ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೊಂದು ಪತ್ನಿ ಕಿರುಕುಳಕ್ಕೆ ಆತ್ಮಹತ್ಯೆ ಕೇಸ್ ಎನ್ನುವಂತೆ ಪತ್ನಿಯ ಕಿರುಕುಳ ತಾಳಲಾರದೇ ಪತಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ಪೀಟಲ್ ಎಂಬಾತನೇ ಪತ್ನಿ ಕಿರುಕುಳ ತಾಳಲಾರದೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.
ಕೆಲ ದಿನಗಳಿಂದ ಪೀಟರ್ ಹಾಗೂ ಪತ್ನಿ ಪಿಂಕಿ ನಡುವೆ ಜಗಳ ಆಗಿತ್ತು. ಇದರಿಂದ ಬೇಸತ್ತು ಪೀಟರ್ ಡೆತ್ ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡೆತ್ ನೋಟ್ ನಲ್ಲಿ ಪತ್ನಿ ಪಿಂಕಿ ಟಾರ್ಟರ್ ನಿಂದ ನಾನು ಸಾಯುತ್ತಾ ಇದ್ದೇನೆ. ಡ್ಯಾಡಿ ಆಯಾಮ್ ಸಾರಿ. ಪಿಂಕಿ ಇಸ್ ಕಿಲ್ಲಿಂಗ್ ಮೀ, ಸೀ ವಾಂಟ್ ಮೈ ಡೆತ್ ಎಂಬುದಾಗಿ ಬರೆಯಲಾಗಿದೆ. ಈ ಸಂಬಂಧ ಹುಬ್ಬಳ್ಳಿಯ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIG UPDATE: ಬೆಂಗಳೂರಿನ ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ: 30ಕ್ಕೂ ಹೆಚ್ಚು ಬೈಕ್ ಸುಟ್ಟು ಭಸ್ಮ
SHOCKING : ಹಾಸ್ಟೆಲ್ ನಲ್ಲಿ `ಲೋ ಬಿಪಿ’ಯಿಂದ ಕುಸಿದು ಬಿದ್ದು 8 ನೇ ತರಗತಿ ವಿದ್ಯಾರ್ಥಿ ಸಾವು.!