವ್ಯಕ್ತಿಯಾಗಿದ್ದಾರೆ.
2 ವರ್ಷಗಳ ಹಿಂದೆ ಪರಶಿವಮೂರ್ತಿ ಅವರು ಕೆಳಕಿಪುರದ ಮಮತಾ ಎಂಬುವರೊಂದಿಗೆ ವಿವಾಹವಾಗಿದ್ದರು. ಪರಶಿವಮೂರ್ತಿಯ ತಲೆ ಕೂದಲು ಮದುವೆ ನಂತ್ರ ಉದುರಿತ್ತು. ಇದರಿಂದಾಗಿ ಪತ್ನಿ ಮಮತಾ ದಿನಾಲೂ ತಲೆಯಲ್ಲಿ ಕೂದಲಿಲ್ಲ ಎಂಬುದಾಗಿ ಕಿರುಕುಳ ನೀಡುತ್ತಿದ್ದಳಂತೆ.
ಇನ್ನೂ ತಲೆಯಲ್ಲಿ ಕೂದಲಿಲ್ಲದ ಪರಶಿವಮೂರ್ತಿಯನ್ನು ಗಂಡ ಅನ್ನುವುದಕ್ಕೂ ಅವಮಾನ ಆಗುತ್ತದೆ. ಹೊರಗೆ ಹೋಗೋದಕ್ಕೂ ನನಗೆ ನಾಚಿಕೆ ಆಗುತ್ತದೆ ಎಂಬುದಾಗಿ ಅಪಹಾಸ್ಯ ಮಾಡುತ್ತಿದ್ದಳಂತೆ.
ಇದಲ್ಲದೇ ತಾಳಿಯನ್ನು ತೆಗೆದಿಟ್ಟಿರುವಂತ ಪೋಟೋವನ್ನು ವಾಟ್ಸ್ ಆಪ್ ಸ್ಟೇಟಸ್ ಹಾಕಿದ್ದಳಂತೆ. ಈ ವಿಚಾರಕ್ಕಾಗಿ ಪರಶಿವಮೂರ್ತಿ ಹಾಗೂ ಮಮತಾ ನಡುವೆ ಜಗಳ ಕೂಡ ಆಗಿತ್ತಂತೆ.
ಇದಷ್ಟೇ ಅಲ್ಲದೇ ಪರಶಿವಮೂರ್ತಿ ವಿರುದ್ಧ ಮಮತಾ ವರದಕ್ಷಿಣೆ ಕೇಸ್ ಹಾಕಿದ್ದಳಂತೆ. ಹೀಗಾಗಿ ಈ ಎಲ್ಲಾ ವಿಚಾರಕ್ಕೆ ಬೇಸತ್ತು ಪರಶಿವಮೂರ್ತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಿಡದಿಯ ಟೊಯೋಟೋ ಕಂಪನಿಯಲ್ಲಿ ಪಾಕ್ ಪರ ಬರಹ, ಕನ್ನಡಿಗರ ವಿರುದ್ಧವೂ ಅವಹೇಳನಕಾರಿ ಪದ ಬಳಕೆ
ಹೋಳಿ ಪಾರ್ಟಿಯಲ್ಲಿ ಕುಡಿದ ಮತ್ತಿನಲ್ಲಿ ಸಹನಟನಿಂದ ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ: ದೂರು ದಾಖಲು