ಬೆಂಗಳೂರು: ಪತ್ನಿಯೊಬ್ಬರು ಪತಿಯ ವಿರುದ್ಧ ಕೇಸ್ ಹಾಕಿದ ಕಾರಣಕ್ಕೆ ಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಮಾರತಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರಿನ ಮಾರತಹಳ್ಳಿಯ ನಿವಾಸಿಯಾಗಿದ್ದಂತ ಮಂಜುನಾಥ್ ಎಂಬುವರೇ ಆತ್ಮಹತ್ಯೆಗೆ ಶರಣಾದಂತ ವ್ಯಕ್ತಿಯಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ 40 ಪುಟಗಳ ಡೆತ್ ನೋಟ್ ಕೂಡ ಬರೆದಿಟ್ಟಿದ್ದಾರೆ. ಅಲ್ಲದೇ ಮನೆಯ ಭಾಗಿಲು, ಬೀರುವಿಗೆಲ್ಲ ಏನು ಮಾಡಬೇಕು. ಏನು ಕೆಲಸ ಬಾಕಿ ಇದೆ ಎಂಬುದನ್ನು ಬರೆದು ಅಂಟಿಸಿದ್ದಾರೆ.
ಇದಷ್ಟೇ ಅಲ್ಲದೇ ತಾನಿರುವಂತ ಎನ್ ಜಿ ಓ ಗ್ರೂಪಿಗೆ ತನ್ನ ಡೆತ್ ನೋಟ್ ಹಾಕಿರುವಂತ ಮಂಜುನಾಥ್, ತನ್ನ ಕುಟುಂಬಕ್ಕೆ ಸಹಾಯ ಮಾಡುವಂತೆ ಅದರಲ್ಲಿ ಕೋರಿದ್ದಾರೆ.
ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿರುವಂತ ವಿಷಯ ತಿಳಿದು ಸ್ಥಳಕ್ಕೆ ಮಾರತಹಳ್ಳಿ ಠಾಣೆಯ ಪೊಲೀಸರು ಆಗಮಿಸಿ, ಮನೆಯ ಭಾಗಿಲು ಹೊಡೆದು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
BREAKING: ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಪ್ರಮಾಣೀಕರಣ ಪರೀಕ್ಷೆ ಯಶಸ್ವಿ